More

    ಎಬಿಸಿಡಿ ಬರೆಯಲು ಸೆಣಸಾಡಿದ ಇಂಗ್ಲಿಷ್​​​ ಶಿಕ್ಷಕ! ಪೋಷಕರ ಆಕ್ರೋಶ

    ವಿಜಯಪುರ: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಭೌತಿಕ ತರಗತಿಗಳಿಗಾಗಿ ಪುನಃ ತೆರೆದಿರುವುದು ಮಕ್ಕಳ ಕಲಿಕೆಗೆ ಮತ್ತೆ ಹೊಸ ಉಮ್ಮೀದು ತುಂಬಿದೆ. ಈ ಸಂದರ್ಭದಲ್ಲಿ ಶಾಲೆಗಳತ್ತ ಪಾಲಕರು-ಪೋಷಕರ ಗಮನವೂ ಹೆಚ್ಚಿದೆ. ಮಕ್ಕಳಿಗೆ ಏನೋ ಒಂದು ಹೇಳಿಕೊಟ್ಟು ಹೋದರಾಯಿತು ಎನ್ನುವ ಮನೋಭಾವವನ್ನು ಜನರೀಗ ಒಪ್ಪುತ್ತಿಲ್ಲ.

    ಇಂಥದೇ ನಿದರ್ಶನದಲ್ಲಿ, ಎಬಿಸಿಡಿ ಸರಿಯಾಗಿ ಬರೆಯಲು ಬಾರದ ಶಿಕ್ಷಕನಿಂದ ಇಂಗ್ಲಿಷ್ ಪಾಠ ನಡೆಯುತ್ತಿದ್ದುದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಗುಂದಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಪರಿಸ್ಥಿತಿ ಇರುವುದು ಇಂದು ಬೆಳಕಿಗೆ ಬಂದಿದೆ. ಎಬಿಸಿಡಿಯನ್ನೂ ಸರಿಯಾಗಿ ಹೇಳಲಾಗದ ಶಿಕ್ಷಕನನ್ನು ಅಮಾನತ್ತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಬಾಗಿಲು ತೆರೆದ ಹಾಸನಾಂಬೆ ದೇಗುಲ​: ಜಯಘೋಷ ಮೊಳಗಿಸಿದ ಭಕ್ತರು

    ದೌಲತ್ ದೇವಕುಳೇ ಎಂಬ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಎಬಿಸಿಡಿಯನ್ನು ಪೂರ್ಣವಾಗಿ ಸರಿಯಾದ ಕ್ರಮದಲ್ಲಿ ಬರೆಯಲು ಬರದಿದ್ದರೂ, ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮೊದಲು ಎಬಿಸಿಡಿಯನ್ನು ಬೋರ್ಡ್ ಮೇಲೆ ಸರಿಯಾಗಿ ಬರೆದು ತೋರಿಸಿ ಎಂದು ಪಟ್ಟು ಹಿಡಿದಿದ್ದಾರೆ.  ಶಿಕ್ಷಕ ಎ ಬಿ ಸಿ ಡಿ ಈ ಎಫ್ ಜಿ ಹೆಚ್​ ಐ ಜೆ ಆದ ಮೇಲೆ ಪಿ ಕ್ಯೂ ಬರೆದಿದ್ದು, ನಂತರ ಎಸ್​ ಬಳಿಕ ಡಬ್ಲ್ಯೂ ಅಕ್ಷರ ಬರೆದಿದ್ದು ವಿಡಿಯೋದಲ್ಲಿ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

    ಮೀನು ಹಿಡಿಯಲು ಹೋದವರು ಮರಳಲೇ ಇಲ್ಲ; ನೀರಿನ ರೂಪದಲ್ಲಿ ಎದುರಾದ ಜವರಾಯ

    ಎನ್​ಸಿಬಿ ಅಧಿಕಾರಿಯ ‘ನಿಕಾಹ್’​ ಫೋಟೋ ಹಾಕಿದ ಮಹಾ ಸಚಿವ; ಸಿಕ್ಕಿತು ಖಡಕ್ ಉತ್ತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts