More

    ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡಲು ಮುಂದಾಗಿ

    ಸಿಂಧನೂರು: ಗಿಡ, ಮರಗಳನ್ನು ಬೆಳಸಿ ಪರಿಸರ ರಕ್ಷಣೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ನೇತ್ರ ತಜ್ಞ ಡಾ.ಚನ್ನನಗೌಡ ಪಾಟೀಲ್ ಹೇಳಿದರು.


    ತಾಲೂಕಿನ ಗುಂಜಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಶನಿವಾರ ವನಸಿರಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ವನ ಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


    ಸಿಂಧನೂರಿನ ರಸ್ತೆಯ ಅಕ್ಕ ಪಕ್ಕದಲ್ಲಿ ಗಿಡ,ಮರಗಳ ಉಳಿವಿಗಾಗಿ ಶ್ರಮಿಸಿದ ವನಸಿರಿ ಫೌಂಡೆಷನ್ ಕಾರ್ಯ ಶ್ಲಾಘನೀವಾಗಿದೆ. ಕಡಿದ ಆಲದ ಮರಕ್ಕೆ ಮರುಜನ್ಮ ನೀಡಿ, ಪರಿಸರ ಜಾಗೃತಿ ಮೂಡಿಸಿರುವುದು ಮಾದರಿ ಕಾರ್ಯವಾಗಿದೆ. ವಿದ್ಯಾರ್ಥಿಗಳು ಕಣ್ಣಿನ ಮತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. 8ನೇ ತರಗತಿ ಅಬ್ದುಲ್ ಕಲಾಂ ಎನ್ನುವ ವಿದ್ಯಾರ್ಥಿಗೆ ಒಂದು ಸಸಿಯ ಜವಾಬ್ದಾರಿ ನೀಡಿ ಮುಂದಿನ ಎರಡು ವರ್ಷದಲ್ಲಿ ಈ ಸಸಿಯನ್ನು ಬೆಳಸಿ ಪೋಷಣೆ ಮಾಡಿದರೆ 12ನೇ ತರಗತಿಯವರೆಗೆ ಓದಲು ಬೇಕಾದ ಎಲ್ಲ ಸೌಲಭ್ಯಗಳನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

    ಇದನ್ನೂ ಓದಿ:ಪರಿಸರ ರಕ್ಷಣೆಯಿಂದ ಮಾತ್ರ ಮಾನವ ಕುಲಕ್ಕೆ ಉಳಿಗಾಲ
    ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಅಮರೇಗೌಡ ಮಲ್ಲಾಪೂರ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕುದನ್‌ಸಾಬ್, ಮುಖ್ಯ ಶಿಕ್ಷಕ ನಾಗಪ್ಪ, ಫೌಂಡೇಶನ್ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ.ಹೊಸಹಳ್ಳಿ, ಮಸ್ಕಿ ತಾಲೂಕ ಅಧ್ಯಕ್ಷ ರಾಜು ಬಳಗಾನೂರ, ನಜೀರ್ ಅಹ್ಮದ್, ಬಸವರಾಜ, ಮಹಾಂತೇಶ, ರಜಿನಿ, ಈರಮ್ಮ, ಅಯ್ಯನಗೌಡ, ರಮೇಶ ಕೆ. ಹೊಸಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts