More

    ಪರಿಸರ ಸೇವಾ ಕಾರ್ಯ ಎಲ್ಲರಿಗೂ ಮಾದರಿ

    ಸಿಂಧನೂರು: ಪರಿಸರ ಸೇವಾ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಇಂಥ ಸೇವೆಯನ್ನು ಕೈಗೊಳ್ಳುವುದರಿಂದ ಪರಿಸರ ಸಂಕ್ಷರಣೆ ಸಾಧ್ಯ ಎಂದು ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ದೇಶಾದ್ಯಂತ 10 ಸಾವಿರ ಇ-ಬಸ್‌ ಬಿಡಲು ಕೇಂದ್ರ ಸರ್ಕಾರ ನಿರ್ಧಾರ, ಪರಿಸರ ಸ್ನೇಹಿ ಪ್ರಯಾಣಿಕ ಸಾರಿಗೆ ಬಳಕೆಗಾಗಿ ‘ಪಿಎಂ ಇ ಬಸ್‌ ಸೇವಾ’ ಯೋಜನೆ

    ನಗರದ ಮೂರುಮೈಲ್‌ಕ್ಯಾಂಪ್‌ನ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ದೇವಸ್ಥಾನ ಆವರಣದಲ್ಲಿ ಭಾನುವಾರ ಸಂಡೇ ಫಾರ್ ಸೋಷಿಯಲ್ ವರ್ಕ್ ಮಸ್ಕಿ ಹಾಗೂ ವನಸಿರಿ ಫೌಂಡೇಷನ್ ತಂಡ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅಭಿನಂದನ್ ಸಂಸ್ಧೆಯ ಕಳೆದ 118 ವಾರಗಳಿಂದ ಈ ಸೇವಾ ಕಾರ್ಯ ಮಾಡುತ್ತಿದ್ದು. ಕೈಜೋಡಿಸಿದ ವನಸಿರಿ ತಂಡ ಮಹಾತ್ಮ ಗಾಂಧೀಜಿ ಕನಸು ನನಸು ಮಾಡುವತ್ತ ನಿರಂತರ ಪ್ರಯತ್ನ ಮಾಡುವುದರ ಜತೆಗೆ ಸಾವಿರಾರು ಯುವಕರಿಗೆ ಪ್ರೇರಣೆ ಆಗಿದೆ ಎಂದರು.

    ವನಸಿರಿ ಫೌಂಡೇಷನ್ ಅಧ್ಯಕ ಅಮರೇಗೌಡ ಮಲ್ಲಾಪುರ, ವನಸಿರಿ ಫೌಂಡೇಷನ್ ಗೌರವಾಧ್ಯಕ್ಷ ಶಂಕರಗೌಡ ಎಲೆಕುಡ್ಲಗಿ, ಪರಿಸರ ಪ್ರೇಮಿ ಸುರೇಶ ನೆಕ್ಕುಂಟಿ, ಅವಿನಾಶ ದೇಶಪಾಂಡೆ, ಚನ್ನವೀರನಗೌಡ, ಮುದಿಯಪ್ಪ ಹೊಸಳ್ಳಿಕ್ಯಾಂಪ್, ದೇವರಾಜ, ಅಭಿನಂದನ್ ಸಂಸ್ಧೆಯ ರಾಮಣ್ಣ ಹಂಪರಗುಂದಿ, ಜಾಫರ್‌ಮಿಯಾ, ಅಮಿತಕುಮಾರ ಪುಟ್ಟಿ, ಅಮರೇಶ್ ಕಿಲ್ಲಾರೆಹಟ್ಟಿ, ಬಸಲಿಂಗಪ್ಪ ಬಾದರ್ಲಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts