More

    ಪ್ರತಿಯೊಬ್ಬರೂ ಡೆಂಘೆ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡಿ

    ಮಾನ್ವಿ:ಡೆಂಘೆ ನಿಯಂತ್ರಣಕ್ಕೆ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಕಾಪಾಡಬೇಕು ಎಂದು ತಾಲೂಕ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ ಹೇಳಿದರು.


    ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಿಷನ್ ಇಂದ್ರ ಧನುಷ್ ಕಾರ್ಯಕ್ರಮ ಹಾಗೂ ಡೆಂೆ ತಡೆ ಕುರಿತು ತಾಲೂಕ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದರು.

    ಇದನ್ನೂ ಓದಿ:ಡೆಂಘೆ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿರಿ


    ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಣ ಕೆಮ್ಮು, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೈಟಿಸ್ ಬಿ, ಧನುರ್ವಾಯು ಮತ್ತು ಕ್ಷಯ ರೋಗದಿಂದ ರಕ್ಷಿಸಲು ಲಸಿಕೆ ಹಾಕಿಸಬೇಕು. ತಾಲೂಕಿನಲ್ಲಿ ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಲು ಆರೋಗ್ಯ ಇಲಾಖೆ ಆ. 7 ರಿಂದ 12 ಹಾಗೂ ಸೆ. 11 ರಿಂದ 16 ಮತ್ತು ಅ. 9 ರಿಂದ 14 ರವರೆಗೆ 3 ತಿಂಗಳ ಕಾಲ ಸಮೀಕ್ಷೆ ನಡೆಸಿ ಮಿಷನ್ ಇಂದ್ರಧನುಷ್ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮಳೆಗಾಲ ಪ್ರಾರಂಭವಾಗಿರುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಡೆಂೆ ಜ್ವರ ಹರಡುವ ಸಾಧ್ಯತೆ ಇದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುವುದು ಎಂದರು.


    ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಮಾತನಾಡಿ, ಎಲ್ಲ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಿದಲ್ಲಿ ತಾಲೂಕನ್ನು ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಿಸಬಹುದು ಎಂದರು. ಡಾ. ಶ್ರೀಧರ ಇಲ್ಲೂರು, ಡಾ. ಸುಧಾಕರರೆಡ್ಡಿ, ಡಾ.ಅಂಬಿಕಾ ಮಧುಸೂದನ್, ಡಾ.ರಾಜೇಂದ್ರ, ಡಾ.ಚಂದ್ರಶೇಖರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ, ಬಾಬು ಚಿನ್ನು, ಆಶಾ ಮೇಲ್ಪಿಚಾರಕಿ ಮರಿಯಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ಚೈತ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts