More

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆರ್‌ಸಿಬಿ ತಂಡದ ಸ್ಟಾರ್ ಆಲ್ರೌಂಡರ್

    ಬೆಂಗಳೂರು: ಇಂಗ್ಲೆಂಡ್ ತಂಡದ ಆಲ್ರೌಂಡರ್ ಡೇವಿಡ್ ವಿಲ್ಲಿ ಹಾಲಿ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಬುಧವಾರ ೋಷಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕಳೆದ ವಾರ, ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ 33 ವರ್ಷದ ವಿಲ್ಲಿ ಹೆಸರು ಕೈಬಿಟ್ಟಿತ್ತು. ಪ್ರಸ್ತುತ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿರುವ ಆಟಗಾರರ ಪೈಕಿ ಗುತ್ತಿಗೆ ಹೊಂದಿರದ ಏಕೈಕ ಆಟಗಾರ ಅವರಾಗಿದ್ದಾರೆ. ‘ಈ ದಿನವನ್ನು ನಾನು ಎಂದಿಗೂ ಬಯಸಲಿಲ್ಲ. ಚಿಕ್ಕ ಹುಡುಗನಿಂದ, ಇಂಗ್ಲೆಂಡ್ ಪರ ಕ್ರಿಕೆಟ್ ಆಡುವ ಕನಸು ಕಂಡಿದ್ದೇನೆ. ಆದ್ದರಿಂದ, ಎಚ್ಚರಿಕೆಯಿಂದ ಯೋಚಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ವೃತ್ತಿಜೀವನದಲ್ಲಿ ಕೆಲವು ವಿಶೇಷ ನೆನಪು ಮತ್ತು ಉತ್ತಮ ಸ್ನೇಹಿತರು ಸಿಕ್ಕಿದ್ದಾರೆ ಮತ್ತು ಕೆಲ ಕಷ್ಟದ ಸಮಯವನ್ನು ಎದುರಿಸಿದ್ದೇನೆ. ವಿಶ್ವಕಪ್‌ನಲ್ಲಿ ತಂಡದ ಪ್ರದರ್ಶನದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ವಿಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಂಗ್ಲೆಂಡ್ ಪರ 70 ಏಕದಿನ ಪಂದ್ಯಗಳಲ್ಲಿ 94 ವಿಕೆಟ್ ಕಬಳಿಸಿರುವ ವಿಲ್ಲಿ, 627 ರನ್ ಕಲೆ ಹಾಕಿದ್ದಾರೆ. ಟಿ20ಯಲ್ಲಿ 226 ರನ್‌ಗಳಿಸಿ 51 ವಿಕೆಟ್ ಪಡೆದಿದ್ದಾರೆ. ವಿಲ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts