More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ, ನೋಂದಣಿ ಮಾಡಿಕೊಂಡ ಒಟ್ಟು 28,866 ವಿದ್ಯಾರ್ಥಿಗಳ ಪೈಕಿ 329 ವಿದ್ಯಾರ್ಥಿಗಳು ಗೈರು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ಆರಂಭವಾಗಿದೆ. ಮೊದಲ ದಿನವಾದ ಸೋಮವಾರ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, ನೋಂದಣಿ ಮಾಡಿಕೊಂಡ ಒಟ್ಟು 28,866 ವಿದ್ಯಾರ್ಥಿಗಳ ಪೈಕಿ 329 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

    ಬಂಟ್ವಾಳದಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡ 5,776 ವಿದ್ಯಾರ್ಥಿಗಳ ಪೈಕಿ 80 ಮಂದಿ ಗೈರು ಹಾಜರಾಗಿದ್ದರೆ, ಬೆಳ್ತಂಗಡಿಯಲ್ಲಿ 3,843ರಲ್ಲಿ 30 ವಿದ್ಯಾರ್ಥಿಗಳು ಗೈರಾಗಿದ್ದರು. ಮಂಗಳೂರು ಉತ್ತರದಲ್ಲಿ 5,543ರ ಪೈಕಿ 53, ಮಂಗಳೂರು ದಕ್ಷಿಣದಲ್ಲಿ 5,188 ಪೈಕಿ 48, ಮೂಡುಬಿದಿರೆಯಲ್ಲಿ 1,889ರ ಪೈಕಿ 12, ಪುತ್ತೂರಿನಲ್ಲಿ 4,732 ಪೈಕಿ 45, ಸುಳ್ಯದಲ್ಲಿ ನೋಂದಣಿ ಮಾಡಿದ 1,895 ವಿದ್ಯಾರ್ಥಿಗಳಲ್ಲಿ 61 ಮಂದಿ ಗೈರು ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯ ಒಟ್ಟು 88 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕಾರ್ಯಕ್ಕಾಗಿ ಒಟ್ಟು 1588 ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜತೆಗೆ 88 ಮುಖ್ಯ ಅಧೀಕ್ಷಕರು, 42 ಉಪ ಮುಖ್ಯ ಅಧೀಕ್ಷಕರು, 88 ಮೊಬೈಲ್ ಜಫ್ತುದಾರರು ಮತ್ತು ಇತರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸಿಸಿಟಿವಿ ಕ್ಯಾಮೆರಾ, ಆಸನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

    *ಪರೀಕ್ಷಾ ಕೇಂದ್ರದ ನಿರಂತರ ಪರಿವೀಕ್ಷಣೆ

    ಪರೀಕ್ಷೆ ನಡೆಯುವ 88 ಕೇಂದ್ರಗಳನ್ನು ಜಿಲ್ಲಾ ಕೇಂದ್ರದಿಂದ ವೀಕ್ಷಣೆ ಮಾಡಲು ಜಿಲ್ಲಾ ಪಂಚಾಯಿತಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದ ಸಿಸಿಟಿವಿ ಮೂಲಕ ನಿರಂತರ ಪರಿವೀಕ್ಷಣೆ ನಡೆಸಲಾಗುತ್ತಿತ್ತು. ಈ ವರ್ಷ ಮೊದಲ ಬಾರಿ ಇಂತಹ ವಿನೂತನ ವ್ಯವಸ್ಥೆ ಕಲ್ಲಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1500 ಕೊಠಡಿ ಮೇಲ್ವಿಚಾರಕರು ಕಾರ್ಯನಿರ್ವಹಿಸಿದ್ದರು. ಮಂಗಳೂರು ನಗರ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ 39 ಪರೀಕ್ಷಾ ಕೇಂದ್ರ ಹಾಗೂ ಎಸ್‌ಪಿ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತ ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts