More

    ಈಶ್ವರ ದೇವಳ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

    ಕುಂದಾಪುರ: ಕೋಡಿ ಕನ್ಯಾನದಲ್ಲಿ ಕಳೆದ ಐದಾರು ಶತಮಾನಗಳ ಹಿಂದೆ ಪ್ರತಿಷ್ಠಾಪನೆಗೊಂಡಿದ್ದೆಂದು ಹೇಳಲಾದ, ಜೀರ್ಣಾವಸ್ಥೆಯಲ್ಲಿದ್ದ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.

    ರತ್ನಾಕರ ಸೋಮಯಾಜಿ ಮಾರ್ಗದರ್ಶನದಲ್ಲಿ ಅರ್ಚಕ ಸುಬ್ರಾಯ ಐತಾಳ ಮತ್ತು ಕರುಣಾಕರ ಐತಾಳ ಸಹಕಾರದೊಂದಿಗೆ, ಆನುವಂಶೀಯ ಆಡಳಿತ ಮೊಕ್ತೇಸರ ನಾಗೇಂದ್ರ ನಾವಡ ದಂಪತಿ ಧಾರ್ಮಿಕ ನೆರವೇರಿಸಿದರು.
    75 ಲಕ್ಷ ರೂ.ವೆಚ್ಚದಲ್ಲಿ ದೇವಾಲಯ ಮರು ನಿರ್ಮಿಸುವ ಯೋಜನೆ ಸಿದ್ಧವಾಗಿದೆ.

    ಸರ್ಕಾರಿ ದಾಖಲೆಗಳಲ್ಲಿ ಸೋಮೇಶ್ವರ ಎಂದು ನಮೂದಾಗಿದ್ದು, ಗ್ರಾಮಸ್ಥರು ಉಮಾಮಹೇಶ್ವರ ಎಂದು ನಂಬಿಕೊಂಡಿದ್ದಾರೆ. ಹಿಂದೆ ವಿದ್ಯಾಸಂಸ್ಥೆಗಳ ಮಠ ಇದ್ದಿರಬೇಕು. ಹಾಗಾಗಿ ಈ ಶಿವ ದೇವಾಲಯ ಕೋಡಿ ಕನ್ಯಾನದ ಕನ್ಯಾನ ಮಠ ಎಂದೇ ಪ್ರಸಿದ್ಧಿಯಾಗಿದೆ.

    ಶಿಲಾಮಯ ಗರ್ಭಗುಡಿಯ ಶಿಲ್ಪಿ ಮಂಜುನಾಥ, ಗುತ್ತಿಗೆದಾರ ಕೃಷ್ಣಮೂರ್ತಿ ಐತಾಳ, ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಮೆಂಡನ್, ನಿವೃತ್ತ ಉಪನ್ಯಾಸಕ ಶ್ರೀಧರ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಊರ, ಪರವೂರ ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts