More

    ವಿಜೃಂಭಣೆಯ ಅಂತರಘಟ್ಟಮ್ಮ ದೇವಿ ರಥೋತ್ಸವ

    ಬೀರೂರು: ಪಟ್ಟಣದ ಗ್ರಾಮದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವ ಮಂಗಳವಾರ ಸಡಗರದಿಂದ ನಡೆಯಿತು.

    ಪುಷ್ಪಲಾಂಕೃತ ರಥದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೂವಿನ ವಿಶೇಷ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಿ ರಥವನ್ನು ಮಂಗಳವಾದ್ಯ, ಸೋಮನ ಕುಣಿತ ಹಾಗೂ ವಿವಿಧ ಕಲಾ ತಂಡಗಳಿಂದ ಹಳೇಪೇಟೆ ಆಂಜನೇಯ ದೇವಾಲಯದವರೆಗೆ ಎಳೆದು ತರಲಾಯಿತು.

    ರಥೋತ್ಸವ ಪ್ರಯುಕ್ತ ಮಹಾನವಮಿ ಬಯಲಿನವರೆಗೆ ನಡೆದ 57ಕ್ಕೂ ಹೆಚ್ಚಿನ ಜೋಡೆತ್ತುಗಳ ಪಾನಕದ ಬಂಡಿಗಳ ಓಟ ಭಕ್ತರನ್ನು ಸೆಳೆಯಿತು. ಬಳಿಕ ಅಮ್ಮನವರ ರಥವನ್ನು ಹಳೇಪೇಟೆ ಆಲದಮರದವರೆಗೂ ಎಳೆೆದೊಯ್ದು ವಾಪಸ್ ತರಲಾಯಿತು. ಮೇ 5ರಂದು ದೇವಿಗೆ ಓಕುಳಿ ಉತ್ಸವ ನಡೆಸಿ ರಾಜಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಗುವುದು.

    ದೇವಸ್ಥಾನದ ಗುಡಿಕಟ್ಟಿನ ಗೌಡರುಗಳು, ಪಟ್ಟಣದ ಹಿರಿಯ ಮುಖಂಡರು ಭಾಗವಹಿಸಿದ್ದರು.

    ಪಾನಕದ ಬಂಡಿ ಓಟದ ಸಂದರ್ಭದಲ್ಲಿ ಎತ್ತಿನ ಗಾಡಿ ಜನರ ಗುಂಪಿನ ಮೇಲೆ ನುಗ್ಗಿ ಪೊಲೀಸ್ ಪೇದೆ ಮತ್ತು ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ರಥೋತ್ಸವದಲ್ಲಿ ಪಾನಕ ಬಂಡಿಗಳ ಸಾಗುವಿಕೆಯಲ್ಲಿ ಅವಘಡ ನಡೆಯದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಕ್ರಮಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts