More

    ಸೆಮೀಸ್‌ಗೆ ಇಂಗ್ಲೆಂಡ್, ಆಸೀಸ್, ಗೆದ್ದರೂ ದ.ಆಫ್ರಿಕಾಗೆ ಕೈ ಹಿಡಿಯದ ಅದೃಷ್ಟ

    ಶಾರ್ಜಾ/ಅಬುಧಾಬಿ: ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ಹಾಗೂ ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್ ಟೂರ್ನಿಯ ಮೊದಲ ಗುಂಪಿನಿಂದ ಸೆಮಿೈನಲ್ ಹಂತಕ್ಕೇರಿದವು. ರನ್‌ರೇಟ್ ಲೆಕ್ಕಾಚಾರದಲ್ಲಿ ಕಡೇ ಹಂತದವರೆಗೂ ಹೋರಾಡಿದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ಪ್ರವೇಶೀಸಲು ವಿಫಲವಾದರೂ ಇಂಗ್ಲೆಂಡ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಶಕ್ತವಾಯಿತು. ಈ ಮೂಲಕ ಗೆಲುವಿನೊಂದಿಗೆ ದ.ಆಫ್ರಿಕಾ ಟೂರ್ನಿಗೆ ವಿದಾಯ ಘೋಷಿಸಿತು.
    * ಆಸೀಸ್ ತಂಡಕ್ಕೆ ಸುಲಭ ಜಯ: ನಿರ್ಣಾಯಕ ಹಣಾಹಣಿಯಲ್ಲಿ ಭರ್ಜರಿ ನಿರ್ವಹಣೆ ತೋರಿದ ಆಸ್ಟ್ರೇಲಿಯಾ ತಂಡ ತನ್ನ 5ನೇ ಹಾಗೂ ಕಡೇ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ, ಜೋಸ್ ಹ್ಯಾಸಲ್‌ವುಡ್ (39ಕ್ಕೆ 4) ಮಾರಕ ದಾಳಿ ನಡುವೆಯೂ ಕೈರಾನ್ ಪೊಲ್ಲಾರ್ಡ್ (44ರನ್, 31 ಎಸೆತ, 4 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್‌ನಿಂದ 7 ವಿಕೆಟ್‌ಗೆ 157 ರನ್‌ಗಳಿಸಿದರೆ, ಪ್ರತಿಯಾಗಿ ಆಸ್ಟ್ರೇಲಿಯಾ ತಂಡ, ಡೇವಿಡ್ ವಾರ್ನರ್ (89*ರನ್, 56 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ಮಿಚೆಲ್ ಮಾರ್ಷ್ (53 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 161 ರನ್‌ಗಳಿಂದ ಜಯ ದಾಖಲಿಸಿತು.

    ವೆಸ್ಟ್ ಇಂಡೀಸ್: 7 ವಿಕೆಟ್‌ಗೆ 157 (ಕ್ರಿಸ್ ಗೇಲ್ 15, ಎವಿನ್ ಲೆವಿಸ್ 29, ಶಿಮ್ರೋನ್ ಹೆಟ್ಮೆಯರ್ 27, ಕೈರಾನ್ ಪೊಲ್ಲಾರ್ಡ್ 44, ಡ್ವೇನ್ ಬ್ರಾವೊ 10, ಆಂಡ್ರೆ ರಸೆಲ್ 18*, ಜೋಸ್ ಹ್ಯಾಸಲ್‌ವುಡ್ 39ಕ್ಕೆ 4, ಆಡಂ ಜಂಪಾ 20ಕ್ಕೆ 1), ಆಸ್ಟ್ರೇಲಿಯಾ: 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 161 (ಡೇವಿಡ್ ವಾರ್ನರ್ 89*, ಮಿಚೆಲ್ ಮಾರ್ಷ್ 53, ಕ್ರಿಸ್ ಗೇಲ್ 7ಕ್ಕೆ 1).

    * ದ.ಆಫ್ರಿಕಾಗೆ ಸಮಾಧಾನಕರ ಜಯ
    ಸತತ 4 ಜಯ ದಾಖಲಿಸಿದ್ದ ಇಂಗ್ಲೆಂಡ್ ಕಡೇ ಲೀಗ್ ಪಂದ್ಯದಲ್ಲಿ 10 ರನ್‌ಗಳಿಂದ ದ.ಆಫ್ರಿಕಾ ತಂಡಕ್ಕೆ ಶರಣಾಯಿತು. ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ತಂಡ, ರಾಸೀ ವ್ಯಾನ್ ಡರ್ ಡುಸೆನ್ (94*ರನ್, 60 ಎಸೆತ, 5 ಬೌಂಡರಿ, 6 ಸಿಕ್ಸರ್) ಹಾಗೂ ಏಡನ್ ಮಾರ್ಕ್ರಮ್ (52ರನ್, 25 ಎಸೆತ, 2 ಬೌಂಡರಿ, 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್‌ಗೆ 189 ರನ್ ಕಲೆಹಾಕಿತು. ಬ್ಯಾಟರ್‌ಗಳ ಸಂಘಟಿತ ಹೋರಾಟದ ನಡುವೆಯೂ ಇಂಗ್ಲೆಂಡ್ 8 ವಿಕೆಟ್ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ತಂಡವನ್ನು 131ರನ್ ಒಳಗೆ ಕಡಿವಾಣ ಹಾಕಿದ್ದರೆ ಸೆಮೀಸ್‌ಗೇರುವ ಅವಕಾಶ ಹೊಂದಿತ್ತು. ಹ್ಯಾಟ್ರಿಕ್ ಸಿಕ್ಸರ್ ಚಚ್ಚಿಸಿಕೊಂಡಿದ್ದ ಕಗಿಸೊ ರಬಾಡ, ಕಡೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದರು.
    ಅಸದ್
    ದ.ಆಫ್ರಿಕಾ: 2 ವಿಕೆಟ್‌ಗೆ 189 (ಡುಸೆನ್ 94*, ಮಾರ್ಕ್ರಮ್ 51, ಮೊಯಿನ್ ಅಲಿ 27ಕ್ಕೆ 1). ಇಂಗ್ಲೆಂಡ್: 8 ವಿಕೆಟ್‌ಗೆ 179 (ಮೊಯಿನ್ ಅಲಿ 37, ಲಿಯಾಮ್ ಲಿವಿಂಗ್‌ಸ್ಟೋನ್ 28, ಡೇವಿಡ್ ಮಲನ್ 33, ಕಗಿಸೊ ರಬಾಡ 48ಕ್ಕೆ 3, ತಬರೇಜ್ ಶಮ್ಸಿ 24ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts