More

    ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ

    ಹುಬ್ಬಳ್ಳಿ: ಅತ್ಯಂತ ಹಿಂದುಳಿದ ದೇವಾಂಗ ಸಮಾಜದವರಿಗೆ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ನೇಕಾರ ದೇವಾಂಗ ಸೇವಾ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ನಂತರ ಅಪರ ತಹಸೀಲ್ದಾರ್ ವಿಜಯ ಕಡಕೋಳ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.

    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೇವಾಂಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವೆಂಬುದು ಕನಸಿನ ಮಾತಾಗಿದೆ. ಉದ್ಯಮ ಕ್ಷೇತ್ರದಲ್ಲೂ ಹಿಂದುಳಿದಿದ್ದೇವೆ. ನೇಕಾರಿಕೆ ಅವಲಂಬಿಸಿ ಜೀವನ ನಡೆಸುತ್ತಿದ್ದೇವೆ. ಕೂಲಿ ನೇಕಾರ ವರ್ಗಕ್ಕೆ ಶಿಕ್ಷಣ, ಆರೋಗ್ಯ ಹಾಗೂ ಇತರ ಸೌಲಭ್ಯಗಳಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿ ರಾಜ್ಯ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

    ಇದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಸಮಿತಿ ಅಧ್ಯಕ್ಷ ದೀಪಕ ಕರಮರಿ, ಉಪಾಧ್ಯಕ್ಷ ಎಸ್.ಜಿ. ಅಗಡಿ, ಕಾರ್ಯದರ್ಶಿ ವಾಸುದೇವ ರಾಮದುರ್ಗ, ಪ್ರಮುಖರಾದ ಶಿವಶಂಕರ ಬಿಜ್ಜಳ, ಈಶ್ವರ ಹಾನಗಲ್ಲ, ಈರಣ್ಣ ನೀರಲಗಿ, ಅಶೋಕ ಬೀಳಗಿ, ಸುಭಾಷ ಅಥಣಿ, ಸಂತೋಷ ಜವಳಿ, ಶಾಂತಾ ಅಂಚಟಗೇರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts