More

    ಈಶ್ವರಪ್ಪ ರಾಜೀನಾಮೆ ಕೊಡುವುದು ಸೂಕ್ತ: ಎಚ್​.ಡಿ. ಕುಮಾರಸ್ವಾಮಿ

    ದಾವಣಗೆರೆ: ಈಶ್ವರಪ್ಪನವರು ಹಠಕ್ಕೆ ಬೀಳದೇ ರಾಜೀನಾಮೆ ಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡ್​ ಗ್ರಾಮದಲ್ಲಿ ಮಾತನಾಡಿದ ಅವರು ರಾಜೀನಾಮೆ ಕೊಟ್ಟ ನಂತರ ಇವರ ಪಾತ್ರವೇನು ಇಲ್ಲ ಎಂಬುದನ್ನು ಅವರೇ ಸಾಬೀತುಪಡಿಸಬೇಕು ಎಂದರು.

    ಬಿಜೆಪಿ ಪಕ್ಷದ ಜವಾಬ್ದಾರಿಯೂ ಆಗಿದ್ದು, ಈಗಾಗಲೇ 40 ಪರ್ಸೆಂಟ್​ ಬಗ್ಗೆ ಎಲ್ಲರಿಗೂ ಗೊತ್ತು, 4 ಕೋಟಿ ಕೆಲಸವನ್ನು ವರ್ಕ್​ ಆರ್ಡರ್​ ಇಲ್ಲದೇ  ಇವರಿಗೆ ಅಧಿಕಾರ ನೀಡಿದ್ದು ಯಾರು, ಈ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು.

    ನಿನ್ನೆ ಉಡುಪಿಗೆ ಹೋದಾಗ ಇವರ ಜೊತೆಯಲ್ಲಿ ಇಬ್ಬರು ಸ್ನೇಹಿತರು ಹೋಗಿದ್ದರು. ಅವರು ಹೋಗಿದ್ದು ನೋಡಿದರೆ ಮೇಲ್ನೋಟಕ್ಕೆ ಸಂಶಯಕ್ಕೆಡೆ ಮಾಡಿಕೊಡುತ್ತದೆ. ಪ್ರಕರಣದಲ್ಲಿ ಈಶ್ವರಪ್ಪನವರೇ ಮೊದಲು ರಾಜೀನಾಮೆ ಕೊಡಬೇಕು. ಇನ್ನು ಮಲಗಿದ್ದ ಕಾಂಗ್ರೆಸ್​ನವರು ಅರ್ಧಗಂಟೆಯಲ್ಲೇ ಎದ್ದು ಪ್ರತಿಭಟನೆ ಮಾಡಿದ್ದಾರೆ. ಇದು ಸಂಶಯಕ್ಕೆಡೆಮಾಡಿಕೊಟ್ಟಿದೆ ಎಂದರು.

    ನರೇಂದ್ರ ಮೋದಿಯ ನಾನು ತಿನ್ನಲ್ಲ ಬೇರೆಯವರಿಗು ಬಿಡೋಲ್ಲ ಎಂಬುದನ್ನು ಸಾಬೀತು ಪಡಿಸಬೇಕಿದೆ. ಪರ್ಸೆಂಟೇಜ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದಾನೆ ಎಂದು ಮಾಹಿತಿ ಇದೆ.ಉತ್ತಮ ಪೊಲೀಸ್ ಅಧಿಕಾರಿಗಳನ್ನು ಹಾಕಿ ವಾಸ್ತವಾಂಶ ತನಿಖೆ ಮಾಡಿಸಬೇಕು ಎಂದ ಅವರು, 40 ಪರ್ಸೆಂಟೇಜ್ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ ಅವರಿಗೂ ಗೊತ್ತು ಎಂದು ಕಾಂಗ್ರೆಸ್​ಗೆ ಟಾಂಗ್​ ನೀಡಿದರು.

    ದೇಶಿ ನಿರ್ಮಿತ ಪಿಸ್ತೂಲ್​ ಇಟ್ಟುಕೊಂಡು ಓಡಾಡ್ತಿದ್ದ ಶಿಕ್ಷಕಿಯ ಬಂಧನ

    ಸಿಎಸ್​ಕೆಗೆ ಇದೆ ಅತಿದೊಡ್ಡ ಅಭಿಮಾನಿ ಬಳಗ:ಸಮೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts