More

    ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯ

    ಲಿಂಗಸುಗೂರು: ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದ ಮಾರ್ಗಸೂಚಿಯಂತೆ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಮತ್ತು ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಮುಖಂಡರು ಎಸಿ ಅವಿನಾಶ ಶಿಂಧೆರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ಹೈಕೋರ್ಟ್

    ಗಣೇಶೋತ್ಸವ ವೇಳೆ ಸಾರ್ವಜನಿಕ ಮತ್ತು ಮನೆ ಮನೆಗಳಲ್ಲಿ ಪಿಒಪಿ ರಸಾಯನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸುತ್ತ ಬರಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಪರಿಸರ ಸಚಿವಾಲಯದ ಮಾರ್ಗಸೂಚಿಯಂತೆ ಮಾನ ದಂಡ ನಿಯಮ ಪಾಲನೆ ಮಾಡುವುದು ಎಲ್ಲರ ಕರ್ತವ್ಯ.

    ಸಂಘ-ಸಂಸ್ಥೆಗಳು ಸಾರ್ವಜನಿಕವಾಗಿ ಸ್ಥಾಪಿಸುವ ಪಿಒಪಿ ರಸಾಯನಿಕ ಗಣೇಶ ಮೂರ್ತಿಗಳಿಂದ ಪರಿಸರ ಹಾನಿಯಾಗಲಿದೆ. ಪಿಒಪಿ ಮೂರ್ತಿಗಳಿಗೆ ವಿಷಯುಕ್ತ ಬಣ್ಣ ಲೇಪನ ಮಾಡಲಾಗುತ್ತದೆ.

    ಬಾವಿ, ಕೆರೆ, ನದಿ, ನಾಲೆಗಳಲ್ಲಿ ಗಣೇಶ ವಿಸರ್ಜಸಿದ ವೇಳೆ ವಿಷ ಅಂಶ ನೀರಲ್ಲಿ ವಿಲಿನವಾಗುತ್ತದೆ. ಇದರಿಂದ ಮಾನವ ಮತ್ತು ಜಾನುವಾರುಗಳ ಮೇಲೆ ದುಷ್ಪರಿಣಾಮ ಬೀರಲಿದೆ.

    ಪಿಒಪಿ ಗಣೇಶ ಮೂರ್ತಿ ತಯಾರಿಸುವವರ ಮೇಲೆ ಕಾನೂನು ಕ್ರಮ ಕೈಗೊಂಡು ಮಣ್ಣಿನ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಸಂಘಟನೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ, ಗಣೇಶ, ವೆಂಕಟೇಶ, ಯಮನಪ್ಪ, ಶರಣಪ್ಪ, ಬಡೇಸಾಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts