More

    ಲೈಂಗಿಕ ದೌರ್ಜನ್ಯ ಆರೋಪದಿಂದ ಮುಕ್ತರಾದ ಕ್ರಿಕೆಟಿಗ ಸಂದೀಪ್ ಲಮಿಚಾನೆ!

    ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ವಿಶ್ವದ ವಿವಿಧ ಭಾಗಗಳಲ್ಲಿ ಜನಪ್ರಯತೆ ತಂದುಕೊಂಡಿದ್ದ ನೇಪಾಳದ ಪ್ರತಿಭಾನ್ವಿತ ಲೆಗ್​ ಸ್ಪಿನ್ನರ್‌ ಸಂದೀಪ್‌ ಲಾಮಿಚಾನೆ ಅವರನ್ನು ಕಠ್ಮಂಡು ಜಿಲ್ಲಾ ನ್ಯಾಯಾಲಯವು ನಿರಪರಾಧಿ ಎಂದು ಘೋಷಿಸಿದೆ.

    ಇದನ್ನೂ ಓದಿ: Sikandar: ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ಕೂರ್ಗ್ ಬೆಡಗಿ ರಶ್ಮಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

    ಇದಕ್ಕೂ ಮುನ್ನ ಯುವ ಕ್ರಿಕೆಟಿಗನಿಗೆ ಲೈಂಗಿಕ ದೌರ್ಜನ್ಯದ ಆರೋಪದಡಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷಗಳ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲ್ಲೇರಿದ್ದ ಸಂದೀಪ್ ಲಮಿಚಾನೆ ಇದೀಗ ದೋಷಮುಕ್ತರಾಗಿದ್ದಾರೆ.

    ಮಂಗಳವಾರ ಮತ್ತು ಬುಧವಾರ (ಮೇ 14 ಮತ್ತು 15) ನಡೆದ ಕೋರ್ಟ್ ಕಲಾಪದ ನಂತರ, ನ್ಯಾಯಾಲಯವು ನೇಪಾಳ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ ಅವರ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೆ ಹೈಕೋರ್ಟ್ ನ್ಯಾಯಾಧೀಶರಾದ ಸುದರ್ಶನ್ ದೇವ್ ಭಟ್ಟ ಮತ್ತು ಅಂಜು ಉಪೇತ್ರಿ ಅವರು ಲಮಿಚಾನೆ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಇದರೊಂದಿಗೆ ಸಂದೀಪ್ ಲಮಿಚಾನೆ ಅತ್ಯಾಚಾರದ ಆರೋಪದಿಂದ ಬಂಧಮುಕ್ತರಾಗಿದ್ದಾರೆ.

    ಲೈಂಗಿಕ ದೌರ್ಜನ್ಯ ಆರೋಪದಿಂದ ಮುಕ್ತರಾದ ಕ್ರಿಕೆಟಿಗ ಸಂದೀಪ್ ಲಮಿಚಾನೆ!

    ಕ್ರಿಕೆಟಿಗ ಲಮಿಚಾನೆ ಪರವಾಗಿ ಹಿರಿಯ ವಕೀಲರಾದ ರಾಮ್ ನಾರಾಯಣ ಬಿದರಿ, ರಾಮನ್ ಶ್ರೇಷ್ಠ, ಶಂಬು ಥಾಪಾ, ಮುರಾರಿ ಸಪ್ಕೋಟ ಮತ್ತು ಕೃಷ್ಣ ಸಪ್ಕೋಟ ತಮ್ಮ ವಾದವನ್ನು ಮಂಡಿಸಿದರು.

    ಏನಿದು ಪ್ರಕರಣ ?:  ವಿಶ್ವದ ವಿವಿಧ ಭಾಗಗಳಲ್ಲಿ ನೇಪಾಳದ ಕ್ರಿಕೆಟ್‌ಗೆ ಜನಪ್ರಯತೆ ತಂದುಕೊಂಡಿದ್ದ ಪ್ರತಿಭಾನ್ವಿತ ಸ್ಪಿನ್ನರ್‌ ಸಂದೀಪ್‌ ಲಾಮಿಚಾನೆ 8 ವರ್ಷಗಳ ಜೈಲು ವಾಸದ ಕಠಿಣ ಶಿಕ್ಷೆಗೆ ಗುರಿಯಾಗಿದ್ದ. ನೇಪಾಳ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಕೂಡ ಆಗಿದ್ದ 24 ವರ್ಷದ ಪ್ರತಿಭಾವಂತ ಸ್ಪಿನ್ನರ್‌, 17 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ 2023ರ ಅಕ್ಟೋಬರ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು.  ಇದೀಗ 2024ರ ಜನವರಿ 10ರಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 8 ವರ್ಷಗಳ ಜೈಲುವಾಸದ ಕಠಿಣ ಶಿಕ್ಷೆ ವಿಧಿಸಿತ್ತು.

    2022ರ ಆಗಸ್ಟ್‌ನಲ್ಲಿ ಕಠ್ಮಂಡುವಿನ ಹೋಟೆಲ್‌ ಒಂದರಲ್ಲಿ ತಮ್ಮನ್ನು ಸಂದೀಪ್‌ ಲಾಮಿಚಾನೆ ಅತ್ಯಾಚಾರ ಮಾಡಿದ್ದಾರೆ ಎಂದು 17 ವರ್ಷದ ಯುವತಿಯೊಬ್ಬರು ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ 2023ರ ಜನವರಿಯಲ್ಲಿ ಜಾಮೀನಿನ ಮೇಲೆ ಸಂದೀಪ್‌ ಬಿಡುಗಡೆ ಆಗಿದ್ದರು ಕೂಡ. ಆದರೆ, 2023ರ ಡಿಸೆಂಬರ್‌ನಲ್ಲಿ ಅವರ ವಿರುದ್ಧದ ಆರೋಪಗಳು ನಿಜ ಎಂದು ಸಾಬೀತಾಗಿದ್ದವು.

    ಟಿ20 ವಿಶ್ವಕಪ್​ಗೆ ಸಂದೀಪ್‌ ಲಾಮಿಚಾನೆ ಆಯ್ಕೆ ಖಚಿತ?: ನಿರಪರಾಧಿ ಎಂದು ಸಾಬೀತಾದ ನಂತರ ಸಂದೀಪ್ ಇದೀಗ ಟಿ20 ವಿಶ್ವಕಪ್ ತಂಡಕ್ಕೆ ಲಭ್ಯವಾಗಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ನೇಪಾಳವು ಈಗಾಗಲೇ ರೋಹಿತ್ ಪೌಡೆಲ್ ನೇತೃತ್ವದ 15 ಆಟಗಾರರ ತಂಡವನ್ನು ಘೋಷಿಸಿದೆ. ಆದರೆ ಮೇ 25 ರವರೆಗೆ ತಂಡಗಳಿಗೆ ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಅವಕಾಶ ನೀಡುವ ಐಸಿಸಿ ನಿಯಮದೊಂದಿಗೆ ಲಾಮಿಚಾನೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನೇಪಾಳ ತಂಡವನ್ನು ಪ್ರತಿನಿಧಿಸಿರುವ ಸಂದೀಪ್ 52 T20I ಪಂದ್ಯಗಳಲ್ಲಿ ಆಡಿದ್ದಾರೆ. ಹಾಗೂ 98 ವಿಕೆಟ್‌ಗಳನ್ನು ಪಡೆದಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆಯಡಿ 14 ಜನರಿಗೆ ಪ್ರಮಾಣಪತ್ರ ಹಸ್ತಾಂತರಿಸಿದ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts