More

    ಆಂಗ್ಲ‌ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಅಸಹಕಾರ ಚಳುವಳಿ

    ಕಾರವಾರ: ಇಂಗ್ಲಿಷ್ ಮಾಧ್ಯಮ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಇಲ್ಲಿನ ಬಜಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಾಲಕರು ಶಾಲೆಯ ವಿರುದ್ಧ ಅಸಹಕಾರ ಚಳುವಳಿ ಪ್ರಾರಂಭಿಸಿದ್ದಾರೆ.
    ಅಕ್ಟೋಬರ್ 30 ರಂದು ನಡೆದ ಸಮುದಾಯ ದತ್ತ ಶಾಲೆ ಕಾರ್ಯಕ್ರಮವನ್ನು ಪಾಲಕರು ಬಹಿಷ್ಕರಿಸಿದ್ದಾರೆ. ಅ.31 ರಂದು ಹಮ್ಮಿಕೊಂಡಿದ್ದ ವಿಜ್ಞಾನ ಪ್ರದರ್ಶನ ಬಹಿಷ್ಕರಿಸಿದ್ದಾರೆ. ನ 2ರಿಂದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸದಿರಲು ನಿರ್ಧರಿಸಿದ್ದಾಗಿ ಪಾಲಕರು ತಿಳಿಸಿದ್ದಾರೆ. ಬುಧವಾರ ಪಾಲಕರು ರಾಘು ನಾಯ್ಕ ನೇತ್ರತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮುತ್ತಿಗೆ ಹಾಕಿ ಸಮಸ್ಯೆ ಹೇಳಿಕೊಂಡರು.
    ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮವಿದೆ. ಪ್ರತಿ ತರಗತಿಯಲ್ಲಿ 30 ರಂತೆ ಒಟ್ಟು 150 ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸೇರಿ ಸಂಪೂರ್ಣ ಆಧುನಿಕ ವ್ಯವಸ್ಥೆ ಇದೆ. ಆದರೆ, 1 ರಿಂದ 5 ನೇ ತರಗತಿಯವರೆಗೆ ಕಲಿಸಲು ಕೇವಲ ಇಬ್ಬರು ಇಂಗ್ಲಿಷ್ ಮಾಧ್ಯಮ ಶಿಕ್ಷಕರಿದ್ದಾರೆ.
    ಇದರಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚುವರಿ ಶಿಕ್ಷಕರನ್ನು ನೀಡಬೇಕು ಎಂಬುದು ಪಾಲಕರ ಒತ್ತಾಯ. ಶಾಸಕರ ಪತ್ರ ಪಡೆದು, ಬೇರೆ ಶಿಕ್ಷಕರ ನಿಯೋಜನೆ ಮಾಡಿದರೂ ಅದಕ್ಕೆ ಅಽಕಾರಿಗಳು ಅವಕಾಶ ನೀಡುತ್ತಿಲ್ಲ. ಆದರೆ, ಶಿಕ್ಷಣ ಇಲಾಖೆ ಸಹಕಾರ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು.

    ಸುತ್ತಲಿನ ಹಲವು ಖಾಸಗಿ ಶಾಲೆಗಳ ಮಕ್ಕಳನ್ನು ಈ ಶಾಲೆಗೆ ತಂದು ಸೇರಿಸುತ್ತಿದ್ದಾರೆ. ಪ್ರತಿ ವರ್ಷ 30 ಸೀಟುಗಳಿಗೆ 150 ಕ್ಕಿಂತ ಹೆಚ್ಚು ಅರ್ಜಿ ಬರುತ್ತಿದೆ. ಶಾಲೆ ಖಾಸಗಿ ಶಾಲೆಗಳಿಹೆ ಪೈಪೋಟಿ ನೀಡುತ್ತಿರುವಾಗ ಶಿಕ್ಷಣಾಧಿಕಾರಿಗಳು ಖಾಸಗಿ ಶಾಲೆಗಳ ಮುಲಾಜಿಗೆ ಒಳಗಾಗಿ ಉದ್ದೆಶಪೂರ್ವಕವಾಗಿ ಶಿಕ್ಷಕರನ್ನು ನೇಮಿಸದೇ ರಾಜ್ಯದಲ್ಲೇ ಮಾದರಿಯಾದ ಸರ್ಕಾರಿ ಶಾಲೆಯಲ್ಲಿ ತೊಂದರೆ ನೀಡುತ್ತಿದ್ದಾರೆ ಎಂಬುದು ಪಾಲಕರ ದೂರು. ಈ ಕುರಿತು ಕ್ರಮ ವಹಿಸುವುದಾಗಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.

    ಇಂದು ಶಾಲೆಯ ಸಮಸ್ಯೆ ಸಂಬಂಧ ಸಭೆಯನ್ನು ಆಯೋಜಿಸಲಾಗಿದೆ. ಅಧಿಕಾರಿಗಳು ಶಾಲೆಗೆ ಆಗಮಿಸಿ ಚರ್ಚಿಸುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts