More

    ನೈಟ್​ ಕರ್ಫ್ಯೂ ರದ್ದಾದರೇನಂತೆ, ಇವರಿಗಿನ್ನೂ ಅದೇ ಚಿಂತೆ!

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಮೊನ್ನೆಮೊನ್ನೆ ನೈಟ್​ ಕರ್ಫ್ಯೂ ಜಾರಿಗೊಳಿಸುವ ಕುರಿತು ಘೋಷಿಸುತ್ತಿದ್ದಂತೆ ಹಲವರು ಚಿಂತಾಕ್ರಾಂತರಾಗಿದ್ದರು. ಮಾತ್ರವಲ್ಲ, ಸಾರ್ವಜನಿಕರಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ನೈಟ್​ ಕರ್ಫ್ಯೂ ಜಾರಿಗೂ ಮುನ್ನವೇ ಮುಖ್ಯಮಂತ್ರಿ ಆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಹೀಗೆ ನೈಟ್​​ ಕರ್ಫ್ಯೂ ಜಾರಿ ನಿರ್ಧಾರದಿಂದ ಹಿಂದೆ ಸರಿದಿದ್ದಕ್ಕೆ ಬಹುತೇಕ ಎಲ್ಲರೂ ನಿರಾಳಗೊಂಡಿದ್ದರು. ಆದರೆ ನೈಟ್ ಕರ್ಫ್ಯೂ ಇಲ್ಲವೆಂದು ಮುಖ್ಯಮಂತ್ರಿಯೇ ಭರವಸೆ ನೀಡಿದ್ದರೂ ಇವರಿಗಿನ್ನೂ ಅದೇ ಚಿಂತೆಯಂತೆ.

    ನೈಟ್​ ಕರ್ಫ್ಯೂ ಜಾರಿಯಾದರೆ ದೊಡ್ಡ ಹೊಡೆತ ಬೀಳುತ್ತಿದ್ದುದು ವ್ಯಾಪಾರ-ವಹಿವಾಟಿಗೆ. ಅದರಲ್ಲೂ ಹೋಟೆಲ್​, ಬಾರ್​-ರೆಸ್ಟೋರೆಂಟ್​ ಮತ್ತು ಪಬ್​ಗಳಿಗೆ. ನೈಟ್​ ಕರ್ಫ್ಯೂ ಜಾರಿ ನಿರ್ಧಾರದಿಂದ ಸರ್ಕಾರ ವಿಮುಖವಾಗಿದ್ದರೂ ಬಾರ್-ಪಬ್ ಮಾಲೀಕರು ಮಾತ್ರ ಇನ್ನೂ ಅದೇ ಚಿಂತೆಯಲ್ಲಿದ್ದಾರಂತೆ.

    ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಾರ್ಟಿಯ ಕಾರಣಕ್ಕೆ ಹೆಚ್ಚಿನ ವಹಿವಾಟು ನಡೆಯುತ್ತದೆ. ಆದರೆ ನೈಟ್ ಕರ್ಫ್ಯೂ ರದ್ದಾಗಿದ್ದರೂ ಹೊಸ ವರ್ಷಾಚರಣೆ ಕುರಿತು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿರುವುದೇ ಇವರನ್ನು ಚಿಂತೆಗೀಡಾಗುವಂತೆ ಮಾಡಿದೆ. ಅದಕ್ಕೆ ಅತಿಮುಖ್ಯ ಕಾರಣವಾಗಿರುವುದು ಡಿಜೆ ರದ್ದು. ಡಿಜೆ ಸಿಸ್ಟಮ್​ಗೆ ನಿರ್ಬಂಧ ಹೇರಿರುವುದರಿಂದ ಜನರು ಒಳಗಡೆ ಡ್ಯಾನ್ಸ್​ ಮಾಡಲು ಸಾಧ್ಯವಿಲ್ಲ. ಡಿ. 24ರ ರಾತ್ರಿ ಡಿಜೆ ಇಲ್ಲ ಎಂಬ ಕಾರಣಕ್ಕೆ ಬುಕಿಂಗ್ ಕ್ಯಾನ್ಸೆಲ್​ ಆಗಿದ್ದನ್ನು ಅನುಭವಿಸಿದ್ದೇವೆ ಎಂಬುದಾಗಿ ಹೇಳಿರುವ ಕೆಲವು ಬಾರ್​-ಪಬ್ ಮಾಲೀಕರು, ವರ್ಷಾಂತ್ಯದ ರಾತ್ರಿಯಲ್ಲೂ ಮತ್ತದೇ ಸಮಸ್ಯೆ ಕಾಡಲಿದೆ ಎಂಬ ಚಿಂತೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಗಣ್ಯ ವ್ಯಕ್ತಿಯೊಂದಿಗೆ ಡ್ಯಾನ್ಸರ್​ ಲವ್ವಿ ಡವ್ವಿ! ಕೆಲವೇ ದಿನಗಳಲ್ಲಿ ನಡುರಸ್ತೆಯಲ್ಲಿ ಹೆಣವಾದ ಡ್ಯಾನ್ಸರ್​!

    PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ …

    ಮಗ ಹುಟ್ಟುತ್ತಲೇ ವಿಚಿತ್ರ ಅನುಭವ: ಮಂತ್ರವಾದಿ ನೀಡಿದ ಚಿಕಿತ್ಸೆ- ಮುಂದೆ ಆದದ್ದು ಭಯಾನಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts