More

    2022-23ನೇ ಸಾಲಿಗೆ ನೌಕರರ ಇಪಿಎಫ್​ ಠೇವಣಿಗೆ ಶೇ. 8.15 ಬಡ್ಡಿದರ ನಿಗದಿ: ಉದ್ಯೋಗಿಗಳಿಗೆ ನಿರಾಸೆ

    ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ)ಯು 2022-23ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ 8.15ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ.

    2021-22ನೇ ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ನೌಕರರ ಭವಿಷ್ಯ ನಿಧಿಯ ಬಡ್ಡಿದರ ಕೇವಲ ಶೇ. 0.5ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 8.1 ರಷ್ಟಿತ್ತು. ನಾಲ್ಕು ದಶಕಗಳಲ್ಲೇ ಅತಿ ಕಡಿಮೆ ದರವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಇಪಿಎಫ್​ ಬಡ್ಡಿದರದಲ್ಲಿ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಸುಮಾರು 5 ಕೋಟಿ ಇಪಿಎಫ್​ಒ ಚಂದಾದಾರರಿಗೆ ಅಸಮಾಧಾನ ತರಿಸಿದೆ.

    ಆದಾಗ್ಯೂ, ಶಿಫಾರಸು ಮಾಡಲಾದ ಶೇಕಡ 8.15 ರ ಬಡ್ಡಿದರವು ಹೆಚ್ಚುವರಿ ಹೊರೆಯಿಂದ ರಕ್ಷಿಸುತ್ತದೆ ಮತ್ತು ಸದಸ್ಯರಿಗೆ ಹೆಚ್ಚಿನ ಆದಾಯವನ್ನು ಖಾತರಿಪಡಿಸುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

    ಇದನ್ನೂ ಓದಿ: ಸಾವರ್ಕರ್ ವಿರುದ್ಧದ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು… ಇಲ್ಲವಾದರೆ ದೂರು ದಾಖಲಿಸುತ್ತೇನೆ; ರಂಜಿತ್ ಸಾವರ್ಕರ್

    ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್​ಒ) ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2022-23ಕ್ಕೆ ಇಪಿಎಫ್‌ನಲ್ಲಿ ಶೇಕಡ 8.15 ರ ಬಡ್ಡಿದರವನ್ನು ಮಂಗಳವಾರ ನಡೆದ ಸಭೆಯಲ್ಲಿ ನೀಡಲು ನಿರ್ಧರಿಸಿದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ನಿರ್ಧಾರದ ನಂತರ, 2022-23ರ ಇಪಿಎಫ್​ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಇಪಿಎಫ್​ಒ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಅನುಮೋದಿಸುತ್ತದೆ.

    2018-20 ರಲ್ಲಿ ಶೇ. 8.65 ಇದ್ದ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20 ಕ್ಕೆ ಏಳು ವರ್ಷಗಳ ಕನಿಷ್ಠ ಶೇ. 8.5ಕ್ಕೆ ಇಳಿಸಿತು. EPFO ತನ್ನ ಚಂದಾದಾರರಿಗೆ 2016-17 ರಲ್ಲಿ ಶೇ. 8.65 ಬಡ್ಡಿದರವನ್ನು ಮತ್ತು 2017-18 ರಲ್ಲಿ ಶೇ. 8.55 ಬಡ್ಡಿದರ ಒದಗಿಸಿದೆ. 2015-16ರಲ್ಲಿ ಶೇ.8.8ರಷ್ಟು ಬಡ್ಡಿದರ ಸ್ವಲ್ಪ ಹೆಚ್ಚಿದ್ದರೆ, 2013-14ರಲ್ಲಿ ಹಾಗೂ 2014-15ರಲ್ಲಿ ಶೇ.8.75ಕ್ಕೆ ನಿಗದಿಪಡಿಸಲಾಗಿತ್ತು. 2012-13ರಲ್ಲಿ ಮತ್ತೆ ಶೇ.8.5 ಮತ್ತು 2011-12ರಲ್ಲಿ ಶೇ.8.25ರಷ್ಟಿತ್ತು. (ಏಜೆನ್ಸೀಸ್​)

    ರಾಹುಲ್​ ಗಾಂಧಿ ಅನರ್ಹತೆ ವಿಚಾರ: ಅಮೆರಿಕ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

    ಕೋಲಾರ | ಚಾಕು ಇರಿದು ಮಗನನ್ನೇ ಹತ್ಯೆಗೈದ ತಂದೆ!

    “ಜೈ ಶ್ರೀ ರಾಮ್” ಕೂಗಲು ನಿರಾಕರಿಸಿದ ಅನ್ಯಧರ್ಮದವನ ಗಡ್ಡ ಕತ್ತರಿಸಿ ಪರಾರಿಯಾದ ಮುಸುಕುಧಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts