More

    ಕರೊನಾ ಬಂದು ಹೋಯ್ತು, ನನ್​ ಲೈಫ್ ಇನ್ನು ಆರಾಮ ಎನ್ನುವಂತಿಲ್ಲ!

    ನವದೆಹಲಿ: ಕರೊನಾ ವೈರಾಣು ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ದಿನವೂ ಸಾವಿರಾರು ಜನರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ. ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿರುವ ಇವರೆಲ್ಲರೂ ಎಂದಿನಂತೆ ಆರೋಗ್ಯವಂತ ಜೀವನ ಸಾಗಿಸುತ್ತಿದ್ದಾರೆ ಎಂದೇ ನಾವೆಲ್ಲರೂ ಭಾವಿಸಿರುತ್ತೇವೆ. ಆದರೆ, ವಾಸ್ತವದಲ್ಲಿ ಹಾಗಿರುವುದಿಲ್ಲ! ಏಕೆಂದರೆ, ಕರೊನಾ ಗೆದ್ದಾದ ನಂತರ ಶೇ.13 ಜನರು ಮಾತ್ರ ಹಿಂದಿನಂತೆ ಸಂಪೂರ್ಣ ಆರೋಗ್ಯವಂತ ಜೀವನ ಸಾಗಿಸುತ್ತಾರೆ! ಇನ್ನುಳಿದ ಶೇ.87 ಜನರಲ್ಲಿ ಸುಸ್ತು, ಉಸಿರಾಟದ ಸಮಸ್ಯೆ, ಕೀಲು ನೋವು ಸೇರಿ ನಾನಾ ಬಗೆಯ ಕರೊನಾ ಲಕ್ಷಣಗಳು ಹಲವು ವಾರ, ತಿಂಗಳವರೆಗೆ ಮುಂದುವರಿದಿರುತ್ತವೆ ಎನ್ನಲಾಗಿದೆ. ಅವರು ಸೋಂಕಿನಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಘಾಸಿಗೊಂಡಿರುವುದು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಯಾಪಟ್ಟಿದ್ದಾರೆ.

    ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರನ್ನು ಐದು ವಾರಗಳ ಬಳಿಕ ತಪಾಸಣೆಗೆ ಒಳಪಡಿಸಿದಾಗ ಈ ವಿಷಯ ತಿಳಿದು ಬಂದಿದ್ದಾಗಿ ಇಟಲಿಯ ಸಂಶೋಧಕರು ಜರ್ನಲ್​ ಆಫ್​ ದ ಅಮೆರಿಕನ್​ ಅಸೋಸಿಯೇಷನ್​ನಲ್ಲಿ ಪ್ರಕಟಿಸಿರುವ ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ. ಈ ಅಧ್ಯಯನ ವರದಿಯ ಪ್ರಕಾರ ಸಂಪೂರ್ಣವಾಗಿ ಚೇತರಿಸಿಕೊಂಡವರಲ್ಲಿ ಐದು ವಾರಗಳ ಬಳಿಕವೂ ಸುಸ್ತು, ಸರಾಗ ಉಸಿರಾಟಕ್ಕೆ ತೊಂದರೆಯಂಥ ಸಮಸ್ಯೆಗಳು ಮುಂದುವರಿದಿದ್ದವು ಎನ್ನಲಾಗಿದೆ.

    ಇದನ್ನೂ ಓದಿ: VIDEO| ಬೆಳ್ಳಂಬೆಳಗ್ಗೆಯೇ ರಾಷ್ಟ್ರ ರಾಜಧಾನಿಯಲ್ಲಿ ವರುಣನ ಆರ್ಭಟ: ರಸ್ತೆಗಳು ಜಲಾವೃತ

    ಕರೊನಾ ಸೋಂಕಿನಿಂದ ಗುಣಮುಖರಾಗಿದ್ದ 19ರಿಂದ 84 ವಯೋಮಿತಿಯ 143 ಜನರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡೆವು. ಇದರಲ್ಲಿ 5ನೇ 1 ಭಾಗದಷ್ಟು ಜನರು ವೆಂಟಿಲೇಟರ್​ನಲ್ಲಿ ಇರಿಸಲ್ಪಟ್ಟವರಾಗಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರದಲ್ಲೂ ಶೇ.53 ಜನರು ಸುಸ್ತು ಆಗುತ್ತಿರುವುದಾಗಿಯೂ, ಶೇ.43 ಜನರು ಸರಾಗ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದಾಗಿಯೂ ಹೇಳಿದರು ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

    ಶೇ.27 ಜನರು ಕೀಲು ನೋವು ಅನುಭವಿಸುತ್ತಿದ್ದರೆ, ಶೇ.22 ಜನರು ಎದೆ ನೋವಿನಂಥ ಸಮಸ್ಯೆಯನ್ನೂ ಅನುಭವಿಸುತ್ತಿರುವುದು ಅಧ್ಯಯನದಲ್ಲಿ ಕಂಡುಬಂದಿತು ಎಂದು ಹೇಳಲಾಗಿದೆ. ಒಟ್ಟಾರೆ ಹೇಳುವುದಾದರೆ, ಕರೋನಾ ಗೆದ್ದ ಶೇ.13 ಮಂದಿ ಮಾತ್ರ ಸಂಪೂರ್ಣ ಆರೋಗ್ಯವಂತ ಜೀವನ ಸಾಗಿಸುತ್ತಿದ್ದರೆ ಶೇ.87 ಜನರು ಐದು ವಾರಗಳ ಬಳಿಕವೂ ಕೋವಿಡ್​ನ ಒಂದಿಲ್ಲೊಂದು ಲಕ್ಷಣಗಳಿಂದ ತೊಂದರೆ ಅನುಭವಿಸುತ್ತಿರುವುದು ಕಂಡು ಬಂದಿದ್ದಾಗಿ ಹೇಳಲಾಗಿದೆ.

    ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲವರಿಗೆ ಕೆಲವು ವಾರ ಅಥವಾ ತಿಂಗಳುಗಳೇ ಬೇಕಾಗಬಹುದು. ಇಟಲಿಯಲ್ಲಿ ಕೈಗೊಂಡ ಸಣ್ಣಪ್ರಮಾಣದ ಅಧ್ಯಯನ ಇದಾಗಿದೆ. ಆದರೆ, ವಾಸ್ತವದಲ್ಲಿ ಮೇಲೆ ವಿವರಿಸಿರುವ ಲಕ್ಷಣಗಳ ಜತೆಗೆ ಸಣ್ಣ ಮಟ್ಟದ ಜ್ವರ ಮತ್ತು ಜೂಮು ಹಿಡಿಯುವುದು ಸೇರಿ ನಾನಾ ಬಗೆಯ ನರದೌರ್ಬಲ್ಯದ ಸಮಸ್ಯೆಯಿಂದಲೂ ಜನರು ಬಳಲುವುದು ಕಂಡುಬಂದಿದೆ ಎಂದು ನ್ಯೂಯಾರ್ಕ್​ನ ವೈದ್ಯ ರಾಬರ್ಟ್​ ಗ್ಲಾಟರ್​ ಹೇಳುತ್ತಾರೆ.

    ಇದನ್ನೂ ಓದಿ: ಲಾಕ್​ಡೌನ್ ಸಮಯದಲ್ಲಿ ಹಿತ್ತಲಲ್ಲಿ ಬೆಳೆದ ತರಕಾರಿ ತಿಂದವಳಿಗೆ ಕಾದಿತ್ತು ಬಿಗ್​ ಶಾಕ್​!

    ಕೋವಿಡ್​ನಿಂದ ಚೇತರಿಸಿಕೊಂಡವರಲ್ಲಿ ಹಲವು ತಿಂಗಳವರೆಗೆ ಖಿನ್ನತೆ ಮತ್ತು ಆತಂಕದಂಥ ಮಾನಸಿಕ ಸಮಸ್ಯೆಗಳು ಕೂಡ ಮುಂದುವರಿದಿರುತ್ತವೆ. ಇದರಿಂದಾಗಿ ಕೋವಿಡ್​-19 ಸೋಂಕು ದೈಹಿಕವಾಗಿ ಅಷ್ಟೇ ಅಲ್ಲ, ಭಾವನಾತ್ಮಕವಾಗಿಯೂ ತೊಂದರೆ ಉಂಟು ಮಾಡುತ್ತದೆ ಎಂದು ತಿಳಿಸುತ್ತಾರೆ.

    ಏಕೆ ಹೀಗೆ?: ಕರೊನಾ ವೈರಾಣು ಸೋಂಕು ಗೆದ್ದ ಬಳಿಕವೂ ದೇಹದಲ್ಲಿನ ರೋಗನಿರೋಧಕಶಕ್ತಿ ಇಲ್ಲದ ವೈರಾಣು ಸೋಂಕಿನ ವಿರುದ್ಧ ಹೋರಾಟವನ್ನು ಮುಂದುವರಿಸುತ್ತದೆ. ಇದುವೇ ಸೋಂಕಿನಿಂದ ಗುಣಮುಖರಾಗಿದ್ದರೂ ಸುಸ್ತು, ಸರಾಗ ಉಸಿರಾಟದ ಸಮಸ್ಯೆ ಸೇರಿ ನಾನಾ ಬಗೆಯ ಕೋವಿಡ್​ ಸಮಸ್ಯೆಗಳು ಮುಂದುವರಿಯಲು ಕಾರಣವಾಗಿರಬಹುದು ಎಂಬುದು ಕೆಲ ಸಂಶೋಧಕರ ಅಭಿಪ್ರಾಯವಾಗಿದೆ.

    ಖೇಲ್‌ರತ್ನ ಪ್ರಶಸ್ತಿ ರೇಸ್‌ನಿಂದ ಹಿಂದೆ ಸರಿದ ಹರ್ಭಜನ್ ಸಿಂಗ್, ಕಾರಣವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts