More

    ಐಪಿಎಲ್ ಮೊದಲ ವಾರದ ಪಂದ್ಯಗಳಿಗೆ ಇಂಗ್ಲೆಂಡ್, ಆಸೀಸ್ ಕ್ರಿಕೆಟಿಗರು ಡೌಟ್

    ನವದೆಹಲಿ: ಸೆಪ್ಟೆಂಬರ್ 19ರಿಂದ ಐಪಿಎಲ್ 13ನೇ ಆವೃತ್ತಿ ಯುಎಇಯಲ್ಲಿ ಆಯೋಜನೆಗೊಳ್ಳಲಿದೆ ಎಂದು ಶ್ರೀಮಂತ ಟಿ20 ಲೀಗ್‌ನ ಆಡಳಿತ ಮಂಡಳಿ ಚೇರ್ಮನ್ ಬ್ರಿಜೇಶ್ ಪಟೇಲ್ ೋಷಿಸಿರುವ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಟೂರ್ನಿಯ ಮೊದಲ ವಾರದ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವೆನಿಸಿದೆ.

    ಇಂಗ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೆಪ್ಟೆಂಬರ್ 16ರವರೆಗೆ ನಡೆಯಲಿರುವುದು ಇದಕ್ಕೆ ಕಾರಣವಾಗಿದೆ. ಹಾಲಿ ಪರಿಸ್ಥಿತಿಯಲ್ಲಿ ಕರೊನಾ ಪರೀಕ್ಷೆಗಳ ತೊಂದರೆ ಇರುವುದರಿಂದ ಆಟಗಾರರು ಸರಣಿ ಮುಗಿದ ಕೆಲವೇ ದಿನಗಳಲ್ಲಿ ಐಪಿಎಲ್‌ನಲ್ಲಿ ಆಡಲಿಳಿಯುವುದು ಸಾಧ್ಯವಾಗದು. ಐಪಿಎಲ್‌ಗೆ ಇಂಗ್ಲೆಂಡ್, ಆಸೀಸ್ ಆಟಗಾರರನ್ನು ಲಂಡನ್‌ನಿಂದ ದುಬೈಗೆ ಒಂದೇ ವಿಮಾನದಲ್ಲಿ ಕರೆತರುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಅವರು ಯುಎಇ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್-19 ಪರೀಕ್ಷೆಗೆ ಒಳಪಡಬೇಕಾಗಿದ್ದು, ನೆಗೆಟಿವ್ ವರದಿ ಬಂದರೆ ಹಸಿರು ನಿಶಾನೆ ಸಿಗಲಿದೆ. ಈ ಪರೀಕ್ಷಾ ಪ್ರಕ್ರಿಯೆಗೆ 48ರಿಂದ 72 ಗಂಟೆಗಳ ಸಮಯ ಹಿಡಿಯಲಿದೆ.

    ಇದನ್ನೂ ಓದಿ: ಏಷ್ಯಾಡ್ ಸ್ವರ್ಣವನ್ನು ಕರೊನಾ ವಾರಿಯರ್ಸ್‌ಗೆ ಅರ್ಪಿಸಿದ ಹಿಮಾ ದಾಸ್

    ಒಟ್ಟಾರೆ ಇಂಗ್ಲೆಂಡ್, ಆಸೀಸ್ ಆಟಗಾರರು ಸರಣಿ ಮುಗಿಸಿ ಐಪಿಎಲ್ ್ರಾಂಚೈಸಿಗಳನ್ನು ಕೂಡಿಕೊಳ್ಳಲು 7-10 ದಿನಗಳು ಬೇಕಾಗಬಹುದು ಎನ್ನಲಾಗಿದೆ. ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ 17 ಮತ್ತು ಇಂಗ್ಲೆಂಡ್‌ನ 11 ಆಟಗಾರರು ಕಣಕ್ಕಿಳಿಯಬೇಕಾಗಿದೆ. ಆದರೆ ಈ ಪೈಕಿ ಎಲ್ಲರೂ ಸರಣಿಯಲ್ಲಿ ಆಡುವ ಸಾಧ್ಯತೆ ಇಲ್ಲದಿದ್ದರೂ, ಪ್ರಮುಖ ಆಟಗಾರರೆಲ್ಲರೂ ಐಪಿಎಲ್ ಮೊದಲ ವಾರಕ್ಕೆ ಲಭ್ಯರಾಗುವುದು ಅನುಮಾನ. ನ್ಯೂಜಿಲೆಂಡ್‌ನ ಆಟಗಾರರೆಲ್ಲರೂ ಐಪಿಎಲ್‌ಗೆ ಪೂರ್ಣಪ್ರಮಾಣದಲ್ಲಿ ಲಭ್ಯರಾಗುವುದು ಈಗಾಗಲೆ ಖಚಿತಗೊಂಡಿದ್ದರೆ, ದಕ್ಷಿಣ ಆಫ್ರಿಕಾ ಆಟಗಾರರ ಲಭ್ಯತೆ ಬಗ್ಗೆ ಅನುಮಾನಗಳು ಎದ್ದಿವೆ. ದಕ್ಷಿಣ ಆಫ್ರಿಕಾದಲ್ಲಿ ವಿಮಾನಯಾನ ನಿರ್ಬಂಧ ಇದಕ್ಕೆ ಪ್ರಮುಖ ಕಾರಣ.

    ಎಸಿಯು ಕಾರ್ಯನಿರ್ವಹಣೆ ಸುಲಭ
    ಯುಎಇಯಲ್ಲಿ ಐಪಿಎಲ್ ಆಯೋಜನೆಗೊಂಡರೆ ನಮಗೆ 3 ಸ್ಥಳಗಳಿಂದ ಕಾರ್ಯನಿರ್ವಹಿಸುವುದು ಸುಲಭವಾಗಲಿದೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ. ಭಾರತದಲ್ಲಿ ಐಪಿಎಲ್ ನಡೆಯುವಾಗ ಕನಿಷ್ಠ 8 ಸ್ಥಳಗಳ ಮೇಲೆ ಕಣ್ಣಿಡಬೇಕಾಗುತ್ತದೆ. ಆದರೆ ಯುಎಇಯಲ್ಲಿ 3 ತಾಣಗಳಾದ ದುಬೈ, ಅಬುಧಾಬಿ ಮತ್ತು ಶಾರ್ಜಾ ಮೇಲೆ ಗಮನಹರಿಸಿದರೆ ಸಾಕಾಗುತ್ತದೆ. ವೇಳಾಪಟ್ಟಿ ಅಂತಿಮಗೊಂಡ ಬಳಿಕ ನಮ್ಮ ಕಾರ್ಯವಿಧಾನವನ್ನು ನಿರ್ಣಯಿಸುತ್ತೇವೆ ಎಂದು ಅಜಿತ್ ಸಿಂಗ್ ವಿವರಿಸಿದ್ದಾರೆ. ಯುಎಇ ಬುಕ್ಕಿಗಳು ಮತ್ತು ಫಿಕ್ಸರ್‌ಗಳ ಪಾಲಿಗೆ ಸ್ವರ್ಗವೆಂದು ಪರಿಗಣಿಸಲ್ಪಡುತ್ತದೆ. ಆದರೆ ಈ ಸವಾಲನ್ನು ನಿಭಾಯಿಸುವ ವಿಶ್ವಾಸ ತಮಗಿದೆ ಎಂದು ಅವರು ಹೇಳಿದ್ದಾರೆ.

    ಆಸೀಸ್ ಮಹಿಳಾ ಕ್ರಿಕೆಟರ್ ಎಲ್ಲಿಸ್ ಪೆರ್ರಿ ವಿಚ್ಛೇದನ, ಕ್ರೀಡಾ ದಂಪತಿ ಬಾಳಲ್ಲಿ ಬಿರುಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts