More

    ಪ್ರಬಂಧಗಳು ಭವಿಷ್ಯದ ಸಂಪತ್ತು

    ಹೊನ್ನಾವರ: ಇತಿಹಾಸವನ್ನು ದಾಖಲಿಸಿ ಮಂಡನೆಯಾಗುವ ಪ್ರಬಂಧಗಳು ಭವಿಷ್ಯದ ಸಂಪತ್ತು ಆಗಲಿವೆ ಎಂದು ಕರ್ನಾಟಕ ವಿವಿಯ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಷಡಕ್ಷರಯ್ಯ ಹೇಳಿದರು.

    ಪಟ್ಟಣದ ಎಸ್​ಡಿಎಂ ಕಾಲೇಜ್​ನಲ್ಲಿ ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿ ಸಿದ್ದ ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಆರ್. ಗೋಪಾಲ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳ ಇತಿಹಾಸವನ್ನು ದಾಖಲಿಸಿ, ಸಂಪುಟ ರೂಪದಲ್ಲಿ ಹೊರತರುತ್ತಿದ್ದಾರೆ. 20 ಸಂಪುಟಗಳು ಹೊರಬಂದಿವೆ. 25 ಜಿಲ್ಲೆಗಳಲ್ಲಿ ಇಂತಹ ವಿಚಾರ ಸಂಕಿರಣ ನಡೆದಿದೆ ಎಂದರು.

    ಮೈಸೂರು ವಿವಿಯ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಂ.ಎಸ್. ಕೃಷ್ಣಮೂರ್ತಿ ಮಾತನಾಡಿ, ದೇಶದಲ್ಲೇ ಅತಿ ಪುರಾತನವಾದ ನಾಮಾಂಕಿತ ನಗರ ಬನವಾಸಿ, ಕ್ರಿಸ್ತ ಶಕ ಮೂರನೇ ಶತಮಾನದಲ್ಲಿ ಅಶೋಕ ಚಕ್ರವರ್ತಿಗೆ ಇದು ತಿಳಿದಿತ್ತು. ಈತ ತನ್ನ ಶಿಷ್ಯ ತೇರಾರಕ್ಷಿತನನ್ನು ಬನವಾಸಿಗೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕಳಿಸಿದ್ದ, ಆಗ ಸಂಪದ್ಭರಿತವಾಗಿದ್ದ ಬನವಾಸಿಯ ಇತಿಹಾಸ ಸಿಂಹಳಿಯರ ಸಾಹಿತ್ಯದಲ್ಲೂ ಬಂದಿದೆ ಎಂದರು.

    ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ಎಸ್​ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಪಿ. ರ್ಕ, ಯುವ ಪೀಳಿಗೆ ಇತಿಹಾಸ ಅರಿತು, ವರ್ತಮಾನದಲ್ಲಿ ಸಾಧಿಸಿ, ಭವಿಷ್ಯವನ್ನು ಉಜ್ವಲವಾಗಿ ಕಟ್ಟಬೇಕು ಎಂಬ ಸಂದೇಶ ನೀಡಿದರು.

    ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಮ ಹೆಗಡೆ ಅವರು ಸರ್ವಾಧ್ಯಕ್ಷತೆ ವಹಿಸಿದ್ದರು. ಎಂಪಿಇ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ವಿಜಯನಗರ ಅಧ್ಯಯನ 21ನೇ ಸಂಪುಟವನ್ನು ಬಿಡುಗಡೆಗೊಳಿಸಿದರು. ಪ್ರಾಚಾರ್ಯು ಡಾ. ವಿಜಯಲಕ್ಷ್ಮೀ ನಾಯ್ಕ ಉಪಸ್ಥಿತರಿದ್ದರು. ಇಲಾಖೆಯ ನಿರ್ದೇಶಕ ಡಾ. ಆರ್. ಗೋಪಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ನಾಗರಾಜ ಹೆಗಡೆ, ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಜಿ.ಎಸ್. ಹೆಗಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts