More

    ಡಿ.21ರಿಂದ ಎರ್ಮಾಳು ಶ್ರೀ ಜನಾರ್ದನ ದೇವಳ ಬ್ರಹ್ಮಕಲಶೋತ್ಸವ

    ಪಡುಬಿದ್ರಿ: ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿ.21ರಿಂದ 29ರವರೆಗೆ ನಡೆಯಲಿದ್ದು, 28ರಂದು ಬೆಳಗ್ಗೆ 8.58ಕ್ಕೆ ಜನಾರ್ದನ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ.

    21ರಂದು ಸಾಯಂಕಾಲ 5 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ಧಾರ್ಮಿಕ ವಿಧಿಗಳು ನಡೆದು, 24ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ, 28ರಂದು ಮಧ್ಯಾಹ್ನ 11.30ಕ್ಕೆ ರಥಾರೋಹಣ, ರಾತ್ರಿ 9 ಗಂಟೆಗೆ ರಥೋತ್ಸವ ಹಾಗೂ ಪ್ರತಿ ದಿನ ಸಾಯಂಕಾಲ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನೆರವೇರಲಿದೆ. 30ರಂದು ಸಾಯಂಕಾಲ 5 ಗಂಟೆಗೆ ಪುಣೆ ಉದ್ಯಮಿ ನೈಮಾಡಿ ನಾರಾಯಣ ಕೆ. ಶೆಟ್ಟಿ ಮತ್ತು ಲಕ್ಷ್ಮೀನಾರಾಯಣ ಶೆಟ್ಟಿ ವತಿಯಿಂದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಂಪನ್ನಗೊಳ್ಳಲಿದೆ. ವರ್ಷಾವಧಿ ರಥೋತ್ಸವ ಪ್ರಯುಕ್ತ 16ರಂದು ಧ್ವಜಾರೋಹಣ ಹಾಗೂ 20ರಂದು ರಥೋತ್ಸವ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ವೈ.ಅಶೋಕ ರಾಜ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎರ್ಮಾಳು ಉದಯ ಕೆ.ಶೆಟ್ಟಿ ದೇವಸ್ಥಾನದಲ್ಲಿ ಸೋಮವಾರ ಆಮಂತ್ರಣ ಬಿಡುಗಡೆ ಮಾಡಿ ಉತ್ಸವದ ಮಾಹಿತಿ ನೀಡಿದರು.

    ಜನಾರ್ದನ ಜನಕಲ್ಯಾಣ ಸೇವಾ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ನೈಮಾಡಿ ನಾರಾಯಣ ಶೆಟ್ಟಿ ಪೇಟೆಮನೆ, ಕಿಶೋರ್ ಶೆಟ್ಟಿ ಎರ್ಮಾಳು, ವ್ಯಾಸಮೋಹನ ರಾವ್. ಜಿನರಾಜ ಎರ್ಮಾಳು, ಬಾಲಚಂದ್ರ ಎರ್ಮಾಳು, ಪ್ರಭಾಕರ ಸಾಲ್ಯಾನ್, ಸಂತೋಷ ಜೆ.ಶೆಟ್ಟಿ, ದಿನೇಶ್ ಎರ್ಮಾಳು, ಸತೀಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಎರ್ಮಾಳು ರಾಮಕೃಷ್ಣ ರಾವ್ ಪ್ರಾರ್ಥಿಸಿದರು. ರಮಾನಂದ ಭಟ್ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts