More

    2030ರ ಒಳಗೆ 100 ಬಿಲಿಯನ್ ದಾಟಲಿದೆ ಭಾರತದ ಇವಿ ಮಾರುಕಟ್ಟೆ ಬೆಲೆ; ಸಾಮಾನ್ಯರಿಗೆ ಏನು ಪ್ರಯೋಜನ?

    ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​, ಡಿಸೇಲ್​ಗಳನ್ನು ಬ್ಯಾನ್​ ಮಾಡುತ್ತೇವೆ ಎಂದಿದ್ದರು. ಇದಾದ ಮೇಲೆ ದೇಶದಲ್ಲಿ ಹೈಡ್ರೋಜನ್​, ನೈಸರ್ಗಿಕ ಅನಿಲವನ್ನು ಇಂಧನವಾಗಿ ಬಳಸುವ ಕಾರುಗಳು, ಎಲೆಕ್ಟ್ರಿಕ್​ ಕಾರುಗಳು, ಹೀಗೆ ನವೀಕರಿಸಬಹುದಾದ ಇಂಧನ ಬಳಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ.

    ಇದೀಗ ದೇಶದಲ್ಲಿ ಹೈಡ್ರೋಜನ್​, ಸಿಎನ್​ಜಿ ಕಾರುಗಳಿಗಿಂತ ಹೆಚ್ಚಾಗಿ ಎಲೆಕ್ಟ್ರಿಕ್​ ಕಾರುಗಳ ಪಾರುಪತ್ಯವೇ ಹೆಚ್ಚಾಗಿದೆ. ಅದಕ್ಕೆ ಕಾರಣ ಇಷ್ಟೇ. ಹೈಡ್ರೋಜನ್​ ಅಥವಾ ನೈಸರ್ಗಿಕ ಅನಿಲವನ್ನು ಪೆಟ್ರೋಲ್​-ಡಿಸೆಲ್​ ರೀತಿ ಸಪ್ಲೈ ಮಾಡುವ ವ್ಯವಸ್ಥೆ ಇಲ್ಲ. ಆದರೆ ಎಲೆಕ್ಟ್ರಿಕ್​ ವಾಹನಗಳನ್ನು ಮನೆಯಲ್ಲೇ ಚಾರ್ಜ್​ ಮಾಡಬಹುದು. ಇ- ವಾಹನಗಳನ್ನು ಯಾವ ಕಟ್ಟಡದಲ್ಲೂ ಚಾರ್ಜ್​ ಮಾಡಬಹುದು.

    ಈಗ ಬೈನ್​ ಆ್ಯಂಡ್​ ಕಂಪೆನಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ದೇಶದಲ್ಲಿ ಇವಿ ಮಾರುಕಟ್ಟೆಯ ಒಟ್ಟು ಬೆಲೆ 2030ರ ಒಳಗೆ 76 ಬಿಲಿಯನ್​ ನಿಂದ 100 ಬಿಲಿಯನ್​ವರೆಗೆ ತಲುಪಲಿದೆ. ಅಂದರೆ ಇವಿ ಮಾರುಕಟ್ಟೆ ಮುಂದಿನ 8 ವರ್ಷಗಳಲ್ಲಿ ಒಟ್ಟು 8 ರಿಂದ 11 ಬಿಲಿಯನ್​ ಡಾಲರ್​ಗಳನ್ನು ಗಳಿಸಲಿದೆ.

    ಸಾಮಾನ್ಯರಿಗೆ ಏನು ಲಾಭ?
    ಇವಿ ಮಾರುಕಟ್ಟೆ ಬೆಲೆ ಹೆಚ್ಚಾಗಲಿದೆ ಎಂದರೆ ಅಲ್ಲಿ ಹೂಡಿಕೆಗೆ ಅವಕಾಶ ಇದೆ ಎಂದರ್ಥ. ಹೂಡಿಕೆ ಶೇರು ಮಾರುಕಟ್ಟೆಯಲ್ಲೂ ಮಾಡಬಹುದು, ನೇರವಾಗಿ ವ್ಯಾಪಾರಕ್ಕೆ ಧುಮುಕಿಯೂ ಮಾಡಬಹುದು. ಏನೂ ಇಲ್ಲದಿದ್ದರೆ, ಮುಂದಿನ 8 ವರ್ಷಗಳ ಒಳಗೆ ನಿಮ್ಮ ಪೆಟ್ರೋಲ್​ ಕಾರನ್ನು ಮಾರಿ ಎಲೆಕ್ಟ್ರಿಕ್​ ಕಾರನ್ನು ಕೊಳ್ಳಲು ತಯಾರಾಗಬಹುದು.

    ಯಾವ ಕ್ಷೇತ್ರದಲ್ಲಿ ಉದ್ದಿಮೆ ಶುರು ಮಾಡಬಹುದು?
    ಒಬ್ಬ ಸಾಮಾನ್ಯ ನೇರವಾಗಿ ಕಾರು ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಬದಲಾಗಿ, ಬ್ಯಾಟರಿ ಉತ್ಪಾದನೆಯಲ್ಲಿ ತೊಡಗಬಹುದು. ಅಥವಾ ಚಾರ್ಜಿಂಗ್​ ಸ್ಟೇಷನ್​ ಹಾಕಿಕೊಂಡರೂ ಸಾಕು!

    ಶೇರು ಮಾರುಕಟ್ಟೆ:
    ಈ ರಿಸ್ಕ್​ ತೆಗೆದುಕೊಳ್ಳುವುದೇ ಬೇಡ ಎಂಬ ಮನಸ್ಥಿತಿ ಇದ್ದರೆ, ಸ್ವಲ್ಪ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಬಹುದು. ದೇಶದ ನೀತಿಯೂ ಇವಿ ಪರವಾಗಿಯೇ ಇರುವುದರಿಂದ ಲಾಭ ನಿಶ್ಚಿತ. ಕಮ್ಮಿ ಬೆಲೆಗೆ ಶೇರು ಸಿಗುತ್ತೆ ಅಂತ ಹೊಸ ಸ್ಟಾರ್ಟಪ್​ಗಳ ಮೇಲೆ ಹೂಡುವ ಬದಲು ಸ್ವಲ್ಪ ದುಬಾರಿ ಆದರೂ ಮಾರುಕಟ್ಟೆಯಲ್ಲಿ ಪಳಗಿರುವ ಕಂಪೆನಿಗಳಲ್ಲಿ ಹೂಡಿದರೆ ಉತ್ತಮ. ಅಂತಹ ಕಂಪೆನಿಗಳು ಏಕಾಏಕಿ ಮುಳುಗಿ ಹೋಗುವುದಿಲ್ಲ. ಹೀಗಾಗಿ ಸ್ವಲ್ಪ ಸಮಸಯದ ನಂತರ ಆದರೂ ಲಾಭ ದಕ್ಕಿಯೇ ದಕ್ಕುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts