More

    VIDEO| ಕೊಮೊಡೊ ಡ್ರ್ಯಾಗನ್ಸ್​ ಕಾದಾಟದ ಅಪರೂಪದ ವಿಡಿಯೋ ನೋಡುವುದನ್ನು ಮಿಸ್​ ಮಾಡ್ಕೋಬೇಡಿ!

    ಜಕಾರ್ತ: ತಮ್ಮ ಪ್ರಾಬಲ್ಯವನ್ನು ಮೆರೆಯಲು ಅಖಾಡಕ್ಕಿಳಿದ ನಾಲ್ಕು ಕೊಮೊಡೊ ಡ್ರ್ಯಾಗನ್​ಗಳು ಕಾದಾಡುವ ಅಪರೂಪದ ವಿಡಿಯೋವೊಂದು ರೋಚಕವಾಗಿದೆ. ಇದನ್ನು ನ್ಯೂಯಾರ್ಕ್​ ಪೋಸ್ಟ್ ವರದಿ ಮಾಡಿದೆ.

    ಇಂಡೋನೇಷ್ಯಾದ ಕೊಮೊಡೋ ದ್ವೀಪದಲ್ಲಿರುವ ಕೊಮೊಡೊ ರಾಷ್ಟ್ರೀಯ ಉದ್ಯಾನವನದಲ್ಲಿ ರೇಂಜರ್​ ಕೊನ್​ಸ್ಟ್ಯಾಂಟಿನಸ್​ ಮುಗಾ ಎಂಬುವರು ಗಸ್ತು ತಿರುಗುವಾಗ ಡ್ರ್ಯಾಗನ್​ಗಳ ಕಾದಾಟದ ದೃಶ್ಯವನ್ನು ಸೆರೆಹಿಡಿದಿದ್ದಾರೆ.

    ವಿಡಿಯೋದಲ್ಲಿರುವಂತೆ ಪ್ರಾರಂಭದಲ್ಲಿ ಎರಡು ಡ್ರ್ಯಾಗನ್​ಗಳು ಒಂದಕ್ಕೊಂದು ಮೇಲೆದ್ದು ಕಾದಾಟ ನಡೆಸಿರುತ್ತದೆ. ಅಲ್ಲಿಗೆ ಮತ್ತೆರೆಡು ಡ್ರ್ಯಾಗನ್​ ಬಂದು ಸೇರುತ್ತವೆ. ಬಳಿಕ ನಾಲ್ಕು ಡ್ರ್ಯಾಗನ್​ಗಳು ಕಾದಾಟಕ್ಕೆ ಇಳಿಯುತ್ತವೆ. ಅದರಲ್ಲಿ ಒಂದು ಬೃಹತ್​ ಡ್ರ್ಯಾಗನ್ ಸುಮಾರು 8 ಅಡಿ ಎತ್ತರ ನಿಂತು​ ತನ್ನ ಎದುರಾಳಿಯನ್ನು ಕೆಳಗೆ ಬೀಳಿಸಿ ಅದರ ಮೇಲೆ ಬೀಳುವ ಮೂಲಕ ಕಾದಾಟದಲ್ಲಿ ಜಯಿಸುತ್ತದೆ.

    ಇದೊಂದು ಅತ್ಯದ್ಭುತ ಕಾದಾಟದ ದೃಶ್ಯವೆಂದು ರೇಂಜರ್​ ಕೊನ್​ಸ್ಟ್ಯಾಂಟಿನಸ್​ ಮುಗಾ ಅವರು ಬಣ್ಣಿಸಿದ್ದಾರೆ. ಜೊತೆಯಾಗಿ ಕಾದಾಟ ನಡೆಸುವುದನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಆದರೆ, ಗುಂಪಾಗಿ ಕಾದಾಡುವುದನ್ನು ಎಂದಿಗೂ ನೋಡಿರಲಿಲ್ಲ ಎಂದು ಹೇಳಿದ್ದಾರೆ. ಡ್ರ್ಯಾಗನ್​ಗಳು ಸುಮಾರು 10 ನಿಮಿಷಗಳವರೆಗೂ ಕಾದಾಟ ನಡೆಸಿವೆ. ಆದರೆ, ಇದರಲ್ಲಿ ಯಾವುದಕ್ಕೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

    ಕೊಮೊಡೊ ಡ್ರ್ಯಾಗನ್​ಗಳು ತನ್ನ ಕ್ಷೇತ್ರ ವ್ಯಾಪ್ತಿ ಅಥವಾ ಹೆಣ್ಣಿನ ವಿಚಾರವಾಗಿ ಆಗಾಗ ಕಾದಟಕ್ಕೆ ಇಳಿಯುತ್ತವೆ ಎಂದು ಕೊನ್​ಸ್ಟ್ಯಾಂಟಿನಸ್​ ಮುಗಾ ಹೇಳಿದ್ದಾರೆ. ಕೊಮೊಡೊ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 4000 ಡ್ರ್ಯಾಗನ್​ಗಳಿವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿಡಿಯೋ ಕೃಪೆ: ನ್ಯೂಯಾರ್ಕ್​ ಫೋಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts