More

    ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅವಶ್ಯ

    ವಿಜಯಪುರ: ಪ್ರತಿಯೊಬ್ಬರಿಗೂ ಕಾನೂನು ಅರಿವು ಅವಶ್ಯ. ಕಾನೂನು ಇಲ್ಲದ ಸಮಾಜವೇ ಇಲ್ಲ. ಬೇರೆ ಬೇರೆ ರಾಜ್ಯ, ಪ್ರದೇಶಗಳಲ್ಲಿ ನಿಯಮಗಳು ಬೇರೆಯಾಗಿದ್ದರೂ ಕಾನೂನು ಮಾತ್ರ ಒಂದೇ ಆಗಿರುತ್ತದೆ ಎಂದು ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸರಸ್ವತಿ ವೈದ್ಯನಾಥನ್ ಹೇಳಿದರು.

    ಇಲ್ಲಿನ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ದಯಾನಂದಸಾಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಉತ್ತಮ ಭವಿಷ್ಯಕ್ಕೆ ಕಾನೂನಿನ ಅವಶ್ಯಕತೆ’ ಎಂಬ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಂತ್ರಿಕತೆಯಲ್ಲಿ ಕಾನೂನುಗಳ ಬಳಕೆಯಾಗುತ್ತದೆ. ಸಮಾಜದ ಸ್ವಾಸ್ಥೃ ಮತ್ತು ವ್ಯಕ್ತಿಯ ರಕ್ಷಣೆಯಲ್ಲಿ ಕಾನೂನಿನ ಪಾತ್ರ ಮುಖ್ಯವಾಗಿದೆ ಎಂದರು

    ದಯಾನಂದ ಸಾಗರ ವಿಶ್ವವಿದ್ಯಾಲಯದ ಸಂಯೋಜಕಿ ಪಲ್ಲವಿ ಮಾತನಾಡಿ, ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಅದನ್ನು ಶ್ರದ್ಧೆಯಿಂದ ಮಾಡಬೇಕು. ಕಲಿಕೆ ನಿರಂತರವಾಗಿರಬೇಕು. ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

    ಪ್ರಾಚಾರ್ಯ ಎಸ್.ಜಿ.ರೊಡಗಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಕಾನೂನಿನ ಜ್ಞಾನ ಅತ್ಯವಶ್ಯಕ, ಕಾರ್ಮಿಕ ಕಾನೂನು, ಗ್ರಾಹಕ ಕಾನೂನು, ಅಪರಾಧ ಕಾನೂನು ಹೀಗೆ ಬೇರೆ ಬೇರೆ ಕಾನೂನುಗಳ ಬಗ್ಗೆ ತಿಳಿವಳಿಕೆ ಇರಬೇಕು ಎಂದು ತಿಳಿಸಿದರು.

    ಎಂ.ಎಚ್.ಬಗಲಿ, ಪ್ರೊ.ಪಿ.ಎಸ್.ತೋಳನೂರ, ಚಿದಾನಂದ ಬ್ಯಾಹಟ್ಟಿ, ಎ.ಎಂ.ತುಪ್ಪದ, ಎಸ್.ಎಸ್.ತುಂಗಳ, ಕೆ.ಐ,ಹಿರೇಮಠ, ಮಹಾನಂದ ಪಾಟೀಲ,ಭಕ್ತಿ ಮಹೇಂದ್ರಕರ, ಎಸ್.ಪಿ.ಕನ್ನೂರ, ರಶ್ಮಿ ಕುಮಟಗಿ, ಭಾರತಿ ಮಠ, ಐಶ್ವರ್ಯ ಮಿರಜಕರ ಹಾಗೂ ಸಿಬ್ಬಂದಿ ವರ್ಗ, ಇನ್ನಿತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts