More

    ಹಿಂದುಳಿದವರ ಮತ ಒಡೆಯಲು ಈಶ್ವರಪ್ಪ ಬಂಡಾಯ ನಾಟಕ

    ಶಿವಮೊಗ್ಗ: ಹಿಂದುಳಿದ ವರ್ಗಗಳ ಮತಗಳನ್ನು ಇಬ್ಭಾಗಗೊಳಿಸಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಬಂಡಾಯದ ಮುಖವಾಡ ಹೊದಿಸಿ ಬಿಜೆಪಿಯೇ ಸ್ಪರ್ಧೆಗೆ ಇಳಿಸಿದೆ. ಈಶ್ವರಪ್ಪ ಡಮ್ಮಿ ಅಭ್ಯರ್ಥಿಯಾಗಿದ್ದು ಅವರದು ಹುಸಿ ಬಂಡಾಯ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಟೀಕಿಸಿದರು.

    ಈಶ್ವರಪ್ಪ ಅವರಿಗೆ ಬಿಜೆಪಿ ಹಿಂದುಳಿದ ನಾಯಕನ ಮುಖವಾಡ ಹಾಕಿ ಕಣಕ್ಕಿಳಿಸಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಅವರ ಕುಟುಂಬದ ಆಂತರಿಕ ಒಪ್ಪಂದ ಇದಾಗಿದೆ. ಅವರ ತಂತ್ರ ಫಲಿಸುವುದಿಲ್ಲ. ಇಬ್ಬರ ನಾಟಕ ಫಲಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈಶ್ವರಪ್ಪ ಒಬ್ಬ ಕಲಾವಿದ. ಮುಖ, ಮೈಗೆ ಮಾತ್ರವಲ್ಲ, ನಾಲಿಗೆಗೂ ಬಣ್ಣ ಹಚ್ಚಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಡಮ್ಮಿ ಅಭ್ಯರ್ಥಿ ಅಲ್ಲ. ಚುನಾವಣೆ ಬಳಿಕ ಈಶ್ವರಪ್ಪ ಅವರ ನಿಜವಾದ ಮುಖವಾಡ ಬಯಲಾಗಲಿದೆ ಎಂದರು.
    ಶಾಸಕ ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗಕ್ಕೆ ಬಂದು ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳುವ ಮೂಲಕ ಎಸ್ಸಿ ಎಸ್ಟಿ, ಬಡವರನ್ನು ಜಾಗೃತಗೊಳಿಸಿ ಹೋಗಿದ್ದಾರೆ. ಅದರ ಪರಿಣಾಮ ಶೋಷಿತ, ಹಿಂದುಳಿದ ವರ್ಗಗಳು ಸಂಘಟಿತವಾಗುತ್ತಿವೆ. ಈ ನಡುವೆ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸುತ್ತಿದ್ದಂತೆ ಹಿಂದುಳಿದ ನಾಯಕನೆಂಬ ಹಣೆಪಟ್ಟಿ ಕಟ್ಟಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಮತಗಳನ್ನು ಹೊಡೆಯಬೇಕೆಂಬ ಆಂತರಿಕ ಒಪ್ಪಂದವಾಗಿದೆ. ಇದನ್ನು ಮುಚ್ಚಿಟ್ಟುಕೊಳ್ಳುವ ನಾಟಕ ಆಡುತ್ತಿದ್ದಾರೆ ಎಂದು ಆರೋಪಿಸಿದರು.
    ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಶಿ.ಜು.ಪಾಶಾ, ಡಾ. ನೇತ್ರಾವತಿ, ಜಿ.ಪದ್ಮನಾಭ, ಜಿ.ಡಿ.ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts