More

    ವಿವಿಧ ಹಳ್ಳಿಗಳ ಪ್ರವೇಶ ದ್ವಾರ ಬಂದ್

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ / ಕುಂದಗೋಳ

    ಕರೊನಾ ವೈರಸ್ ತಡೆಯಲು ಜಿಲ್ಲೆಯ ವಿವಿಧೆಡೆ ಜನರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

    ಧಾರವಾಡ ತಾಲೂಕಿನ ಪ್ರಭುನಗರ ಹೊನ್ನಾಪುರ ಗ್ರಾಮದ ಜನರು ಒಗ್ಗಟ್ಟಿನಿಂದ ಕೈ ಜೋಡಿಸಿದ್ದಾರೆ. ಗ್ರಾಮದ ಮುಖ್ಯ ರಸ್ತೆ ಸೇರಿ ಎಲ್ಲ ರಸ್ತೆಗಳಿಗೂ ಬೇಲಿ ಹಾಕುವ ಮೂಲಕ ಹೊರಗಿನಿಂದ ಯಾರೂ ಗ್ರಾಮ ಪ್ರವೇಶ ಮಾಡದಂತೆ ಹಾಗೂ ಗ್ರಾಮದ ಜನರು ಹೊರ ಹೋಗದಂತೆ ದಿಗ್ಬಂಧನ ಹಾಕಿದ್ದಾರೆ. ಪ್ರಭುನಗರ ಹೊನ್ನಾಪುರ ಧಾರವಾಡ-ಗೋವಾ ಪ್ರಮುಖ ಮಾರ್ಗಕ್ಕೆ ಹೊಂದಿರುವ ಗ್ರಾಮವಾಗಿದೆ. ಹೀಗಾಗಿ ಈ ಭಾಗದಲ್ಲಿ ಜನರ ಪ್ರವೇಶ ತಡೆಗಟ್ಟುವ ಹಿನ್ನೆಲೆಯಲ್ಲಿ ಗುರುವಾರ ಗ್ರಾಮದ ರಸ್ತೆಗಳಲ್ಲಿ ಗಿಡಗಳನ್ನು ಅಡ್ಡಲಾಗಿ ಇಡುವ ಮೂಲಕ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಸ್ತಬ್ಧತೆ ಆದೇಶ ಮುಗಿಯುವ ವರೆಗೂ ಈ ದಿಗ್ಬಂಧನ ಮುಂದುವರಿಸುತ್ತೇವೆ. ಗ್ರಾಮದಲ್ಲಿ ಯಾರಿಗಾದರೂ ತೊಂದರೆಯಾದರೆ ಪರಸ್ಪರರು ಸಹಾಯ-ಸಹಕಾರ ನೀಡುವ ಮೂಲಕ ಪರಿಹರಿಸಿಕೊಳ್ಳುತ್ತೇವೆ. ಈ ಲಾಕ್​ಡೌನ್ ಅವಧಿ ಯನ್ನು ಊರಿನಲ್ಲಿಯ ಒಗ್ಗಟ್ಟು ಹೆಚ್ಚಿಸಿ ಕೊಳ್ಳುವ ಅವಕಾಶವಾಗಿ ಪರಿವರ್ತಿಸಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ಗ್ರಾಮಸ್ಥರೇ ಮರದ ಕೆಳಗಿನ ಕಟ್ಟೆಗಳ ಮೇಲೆ ಡಾಂಬರ್ ಹಾಕá-ವ ಮೂಲಕ ಅನವಶ್ಯಕವಾಗಿ ಜನರು ಗುಂಪುಗೂಡá-ವುದನ್ನು ತಡೆದಿದ್ದಾರೆ.

    ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಜನ ಊರಿನ ಪ್ರಮುಖ ದ್ವಾರಗಳಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ಬೇರೆ ಕಡೆಗಳಿಂದ ಬರುವ ವಾಹನ ಹಾಗೂ ಜನರನ್ನು ತಡೆದು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ, ಗ್ರಾಮದ ಬಹುತೇಕರು ಮಾಸ್ಕ್ ಹಾಕಿಕೊಂಡಿದ್ದ ದೃಶ್ಯ ಕಂಡು ಬಂತು. ರೋಗ ತಡೆಯಲು ಮುಂಜಾಗ್ರತೆ ಕ್ರಮವಾಗಿ ನಿತ್ಯವೂ ಇದೇ ರೀತಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಿಡಿಒ ಬಿ.ಕೆ. ಬಾಗಲ ತಿಳಿಸಿದ್ದಾರೆ. ಗ್ರಾ.ಪಂ. ಸದಸ್ಯರಾದ ಸಿ.ಬಿ. ಹರಕುಣಿ, ಗೆಳೆಯರ ಬಳಗದವರಾದ ಚಂದ್ರು ಕುಂದಗೋಳ, ಈಶ್ವರಗೌಡ ಚನ್ನವೀರಗೌಡ್ರ, ಗಂಗಾಧರ ಜವಾಯಿ, ವೀರಭದ್ರಗೌಡ ಚಿಕ್ಕನಗೌಡ್ರ, ವೀರಣ್ಣ ನೂಲ್ವಿ, ಈರಪ್ಪ ಅಗಡಿ , ದೇವಿಂದ್ರ ದಂಡಿನ, ಶಂಭು ಅಂಗಡಿ ಯಲ್ಲಪ್ಪ ದುಂಡಪ್ಪನವರ, ಯಲ್ಲಪ್ಪ ತಳವಾರ, ವಿನಯ ಕುಂದಗೋಳ , ರಾಜು ಹೋಳಲನಗೌಡ್ರ ಷಣ್ಮುಖ ಹರಕುಣಿ, ವೀರೇಶ ಜವಾಯಿ ಇತರರಿದ್ದರು.

    ಅರಳಿಕಟ್ಟಿಗೆ ಪ್ರವೇಶ ಇಲ್ಲ: ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮಸ್ಥರು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೇ ಬಂದ್ ಮಾಡಿದ್ದಾರೆ. ಊರಿನಿಂದ ಯಾರೂ ಹೊರಗೆ ಹೋಗುತ್ತಿಲ್ಲ. ಹೊರಗಿನಿಂದ ಬರುವಂತೆಯೂ ಇಲ್ಲ. ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಪಿಡಿಒ ಎಸ್.ಎಚ್. ಜಗೆದ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ್ದರು. ಅದಕ್ಕೆ ಸ್ಪಂದಿಸಿ ಊರಿನ ಯುವಕರು, ಹಿರಿಯರ ಗಮನಕ್ಕೆ ತಂದು ರಸ್ತೆ ಬಂದ್ ಮಾಡಿಸಿದ್ದಾರೆ. ಏನಾದರೂ ಸಮಸ್ಯೆ ಉಂಟಾದಲ್ಲಿ ಪರಸ್ಪರ ಸಹಾಯ-ಸಹಕಾರದಿಂದ ಪರಿಹರಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts