More

    ಹಿಂದುತ್ವ, ಹಿಂದ, ಅಹಿಂದ ಎಲ್ಲ ದೊಂಬರಾಟ: ಎಲ್ರೂ ಸುಮ್ನೆ ರಾಜಕೀಯಕ್ಕೆ ಮಾತಾಡ್ತಾರೆ; ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ

    ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ವಿಚಾರವಾಗಿ ಕೆಲವೇ ದಿನಗಳ ಹಿಂದೆ ಲಘುವಾಗಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಇದೀಗ ಹಿಂದುತ್ವ ವಿಚಾರವಾಗಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮೈಸೂರು ಪಾಲಿಕೆ ಮೈತ್ರಿ ಇಡೀ ರಾಜ್ಯಕ್ಕೆ ಸಂದೇಶ ಕೊಡುತ್ತದೆ. ಮುಂದಿನ 2023ಕ್ಕೆ ಜೆಡಿಎಸ್‌ ನಿಲುವು ಏನೆಂದು ಚಾಮುಂಡೇಶ್ವರಿ ಸನ್ನಿಧಿಯಿಂದಲೇ‌ ರವಾನೆ ಆಗುತ್ತದೆ ಎಂದು ಅವರು ಮೈಸೂರಿನಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಹಿಂದುತ್ವದ ವಿಚಾರವಾಗಿಯೂ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.

    ಹಿಂದುತ್ವ, ಹಿಂದ, ಅಹಿಂದ ಎಲ್ಲ ದೊಂಬರಾಟ. ಇವೆಲ್ಲ ಅಧಿಕಾರ ಪಡೆಯಲಿಕ್ಕಷ್ಟೇ ಹೊರತು ಜನಪರ‌ ಕಾಳಜಿ‌ಗೆ ಅಲ್ಲ. ನಾವು ಇವೆಲ್ಲ ಬಿಟ್ಟು ನೆಲ-ಜಲ, ರೈತರ ಪರ ಹೋರಾಟ ಮಾಡುತ್ತೇವೆ ಎಂಬುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೆ ಎಲ್ಲಿದೆ ಸೆಕ್ಯುಲರಿಸಂ, ಎಲ್ಲಿದೆ ಹಿಂದುತ್ವ? ಈಗ ಅಹಿಂದ ಅಂತಿದ್ದಾರಲ್ಲ, ಅದರಲ್ಲಿ‌ ಸೆಕ್ಯುಲರಿಸಂ ಇದೆಯಾ? ಹಿಂದುತ್ವದ ಬಗ್ಗೆ ಮಾತನಾಡುವವರು ಹೃದಯದಲ್ಲಿ ಹಿಂದುತ್ವ ಇಟ್ಟುಕೊಂಡಿದ್ದಾರಾ? ಎಂದು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ಇದನ್ನೂ ಓದಿ: ಕಬಡ್ಡಿ ಆಟಗಾತಿಯ ತಲೆಗೂದಲನ್ನೇ ಕತ್ತರಿಸಿದ್ರು, ಅವಳ ತಾಯಿ ಮೇಲೂ ಹಲ್ಲೆ ನಡೆಸಿದ್ರು; ಇದು ‘ಗಂಡ-ಹೆಂಡತಿ ಮತ್ತು ಅವನು’ ಕಥೆ…

    ಹಿಂದುತ್ವ ಕಾಪಾಡುತ್ತಿದ್ದೇವೆ ಎನ್ನುವವರು ಅದನ್ನು ಆಚರಣೆ ಮಾಡುತ್ತಿದ್ದಾರಾ? ಸೆಕ್ಯುಲರಿಸಂ ಮಾತನಾಡುವವರು ಅದನ್ನು ಪಾಲಿಸುತ್ತಿದ್ದಾರಾ? ಎಲ್ಲರೂ ಸುಮ್ಮನೆ ರಾಜಕೀಯಕ್ಕೆ ಮಾತನಾಡುತ್ತಾರೆ. ಆದ್ರೆ ಯಾರೂ ಈ ಬಗ್ಗೆ ಪ್ರಾಮಾಣಿಕತೆ ಇಟ್ಟುಕೊಂಡಿಲ್ಲ ಎಂದು ಎಚ್​ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕೆಜಿಎಫ್ ಚಾಪ್ಟರ್ 2 ಡೈಲಾಗ್ ಹೊಡೆದ ವೀರೆಂದ್ರ ಸೆಹ್ವಾಗ್

    ಮೊಮ್ಮಗನಿಗೆ ಊಟ ಕೊಡಿಸಿದ ಮೊತ್ತ ₹200; ಪಾರ್ಕಿಂಗ್​ಗೆ ದಂಡ ತೆತ್ತದ್ದು ಒಂದುಮುಕ್ಕಾಲು ಲಕ್ಷ ರೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts