More

    ಇದಪ್ಪಾ ಅದೃಷ್ಟ ಅಂದ್ರೆ! ರಾತ್ರೋರಾತ್ರಿ 7 ಕೋಟಿ ರೂ. ಒಡೆಯನಾದ ಕೇರಳಿಗ..!

    ದುಬೈ: ಅಬುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ಭರ್ಜರಿ ಬಹುಮಾನ ಒಲಿದಿದೆ.

    ದುಬೈನಲ್ಲಿ ಕೆಲಸ ಮಾಡುತ್ತಿರುವ ಎರ್ನಾಕುಲಂ ಮೂಲದ ಸೂರಜ್​ ಅನೀದ್​ (35) ಅವರಿಗೆ ಲಕ್ಕಿ ಡ್ರಾನಲ್ಲಿ ಬರೋಬ್ಬರಿ ಒಂದು ಮಿಲಿಯನ್​ ಯುಎಸ್​ ಡಾಲರ್ (7 ಕೋಟಿ ರೂ.) ಬಹುಮಾನ ಬಂದಿದೆ. ಸೂರಜ್​ ಅವರು ಜನವರಿ 20ರಂದು ಆನ್​ಲೈನ್​ ಮೂಲಕ ಟಿಕೆಟ್​ ಖರೀದಿಸಿದ್ದರು. ​

    ಇದನ್ನೂ ಓದಿರಿ: ವೈದ್ಯರು ರಾತ್ರಿ ಸಮಯದಲ್ಲೇಕೆ ಶವಪರೀಕ್ಷೆ ಮಾಡುವುದಿಲ್ಲ? ಸತ್ಯ ತಿಳಿದ್ರೆ ನೀವು ಶಾಕ್​ ಆಗೋದು ಖಂಡಿತ!

    350ನೇ ಸರಣಿಯ ಟಿಕೆಟ್ ಸಂಖ್ಯೆ 4645 ಮೂಲಕ ಸೂರಜ್ ಅದೃಷ್ಟಶಾಲಿ ವಿಜೇತರಾಗಿದ್ದಾರೆ. ತಾವು ಜಯಶಾಲಿ ಆಗಿರುವ ವಿಚಾರ ಫೇಸ್​ಬುಕ್ ಲೈವ್​​ ಮೂಲಕ ಸೂರಜ್​ ಅವರಿಗೆ ತಿಳಿದಿದೆ. ವಿಜೇತರನ್ನು ಘೋಷಿಸಿದಾಗ ನನ್ನನ್ನು ನಾನೇ ನಂಬಲು ಆಗಲಿಲ್ಲ ಎಂದು ಸೂರಜ್​ ಹೇಳಿಕೊಂಡಿದ್ದಾರೆ.

    ಅಂದಹಾಗೆ ಸೂರಜ್​ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ವಿಜೇತರಾದ 175ನೇ ಭಾರತೀಯರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸೂರಜ್​ ಯುಎಇನಲ್ಲಿ ನೆಲೆಸಿದ್ದಾರೆ. ಬ್ಯಾಂಕ್​ ಒಂದರ ಕಸ್ಟಮರ್​ ಕೇರ್​ ವಿಭಾಗದಲ್ಲಿ ಸೂರಜ್​ ಕೆಲಸ ಮಾಡುತ್ತಿದ್ದು, ಅಬುದಾಬಿಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸವಿದ್ದಾರೆ. (ಏಜೆನ್ಸೀಸ್​)

    ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮುಂದಾದ ದಂಪತಿ: ಆದರೆ, ವಿಧಿಯಾಟವೇ ಬೇರೆ ಇತ್ತು!

    ಒಂದೆಡೆ ಪತ್ನಿ, ಇನ್ನೊಂದೆಡೆ ಮದುವೆಯಾಗಲು ಪ್ರೇಯಸಿ ಒತ್ತಾಯ- ಮೈಸೂರಿನಲ್ಲಿ ಬಿತ್ತು ಎರಡು ಹೆಣ!

    ಪ್ರೇಮಿಗಳಿಬ್ಬರ ಪ್ರೇಮ ವಿವಾಹಕ್ಕೆ ಬಲಿಯಾಯ್ತು ಲಕ್ಷಾಂತರ ರೂ. ಮೌಲ್ಯದ ಅಡಿಕೆ ಗಿಡಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts