More

    ಅಂಗಡಿಗಳ ಮೇಲೆ ದಾಳಿ, 150 ಕೆಜಿ ಪ್ಲಾಸ್ಟಿಕ್ ವಶ

    ಸಿರಗುಪ್ಪ: ಪರಿಸರ ಹಾನಿಗೆ ಕಾರಣವಾಗುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ನಗರದ ಅಂಗಡಿಗಳಲ್ಲಿ ಅವುಗಳ ಬಳಕೆ ನಿಂತಿಲ್ಲ. ಇದನ್ನರಿತ ನಗರಸಭೆ ಅಧಿಕಾರಿಗಳು ಅಂಗಡಿಗಳ ಮೇಲೆ ಬುಧವಾರ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು ವ್ಯಾಪಾರಸ್ಥರಿಗೆ ದಂಡ ಹಾಕಿದ್ದಾರೆ. ನಗರ ವ್ಯಾಪ್ತಿಯ ವ್ಯಾಪಾರ ಮಳಿಗೆಗಳು, ರಸ್ತೆ ಬದಿ ವ್ಯಾಪಾರಸ್ಥರು, ಫಾಸ್ಟ್ ಫುಡ್ ಅಂಗಡಿಗಳು, ಹೋಟೆಲ್‌ಗಳ ಮೇಲೆ ದಾಳಿ ಮಾಡಿದ ನಗರಸಭೆ ಜಾಗೃತ ತಂಡ, 150 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು ಅಲ್ಲದೆ ವ್ಯಾಪಾರಸ್ಥರಿಗೆ 2 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದೆ.
    ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ವ್ಯಾಪಾರಸ್ಥರು ಬಳಕೆ ಮಾಡಿದರೆ ದಂಡ ವಿಧಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಆರೋಗ್ಯ ನಿರೀಕ್ಷ ರಂಗಸ್ವಾಮಿ ಪ್ಲಾಸ್ಟಿಕ್ ಬಳಸುವ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.
    ಇದನ್ನೂ ಓದಿ:
    ಆರೋಗ್ಯ ನಿರೀಕ್ಷಕಿ ಸ್ವರ್ಣಲತಾ, ನಗರಸಭೆ ಸಿಬ್ಬಂದಿ ಕೆ.ವೀರೇಶ, ಯೋಗರಾಜ, ಹುಲುಗಪ್ಪ, ವಿನಯಕುಮಾರ್, ಖಾಲೀಲ್, ಎಂ.ಮಲ್ಲಿಕಾರ್ಜುನ, ಕೆ.ಮಲ್ಲಿಕಾರ್ಜುನ, ಕೆ.ನಾಗರಾಜ, ಸೋಮಶೇಖರ, ಭೀಮದತ್ ಇದ್ದರು.
    (12.ಸಿರಗುಪ್ಪ.01)
    ಸಿರಗುಪ್ಪ ನಗರಸಭೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ಪ್ಲಾಸ್ಟಿಕ್ ವಸ್ತುಗಳೊಂಡಿಗೆ ಹಿರಿಯ ಆರೋಗ್ಯ ನಿರೀಕ್ಷ ರಂಗಸ್ವಾಮಿ, ಆರೋಗ್ಯ ನಿರೀಕ್ಷಕಿ ಸ್ವರ್ಣಲತಾ, ಸಿಬ್ಬಂದಿ ಕೆ.ವೀರೇಶ, ಯೋಗರಾಜ, ಹುಲುಗಪ್ಪ, ವಿನಯಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts