More

    ಹೆಚ್ಚುವರಿ ಕರ ವಸೂಲಿ ಖಂಡಿಸಿ ಪ್ರತಿಭಟನೆ

    ಬೆಳಗಾವಿ: ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಹೆಚ್ಚಳ ಮತ್ತು ಕಸ ವಿಲೇವಾರಿಗೆ ಪ್ರತ್ಯೇಕ ಹೆಚ್ಚುವರಿ ಕರ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಪಾಲಿಕೆಯ ಮಾಜಿ ನಗರ ಸೇವಕರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಲಾಕ್‌ಡೌನ್ ಸಂಕಷ್ಟದ ಮಧ್ಯೆ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಿ ಮತ್ತು ಹೆಚ್ಚುವರಿ ಕರ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲ ಪಾಲಿಕೆಗಳ ಪೈಕಿ 10 ಪಾಲಿಕೆಗಳಲ್ಲಿ ಎಲ್ಲಿಯೂ ಕಸ ವಿಲೇವಾರಿ ತೆರಿಗೆ ಇಲ್ಲ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿಯಾಗಿ ಕಸ ವಿಲೇವಾರಿ ತೆರಿಗೆ ವಿಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೆಚ್ಚುವರಿ ಕರ ಹೇರಿಕೆ ಕೈ ಬಿಡಬೇಕು. 3 ದಿನಗಳೊಳಗೆ ಕರ ಹೇರಿಕೆ ಕೈಬಿಡದಿದ್ದರೆ ಆಯುಕ್ತರ ಮನೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಮಾಜಿ ಮೇಯರ್ ನಾಗೇಶ ಸಾತೇರಿ ಮಾತನಾಡಿ, ಲಾಕ್‌ಡೌನ್ ಸಂಕಷ್ಟದಲ್ಲಿ ಸರ್ಕಾರ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಜನರಿಗೆ ಅನ್ಯಾಯ ಮಾಡಿದೆ. ಅದರಲ್ಲೂ ಬೆಳಗಾವಿ ಮಹಾನಗರ ಪಾಲಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಸ ವಿಲೇವಾರಿಗೂ ಪ್ರತ್ಯೇಕವಾಗಿ ಕರ ವಿಧಿಸುತ್ತಿದೆ. ಸರ್ಕಾರ ಈ ಕುರಿತು ನಾಗರಿಕರೊಂದಿಗೆ ಚರ್ಚಿಸಬೇಕು. ತೆರಿಗೆ ಹೆಚ್ಚಳ ಕೈ ಬಿಡದಿದ್ದರೆ ಉಪ ಆಯುಕ್ತರ ಮನೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಮಾಜಿ ನಗರ ಸೇವಕರಾದ ದೀಪಕ ವಘೇಲಾ, ಸರಿತಾ ಪಾಟೀಲ, ವಿಜಯ ಮೋರೆ, ಸಂಜಯ ಪ್ರಭು, ಶಿವಾಜಿ ಸುಂಠಕರ, ಸಾದೀಕ್ ಇನಾಮದಾರ್, ಧನರಾಜ್ ಗವಳಿ, ನೇತಾಜಿ ಜಾಧವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts