More

    ಇಂಗ್ಲೆಂಡ್​ ಮಣಿಸುವ ಮೂಲಕ ಭಾರತದ ದಾಖಲೆ ಹಿಂದಿಕ್ಕಿದ ಐರ್ಲೆಂಡ್​..!

    ಸೌಥಾಂಪ್ಟನ್​: ಸರಣಿಯಲ್ಲಿ ಸೋತರೂ ಛಲ ಬಿಡದೆ ಹೋರಾಡಿದ ಪ್ರವಾಸಿ ಐರ್ಲೆಂಡ್​ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಏಕದಿನ ವಿಶ್ವಚಾಂಪಿಯನ್​ ಇಂಗ್ಲೆಂಡ್​ ತಂಡವನ್ನು ಸೋಲಿಸಿತು. ಇಂಗ್ಲೆಂಡ್​ ನೀಡಿದ್ದ 328 ರನ್​ ಬೆನ್ನಟ್ಟುವ ಮೂಲಕ ಐರ್ಲೆಂಡ್​ ತಂಡ, ಆಂಗ್ಲರ ನೆಲದಲ್ಲಿ ಪ್ರವಾಸಿ ತಂಡವೊಂದು ಅತಿಹೆಚ್ಚು ರನ್​ ಚೇಸಿಂಗ್​ ಮಾಡಿದ ತಂಡ ಎನಿಸಿಕೊಂಡಿತು. 18 ವರ್ಷಗಳಿಂದ ಭಾರತದ ಹೆಸರಿನಲ್ಲಿದ್ದ ದಾಖಲೆಯನ್ನು ಐರ್ಲೆಂಡ್​ ಹಿಂದಿಕ್ಕಿತು. 2002ರ ನಾಟ್​ವೆಸ್ಟ್​ ಸರಣಿ ಫೈನಲ್​ನಲ್ಲಿ ಭಾರತ 326 ರನ್​ ಬೆನ್ನಟ್ಟಿದ್ದು ಇದುವರೆಗಿನ ಅತಿದೊಡ್ಡ ಚೇಸಿಂಗ್​ ಮೊತ್ತವಾಗಿತ್ತು.

    ಇದನ್ನೂ ಓದಿ: ಯುಎಇಯಲ್ಲಿ ಜೈವಿಕ-ಸುರಕ್ಷೆ ಉಲ್ಲಂಘಿಸುವ ಕ್ರಿಕೆಟಿಗರಿಗೆ 7 ದಿನ ಕ್ವಾರಂಟೈನ್!

    ರಿ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಸಿಸಿ ಕ್ರಿಕೆಟ್​ ಏಕದಿನ ವಿಶ್ವಕಪ್​ ಸೂಪರ್​ ಸಿರೀಸ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​, ಏವೊಯಿನ್​ ಮಾರ್ಗನ್​ (106 ರನ್​, 84 ಎಸೆತ, 15 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ನಡುವೆಯೂ ಇಂಗ್ಲೆಂಡ್​ 49.5 ಓವರ್​ಗಳಲ್ಲಿ 328 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಐರ್ಲೆಂಡ್​ ತಂಡ, ಪೌಲ್​ ಸ್ಟರ್ಲಿಂಗ್ (142 ರನ್​, 128 ಎಸೆತ, 9 ಬೌಂಡರಿ, 6 ಸಿಕ್ಸರ್​) ಹಾಗೂ ನಾಯಕ ಆಂಡಿ ಬಲ್ಬಿರ್ನಿ (113ರನ್​, 112 ಎಸೆತ, 12 ಬೌಂಡರಿ) ಜೋಡಿ 2ನೇ ವಿಕೆಟ್​ಗೆ ಪೇರಿಸಿದ 214 ರನ್​ ಫಲವಾಗಿ 49.5 ಓವರ್​ಗಳಲ್ಲಿ 3 ವಿಕೆಟ್​ಗೆ 329 ರನ್​ಗಳಿಸಿ ಗೆಲುವಿನ ನಗೆ ಬೀರಿತು. 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್​ 2-1 ರಿಂದ ಗೆದ್ದುಕೊಂಡಿತು. 2015ರ ವಿಶ್ವಕಪ್​ ಬಳಿಕ ಐರ್ಲೆಂಡ್​ ತಂಡ ಮೊದಲ ಬಾರಿಗೆ ಬಲಿಷ್ಠ ತಂಡದ ಎದುರು ಗೆಲುವು ದಾಖಲಿಸಿತು.

    ಇದನ್ನೂ ಓದಿ: ಐಪಿಎಲ್‌ಗೆ ಅನುಕೂಲ ಮಾಡಿಕೊಟ್ಟ ಆಸೀಸ್

    2002ರಲ್ಲಿ ಲಂಡನ್​ನ ಲಾರ್ಡ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಯುವರಾಜ್​ ಸಿಂಗ್​ (69) ಹಾಗೂ ಮೊಹಮದ್​ ಕೈಫ್​ (87) ಜೋಡಿಯ ಅಬ್ಬರದ ಬ್ಯಾಟಿಂಗ್​ ಲವಾಗಿ ಭಾರತ ಜಯ ದಾಖಲಿಸಿತ್ತು. ಅಂದು ಯುವರಾಜ್​ ಸಿಂಗ್​- ಕೈಫ್​ ಬ್ಯಾಟಿಂಗ್​ ಮಾದರಿಯಲ್ಲೇ ಮಂಗಳವಾರ ಪೌಲ್​ ಸ್ಟರ್ಲಿಂಗ್​ ಹಾಗೂ ಆಂಡಿ ಬಲ್ಬಿರ್ನಿ ಜೋಡಿ ಬಿರುಸಿನ ಬ್ಯಾಟಿಂಗ್​ ಮೂಲಕ ಗಮನಸೆಳೆಯಿತು.

    2: ಇಂಗ್ಲೆಂಡ್​ ಎದುರು ಐರ್ಲೆಂಡ್​ ತಂಡಕ್ಕೆ 2ನೇ ಗೆಲುವು ಇದಾಗಿದೆ. ಇದಕ್ಕೂ ಮೊದಲು 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿ ಪಂದ್ಯದಲ್ಲಿ ಐರ್ಲೆಂಡ್​ ಮೊದಲ ಬಾರಿಗೆ ಜಯ ದಾಖಲಿಸಿತ್ತು. ಆ ಪಂದ್ಯದಲ್ಲೂ ಐರ್ಲೆಂಡ್​ 329 ರನ್​ ಗಳಿಸಿತ್ತು. ಕೆವಿನ್​ ಓಬ್ರಿಯಾನ್​ 113 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು

    ಇಂಗ್ಲೆಂಡ್​: 49. 5 ಓವರ್ ಗಳಲ್ಲಿ 328 (ಏವೊಯಿನ್​ ಮಾರ್ಗನ್​ 106, ಬ್ಯಾಂಟನ್​ 58, ಡೇವಿಡ್​ ವಿಲ್ಲಿ 51, ಟಾಮ್​ ಕರನ್​ 38, ಕ್ರೇಗ್​ ಯಂಗ್​ 53ಕ್ಕೆ 3, ಲಿಟ್ಟಲ್​ 62ಕ್ಕೆ 2, ಕಟಿರ್ಸ್​ ಕ್ಯಾಂಪರ್​ 68ಕ್ಕೆ 2), ಐರ್ಲೆಂಡ್​: 49.5 ಓವರ್​ಗಳಲ್ಲಿ 3 ವಿಕೆಟ್​ಗೆ 329 (ಪೌಲ್​ ಸ್ಟರ್ಲಿಂಗ್​ 142, ಆಂಡಿ ಬಲ್ಬಿರ್ನಿ 113, ಡೇವಿಡ್​ ವಿಲ್ಲಿ 70ಕ್ಕೆ 1, ಆದಿಲ್​ ರಶೀದ್​ 61ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts