More

    ಅತಿಯಾದ ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥ

    ಧಾರವಾಡ: ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಬಳಸುತ್ತ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅಭ್ಯಾಸಕ್ಕಾಗಿ ಮಿತವಾಗಿ ಬಳಸಿದರೆ ಪ್ರಯೋಜನವಾಗುತ್ತದೆ ಎಂದು ಬೆಳಗಾವಿ ವಿಭಾಗದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಸವಪ್ರಭು ಹಿರೇಮಠ ಹೇಳಿದರು.
    ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಘಟಿಕೋತ್ಸವ ಮತ್ತು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ದೇಶದಲ್ಲಿ ೬೮ ಕೋಟಿ ಯುವಕರಿದ್ದು, ಶ್ರದ್ಧ್ದೆಯಿಂದ ದೇಶಕ್ಕಾಗಿ ದುಡಿದರೆ ಭಾರತ ವಿಜ್ಞಾನ ಮತ್ತು ಆರ್ಥಿಕತೆಯಲ್ಲಿ ಅಗ್ರಸ್ಥಾನ ತಲುಪಲಿದೆ. ಕೈಗಾರಿಕಾ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಬೇಡಿಕೆ ಇದೆ. ಜೊತೆಗೆ ಸ್ವಂತ ಉದ್ಯೋಗ ಕೈಗೊಳ್ಳಬಹುದು. ಕೌಶಲ್ಯ ಅಭಿವೃದ್ಧಿ ಇಲಾಖೆಯ ಕನೆಕ್ಟ್ ಒನ್ ಆ್ಯಪ್ ಇದ್ದು, ಅದರಲ್ಲಿ ಕೌಶಲ ಹೊಂದಿದವರಿಗೆ ಸುಮಾರು ೨೫,೦೦೦ ಹುದ್ದೆಗಳು ಲಭ್ಯ ಇವೆ ಎಂದರು.
    ಪ್ರಾಚಾರ್ಯ ಎಸ್.ಎಂ. ಬಮ್ಮನಗೌಡರ ಸ್ವಾಗತಿಸಿದರು. ಕಚೇರಿ ಅಽÃಕ್ಷಕ ಶಿವಲಿಂಗ ನೀಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಫ್. ಪುರುದನ್ನವರ ಪ್ರಾರ್ಥಿಸಿದರು. ಕಿರಿಯ ತರಬೇತಿ ಅಽಕಾರಿ ವಿ.ಎನ್. ಚಾಕಲಬ್ಬಿ ನಿರ್ವಹಿಸಿದರು. ಎಸ್.ವಿ. ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts