More

    ಕೋರ್ ಕಮಿಟಿ ಹೆಗಲಿಗೆ ಜಿಪಂ ಪ್ರಹಸನ

    ಚಿಕ್ಕಮಗಳೂರು: ರಾಜೀನಾಮೆ ಕೊಡಿ ಎನ್ನುವ ಪಕ್ಷದ ಸೂಚನೆಯನ್ನು ನಿರ್ಲಕ್ಷ್ಯ ಮಾಡಿರುವ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಸ್ಥಳೀಯ ಕೋರ್ ಕಮಿಟಿಗೆ ವಹಿಸಿದ್ದಾರೆ.

    ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಅವರ ಬಳಿ ಜಿಪಂ ಅಧ್ಯಕ್ಷರ ರಾಜೀನಾಮೆ ಪ್ರಹಸನ ಚರ್ಚೆಯಾಗಿದ್ದು, ಕೋರ್ ಕಮಿಟಿ ಕೈಗೊಳ್ಳುವ ತೀರ್ವನಕ್ಕೆ ಪಕ್ಷದ ಸಹಮತ ಇದೆ. ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

    ನ. 2ರಂದು ಜಿಪಂ ಅಧ್ಯಕ್ಷರು ಸಾಮಾನ್ಯ ಸಭೆ ಕರೆದಿದ್ದಾರೆ. ಅ. 20ರಂದು ಕರೆದಿದ್ದ ಸಾಮಾನ್ಯ ಸಭೆಗೆ ಪಕ್ಷದ ಎಲ್ಲ ಸದಸ್ಯರು ಗೈರಾಗಿದ್ದರು. ನ. 2ರ ಸಭೆಗೆ ಹಾಜರಾಗಬೇಕೇ? ಸಭೆಯಿಂದ ದೂರ ಉಳಿಯಬೇಕೇ ಎಂಬ ಜಿಜ್ಞಾಸೆ ಸದಸ್ಯರಲ್ಲಿದೆ. ಹೀಗಾಗಿ ನ. 2ರೊಳಗೆ ಪಕ್ಷ ಯಾವುದಾದರೂ ನಿರ್ಧಾರ ಕೈಗೊಳ್ಳಬೇಕಿದ್ದು, ಕೋರ್ ಕಮಿಟಿ ಸಭೆ ಒಂದೆರಡು ದಿನಗಳಲ್ಲಿ ಸೇರುವ ಸಾಧ್ಯತೆ ಇದೆ.

    ಪಕ್ಷ ಅವರಿಂದ ಗೆಲುವು ಸಾಧಿಸಿಲ್ಲ: ಬಿಜೆಪಿಯಿಂದಾಗಿ ಸುಜಾತ ಕೃಷ್ಣಪ್ಪ ಜಿಪಂ ಸದಸ್ಯೆ, ಅಧ್ಯಕ್ಷರೂ ಆಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಪಕ್ಷ ಗೆಲುವು ಸಾಧಿಸಿರುವುದು ಅವರಿಂದ ಅಲ್ಲ. ರಾಜೀನಾಮೆ ನೀಡಬೇಕು ಎಂಬ ಪಕ್ಷದ ನಿರ್ಣಯವನ್ನು ಅವರು ಒಪ್ಪಿಕೊಳ್ಳಬೇಕು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

    ರಾಜೀನಾಮೆ ನಿರ್ಧಾರ ವ್ಯಕ್ತಿಗತವಾಗಿರುವುದಲ್ಲ. ಪಕ್ಷಕ್ಕೆ ಸಂಬಂಧಿಸಿದ್ದು. ಈ ವಿಚಾರದಲ್ಲಿ ಅವರು ತಪ್ಪು ತಿಳಿದುಕೊಂಡಿದ್ದರೆ ಮನವರಿಕೆ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

    ಒಪ್ಪಂದದ ವೇಳೆ ಪಕ್ಷ ನಾಳೆಯೇ ರಾಜೀನಾಮೆ ಕೇಳಿದರೂ ಅದಕ್ಕೆ ಬದ್ಧ ಎಂದು ಹೇಳಿದ್ದ ಜಿಪಂ ಅಧ್ಯಕ್ಷರು ಈಗೇಕೆ ನಿರ್ಧಾರ ಬದಲಿಸಬೇಕು ಎಂದು ಪ್ರಶ್ನಿಸಿದ ಅವರು, ಪಕ್ಷ ಒಟ್ಟಾಗಿ ರ್ಚಚಿಸಿ ತೆಗೆದುಕೊಂಡಿರುವ ನಿರ್ಧಾರವದು. ಇದರಲ್ಲಿ ಜಾತಿ ಜತೆಗೆ ಬೇರೆ ಬೇರೆ ಹೆಸರು ತರುವುದು ಸರಿಯಲ್ಲ ಎಂದರು.

    ಪರಿಶಿಷ್ಟರಿಗೆ ಅಧ್ಯಕ್ಷ ಸ್ಥಾನ ಮೀಸಲಿರುವಾಗ ಮತ್ತೆ ಅಧ್ಯಕ್ಷರಾಗುವವರು ಪರಿಶಿಷ್ಟ ಜಾತಿಯವರೇ ಆಗಬೇಕಾಗುತ್ತದೆ. ಇಲ್ಲಿ ಮೇಲ್ವರ್ಗದವರಿಗೆ ಅವಕಾಶ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದೇ ವರ್ಗದಿಂದ ಬಂದಿದ್ದ ಚೈತ್ರಶ್ರೀ ಇಂಜಿನಿಯರಿಂಗ್ ಪದವೀಧರೆ. ಆದರೂ ಸುಜಾತ ಅವರಿಗೆ ಅವಕಾಶ ಕಲ್ಪಿಸಬೇಕೆನ್ನುವ ಕಾರಣಕ್ಕೆ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಇದನ್ನು ಸುಜಾತ ಕೃಷ್ಣಪ್ಪ ನೆನಪಿಸಿಕೊಳ್ಳಬೇಕು ಎಂದರು.

    ಪ್ರಶಸ್ತಿಗೆ ಅರ್ಜಿ ಹಾಕಿದವರಿಗೇ ಆದ್ಯತೆ: ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಮಗಳೂರು ನಗರದವರೇ ಮೂವರು ಆಯ್ಕೆ ಆಗಿರುವುದಕ್ಕೆ ಸ್ಪಷ್ಟನೆ ನೀಡಿದ ಸಚಿವ ಸಿ.ಟಿ.ರವಿ, ಮೂವರ ಕಾರ್ಯಕ್ಷೇತ್ರ ನಗರ ಕೇಂದ್ರಿತವಾಗಿದ್ದರೂ ಇಬ್ಬರು ಮೂಲತಃ ಮೂಡಿಗೆರೆ ಕ್ಷೇತ್ರದವರು. ಪ್ರತಿ ವರ್ಷ ಜಿಲ್ಲೆಯಲ್ಲಿ ಒಬ್ಬರಿಗೆ ಮಾತ್ರ ಪ್ರಶಸ್ತಿ ಒಲಿಯುತ್ತಿತ್ತು. ಈ ಬಾರಿ ಮೂವರನ್ನು ಆರಿಸಲಾಗಿದೆ. ಅರ್ಹರು ಸಾಕಷ್ಟು ಮಂದಿ ಇದ್ದು ಮತ್ತೆ ಮುಂದೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.ಹೆಚ್ಚಾಗಿ ಅರ್ಜಿ ಹಾಕಿದವರನ್ನೇ ಪರಿಗಣಿಸಲಾಗಿದೆ ಎಂದರು.

    ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಮಾತ್ರ 10 ತಿಂಗಳ ಮನೆ ಬಾಡಿಗೆ, ಉಳಿದ ಜಿಲ್ಲೆಗಳ ಸಂತ್ರಸ್ತರಿಗೆ 5 ತಿಂಗಳ ಬಾಡಿಗೆ ನೀಡಲು ತೀರ್ವನಿಸಲಾಗಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಜಿಲ್ಲೆ ಸಂತ್ರಸ್ತರಿಗೂ 10 ತಿಂಗಳ ಬಾಡಿಗೆ ನೀಡುವಂತೆ ಕೋರಿದ್ದೇನೆ.

    | ಸಿ.ಟಿ.ರವಿ

    ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts