More

    ಆಶಸ್ ಸರಣಿಗೆ ಇಂಗ್ಲೆಂಡ್ ಆಟಗಾರರ ಸಾಮೂಹಿಕ ಬಹಿಷ್ಕಾರ ?

    ಸಿಡ್ನಿ: ಆಸ್ಟ್ರೇಲಿಯಾದ ಕಠಿಣ ಕ್ವಾರಂಟೈನ್ ನಿಯಮದಿಂದ ಬೇಸರಗೊಂಡಿರುವ ಇಂಗ್ಲೆಂಡ್‌ನ ಸುಮಾರು 10 ಆಟಗಾರರು ಮುಂಬರುವ ಆಶಸ್ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಕುಟುಂಬ ಸದಸ್ಯರಿಗೆ ಪ್ರಯಾಣ ನಿರ್ಬಂಧ ಹಾಗೂ ಕ್ವಾರಂಟೈನ್ ನಿಯಮದ ವಿರುದ್ಧದ ಇಂಗ್ಲೆಂಡ್ ಆಟಗಾರರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ‘ಕ್ರಿಕೆಟ್ ಆಸ್ಟ್ರೇಲಿಯಾದ ವಿರುದ್ಧ ಬೇಸರ ಹೊರಹಾಕಿರುವ ಇಂಗ್ಲೆಂಡ್ ಆಟಗಾರರು, ಒಂದು ವೇಳೆ ಬೇಡಿಕೆಗಳಿಗೆ ಸಮ್ಮತಿ ಸಿಗದಿದ್ದರೆ ಪ್ರವಾಸದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ’ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

    ಇದನ್ನೂ ಓದಿ: ಮೈದಾನಕ್ಕೆ ನುಗ್ಗಿದ್ದ ಇಂಗ್ಲೆಂಡ್ ಪ್ರೇಕ್ಷಕನಿಗೆ ನಿಷೇಧ ಹೇರಿದ ಯಾರ್ಕ್‌ಷೈರ್

    ‘ಹೆಡಿಂಗ್ಲೆಯಲ್ಲಿ ಸಭೆ ನಡೆಸಿದ ಆಟಗಾರರು, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ’ ಎನ್ನಲಾಗಿದೆ. ಆಸ್ಟ್ರೇಲಿಯಾ ಸರ್ಕಾರದ ಕೋವಿಡ್ ಮಾರ್ಗಸೂಚಿಯೂ ಕಠಿಣವಾಗಿದ್ದು, ಸ್ವತಃ ಆಸೀಸ್ ಆಟಗಾರರೇ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಪ್ರವಾಸದ ಬಳಿಕ ಅಡಿಲೇಡ್‌ನಲ್ಲಿ 2 ವಾರಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದಾರೆ.

    ಇದನ್ನೂ ಓದಿ: VIDEO: ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಪ್ರಶಸ್ತಿ ಸುತ್ತಿಗೇರಿದ ಭವಿನಾಬೆನ್ ಪಟೇಲ್

    ಸದ್ಯದ ಸ್ಥಿತಿಯಲ್ಲಿ ಆಸ್ಟ್ರೇಲಿಯಾ ಆಟಗಾರರಿಗೂ ಅಭ್ಯಾಸ ನಡೆಸುವಂತಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಸರ್ಕಾರದ ಪ್ರತಿನಿಧಿಗಳು ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜತೆ ನಿರಂತರ ಚರ್ಚೆ ನಡೆಸುತ್ತಿರುವುದಾಗಿ ಹೇಳಿದೆ. 5 ಪಂದ್ಯಗಳ ಟೆಸ್ಟ್ ಸರಣಿಯೂ ಡಿಸೆಂಬರ್ 8 ರಿಂದ ಜನವರಿ 18 ರವರೆಗೆ ನಡೆಯಲಿದೆ.

    3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ ಭಾರತ, 1-1 ರಿಂದ ಸರಣಿ ಸಮಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts