ಒಂದು ಪಕ್ಷದ ಪರ ಮುಖವಾಡ ಹಾಕಿ ನಿಲ್ಲಬೇಡಿ ಎಂದು ದೊರೆಸ್ವಾಮಿ ಬಳಿ ಪ್ರಾರ್ಥಿಸಿದ ಈಶ್ವರಪ್ಪ

blank
blank

ಕೊಪ್ಪಳ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತಾಗಿ ಶಾಸಕ ಬಸವರಾಜ್​ ಯತ್ನಾಳ್​ ನೀಡಿದ್ದ ಹೇಳಿಕೆಯನ್ನು ಸಚಿವ ಕೆ.ಎಸ್​.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಅವರು, “ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚೆಗೆ ಅವರು ನೇರವಾಗಿ ಕಾಂಗ್ರೆಸ್​ಗೆ ಬೆಂಬಲಿಸುತ್ತಿದ್ದಾರೆ. ದಯಮಾಡಿ ಒಂದು ಪಕ್ಷದ ಪರ ಮುಖವಾಡ ಹಾಕಬೇಡಿ ಎಂದು ದೊರೆಸ್ವಾಮಿ ಅವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.” ಎಂದು ಹೇಳಿದ್ದಾರೆ.

ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ತಾವೇ ಅಂಬೇಡ್ಕರ್​, ತಾವೇ ಸಂವಿಧಾನ ಬರೆದಿರೋದು ಎನ್ನುವ ರೀತಿಯಲ್ಲಿ ಆಡುತ್ತಾರೆ. ಕಾಂಗ್ರೆಸ್​ನವರು ಅಧಿವೇಶನ ನಡೆಯುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ. ಹಾಗಾದರೆ ಅಧಿವೇಶನ ನಡೆಯುವುದಕ್ಕೆ ಬಿಡುವುದಿಲ್ಲ ಎನ್ನುವವರಿಗೆ ರಮೇಶ್​ ಕುಮಾರ್​ ಏನು ಮಾಡುತ್ತಾರೆ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೊಲೆಗಡುಕ ಎಂದಿದ್ದ ಸಿದ್ದರಾಮಯ್ಯನವರನ್ನು ಯಾಕೆ ಉಚ್ಚಾಟನೆ ಮಾಡಲಿಲ್ಲ? ಎಂದು ಕೇಳಿದ್ದಾರೆ.

ರೈತರ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಕ್ಕೆ ಉತ್ತರಿಸಿರುವ ಅವರು, ರೈತ ನಾಯಕ ಅಂತ ಎಚ್​ಡಿಕೆ ಫೋಸ್​ ಕೊಡುತ್ತಾರೆ. ಆದರೆ ಅವರ ಬಳಿ ಚುನಾವಣೆಯಲ್ಲಿ ಅವರ ಅಪ್ಪ ಮತ್ತು ಮಗನನ್ನು ಗೆಲ್ಲಿಸಿಕೊಳ್ಳೋದಕ್ಕೆ ಆಗಲಿಲ್ಲ. ರೈತರ ಪರ ಮಾತನಾಡುವುದಕ್ಕೆ ನಿಮಗೇನು ನೈತಿಕ ಹಕ್ಕಿದೆ? ಬಜೆಟ್​ ನೋಡಿ, ಆಮೇಲೆ ಬಿಜೆಪಿ ಏನು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ನುಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

VIDEO: ವೀರ ಸಾವರ್ಕರ್ ಅವರಷ್ಟು ಲಾಠಿ ಏಟು ತಿಂದಿದ್ರಾ ದೊರೆಸ್ವಾಮಿ, ಸ್ವಾತಂತ್ರ್ಯ ಸಿಗುವ ವೇಳೆಗೆ ಅವರ ವಯಸ್ಸೆಷ್ಟು ಎಂದು ಪ್ರಶ್ನಿಸಿದ ಬಸನಗೌಡ ಪಾಟೀಲ್ ಯತ್ನಾಳ್

Share This Article

ಪಾರ್ಲಿಮೆಂಟ್​ ಮೆನುವಿನಲ್ಲಿ ರಾಗಿ ಇಡ್ಲಿ ದರ್ಬಾರ್​! ಮಾಡೊದೇಗೆ? ಇಲ್ಲಿದೆ ಸಿಂಪಲ್ಸ್​ ಟಿಪ್ಸ್​​.. | Ragi Idli

Ragi Idli : ಇತ್ತೀಚಿನ ವೇಗದ ಆಧುನಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದೆ ಕಷ್ಟವಾಗಿದೆ. ಆದರಲ್ಲೂ ಪಟ್ಟಣ…

Numerology: ಈ ದಿನಾಂಕದಂದು ಜನಿಸಿದವರಿಗೆ ಬಂಪರ್! ಇವರು ನಿಜವಾಗಿಯೂ ಲಕ್ಷ್ಮೀ ಪುತ್ರರು..

Numerology: ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಜನ್ಮ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜನ್ಮ ದಿನಾಂಕದ ಸಹಾಯದಿಂದ,…