More

    ಪರಿಸರ ಸಂರಕ್ಷಣೆಗೆ ಮುಂದಾಗಿ

    ರಾಯಚೂರು: ಕಲುಷಿತ ವಾತಾವರಣ ಹಾಗೂ ನೀರಿನಿಂದ ಕಾಯಿಲೆಗಳು ಹರಡುತ್ತಿದ್ದು, ಜನರು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದಾರ್ ಹೇಳಿದರು.

    ಇದನ್ನೂ ಓದಿ: ಪರಿಸರ ಸಂರಕ್ಷಣೆ ಸವಾಲಿನ ಕೆಲಸ; ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಅಭಿಮತ

    ಉಡಮಗಲ್ ಖಾನಾಪುರ ಗ್ರಾಮದಲ್ಲಿ ಜಿಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯಇಲಾಖೆಯಿಂದ ಆಯೋಜಿಸಿದ್ದ ಶುದ್ಧ ಕುಡಿವ ನೀರಿನ ಜಾಗೃತಿ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಶನಿವಾರ ಮಾತನಾಡಿದರು.

    ಪರಿಸರ ಮಾಲಿನ್ಯಕ್ಕೆ ಜನರೇ ಕಾರಣ

    ಪರಿಸರ ಮಾಲಿನ್ಯಕ್ಕೆ ಜನರೇ ಕಾರಣರಾಗಿದ್ದು, ಶಬ್ದ, ವಾಯು ಮಾಲಿನ್ಯ, ಅತಿಯಾದ ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಭೂಮಿ ಮಲಿನವಾಗಿ ನೀರು ವಿಷವಾಗುತ್ತಿದೆ.

    ಹೀಗಾಗಿ ಮಾಲಿನ್ಯಕಾರಕ ವಸ್ತುಗಳನ್ನು ಬಳಸದೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದರು. ಗ್ರಾಪಂ ಸದಸ್ಯರಾದ ಈರಮ್ಮ, ಶಿವಪ್ಪ, ಕಾರ್ಯದರ್ಶಿ ಶಾಂತಪ್ಪ, ಹುಸೇನಪ್ಪ, ಈರಪ್ಪ ಯಾದವ್, ಶ್ರೀನಿವಾಸ್ ಖಾನಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts