More

    ಜಿಲ್ಲಾ ಕೇಂದ್ರಗಳಲ್ಲೇ ಮೌಲ್ಯಮಾಪನ

    ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲೇ ವಿಕೇಂದ್ರಿಕರಣಗೊಳಿಸುವಂತೆ ಕೋರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮನವಿ ಸಲ್ಲಿಸಿದರು.

    ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಅವರೊಂದಿಗೆ ಸಚಿವರನ್ನು ಬುಧವಾರ ಭೇಟಿಯಾದ ಶ್ರೀಕಂಠೇಗೌಡ ಈ ಕುರಿತು ರ್ಚಚಿಸಿದರು. ಮೌಲ್ಯಮಾಪನಾ ವಿಷಯದಲ್ಲಿ ನಿರ್ದೇಶಕರ ಆದೇಶವನ್ನು ಮರು ಪರಿಶೀಲಿಸಿ ಆಯಾ ಜಿಲ್ಲಾ ಮೌಲ್ಯಮಾಪನ ಕೇಂದ್ರವನ್ನು ವಿಕೇಂದ್ರಿಕರಿಸುವಂತೆ ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸುರೇಶ್ ಕುಮಾರ್, ಮೇ29ರಂದು ಸರ್ಕಾರದ ನಿರ್ಧಾರ ಪ್ರಕಟಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

    ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಕಲಾ ಮತ್ತು ವಾಣಿಜ್ಯ ನಿಕಾಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು 43 ಕೇಂದ್ರಗಳಲ್ಲಿ ಕೇಂದ್ರಿಕರಿಸಿ ಮೇ 27ರಂದು ಪ್ರಾರಂಭಿಸಲಾಗಿದೆ.

    5 ವರ್ಷಗಳಿಂದ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದ ಹುಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts