More

    ಆಮರಣ ಉಪವಾಸ ಅಂತ್ಯ

    ಮಹಾಲಿಂಗಪುರ: ತಾಲೂಕು ಬೇಡಿಕೆಗಾಗಿ ಪಟ್ಟಣದ ಚನ್ನಮ್ಮ ವತ್ತದಲ್ಲಿ ನಡೆದಿರುವ ಹೋರಾಟ ಸೋಮವಾರ 600 ದಿನಗಳನ್ನು ಪೂರೈಸಿತು.
    ತಾಲೂಕು ಹೋರಾಟ ವೇದಿಕೆಗೆ ಆಗಮಿಸಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಆಮರಣ ಉಪವಾಸ ಕೈಗೊಂಡವರಲ್ಲಿ ಹಲವರು ವಯಸ್ಸಾದವರು ಇದ್ದಾರೆ. ಆಮರಣ ಉಪವಾಸ ಬಿಡಿ, ಹೋರಾಟ ಮುಂದುವರಿಸಿ. ಬೆಳಗಾವಿ ಅಧಿವೇಶನದ ವೇಳೆ ಒಂದು ದಿನ ತಾಲೂಕು ಹೋರಾಟಗಾರರ ನಿಯೋಗವನ್ನು ಕರೆದುಕೊಂಡು ಹೋಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿಸುತ್ತೇನೆ. ಸರ್ಕಾರದ ಮೇಲೆ ಒತ್ತಡ ತಂದು ಮಹಾಲಿಂಗಪುರ ತಾಲೂಕು ರಚಿಸುವ ಜವಾಬ್ದಾರಿ ನನ್ನದು ಎಂದರು.

    ಸಂಧಾನ ಸಭೆಗೆ ಆಗಮಿಸಿದ್ದ ಜಮಖಂಡಿ ಎಸಿ ಸಂತೋಷ ಕಾಮಗೌಡ ಮಾತನಾಡಿ, ತಾಲೂಕು ಹೋರಾಟ 600 ದಿನಗಳನ್ನು ಪೂರೈಸಿದೆ. ಆಮರಣ ಉಪವಾಸಕ್ಕೆ ಕುಳಿತವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಕಾರಣ ಹಾಗೂ ಪ್ರತಿಯೊಂದು ಜೀವ ಅಮೂಲ್ಯವಾದ್ದರಿಂದ ಆಮರಣ ಉಪವಾಸ ಕೈಬಿಡಿ. ಮಹಾಲಿಂಗಪುರ ಹೋಬಳಿ ರಚನೆಯು ಕಾರ್ಯ ಸರ್ಕಾರ ಮಟ್ಟದಲ್ಲಿ ಎಲ್ಲಿಗೆ ನಿಂತಿದೆ ಎಂಬುದನ್ನು ಪರಿಶೀಲಿಸಿ ಶೀಘ್ರ ಹೊಬಳಿ ರಚನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ನಿಮ್ಮ ನಿರಂತರ ತಾಲೂಕು ಹೋರಾಟಕ್ಕೆ ನಮ್ಮ ಆಡಳಿತದಿಂದ ಯಾವುದೇ ತೊಂದರೆ ಇರುವುದಿಲ್ಲ ಎಂದರು.

    ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಸಿಎಂ ಭೇಟಿ, ಹೋಬಳಿ ಮತ್ತು ತಾಲೂಕು ರಚನೆ ಜವಾಬ್ದಾರಿಯನ್ನು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ವಹಿಸಿಕೊಂಡಿದ್ದರಿಂದ ಹಾಗೂ ಅಧಿಕಾರಿಗಳು ನೀಡಿದ ಹೊಬಳಿ ರಚನೆ ಭರವಸೆಯೊಂದಿಗೆ ಆಮರಣ ಉಪವಾಸ ಕೈಬಿಟ್ಟು, ಎಂದಿನಂತೆ ನಮ್ಮ ತಾಲೂಕು ಹೋರಾಟ ನಿರಂತರವಾಗಿರುತ್ತದೆ ಎಂದರು.

    ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸಾದ್ವಿ, ಜಮಖಂಡಿ ಡಿವೈಎಸ್‌ಪಿ ಶಾಂತವೀರ ಅವರು ಸಂಗಪ್ಪ ಹಲ್ಲಿ ನೇತೃತ್ವದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡ 15 ಜನರಿಗೆ ಎಳೆನೀರು ಕುಡಿಸಿದರು.

    ತಾಲೂಕು ಹೋರಾಟ ಸಮಿತಿ ಮಹಾಲಿಂಗಪ್ಪ ಕೋಳಿಗುಡ್ಡ, ಮಹಾದೇವ ಮಾರಾಪೂರ, ನಿಂಗಪ್ಪ ಬಾಳಿಕಾಯಿ, ಪರಪ್ಪ ಬ್ಯಾಕೋಡ, ದುಂಡಪ್ಪ ಜಾಧವ, ಭೀಮಸಿ ಸಸಾಲಟ್ಟಿ, ಸುಭಾಷ ಶಿರಬೂರ, ಭೀಮಸಿ ಸಸಾಲಟ್ಟಿ, ಸಿದ್ದು ಶಿರೋಳ, ರಫೀಕ ಮಾಲದಾರ, ಶ್ರೀಶೈಲ ಹಿಪ್ಪರಗಿ, ಪುರಸಭೆ ಸದಸ್ಯ ರವಿ ಜವಳಗಿ, ಸರ್ಕಾರಿ ಆಸ್ಪತ್ರೆಯ ಡಾ.ಸಿ.ಎಂ.ವಜ್ಜರಮಟ್ಟಿ ಸೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts