More

    ಆಗಸ್ಟ್ ಅಂತ್ಯಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಹೇಳಿಕೆ

    ಬಳ್ಳಾರಿ: ಆಗಸ್ಟ್ ಕೊನೆಯ ವಾರಕ್ಕೆ ಕರೊನಾ ಪ್ರಕರಣಗಳು ಹೆಚ್ಚಲಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್‌ಫ್ಲ್ಯೂಯೆಂ್ಜಅ ಮಾದರಿಯ ರೋಗದಿಂದ ಬಳಲುತ್ತಿರುವವರನ್ನು ಪ್ರತ್ಯೇಕಿಸಿ ಕರೊನಾ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಅಗತ್ಯವಾದರೆ ಖಾಸಗಿ ವೈದ್ಯರನ್ನು ಕೂಡ ಕರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ ತಿಳಿಸಿದರು.

    ಕರೊನಾ ಅಪಾಯ ದೂರವಾಗುವ ಸಂದರ್ಭ ಬಂದಿಲ್ಲ. ಲಸಿಕೆ ಇಲ್ಲವೇ ಸೂಕ್ತ ಚಿಕಿತ್ಸಾ ಪದ್ಧತಿ ಲಭ್ಯ ಆಗುವವರೆಗೆ ನಾವು ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಮಳೆಗಾಲ ಹಿನ್ನೆಲೆಯಲ್ಲಿ ಕೆಮ್ಮು, ನೆಗಡಿ, ಜ್ವರ ಇರುವವರು ಫೀವರ್ ಕ್ಲಿನಿಕ್‌ಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಚಿಕಿತ್ಸೆ ಪಡೆಯಲು ವಿಳಂಬ ಮಾಡಬಾರದು. ಇದರಿಂದ ಜೀವಕ್ಕೆ ಎರವಾಗಬಹುದು ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಗ್ರಾಪಂ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿಗಳನ್ನು ರಚಿಸಿ ರೋಗ ಲಕ್ಷಣ ಇರುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪಾಶ್ಚಾತ್ಯ ದೇಶಗಳ ಸ್ಥಿತಿ ಭಾರತಕ್ಕೆ ಇನ್ನೂ ಬಂದಿಲ್ಲ. ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಲಿದ್ದೇವೆ. ಸರ್ಕಾರದ ಜತೆಗೆ ಜನರು ಕೂಡ ಕೈಜೋಡಿಸಬೇಕು. ಇನ್ನು ಮುಂದೆ ಸಕ್ರಿಯ ಪ್ರಕರಣಗಳನ್ನು ಮಾತ್ರ ಪರಿಗಣಿಸಬೇಕು. ಈ ಮೂಲಕ ವಸ್ತುಸ್ಥಿತಿ ತಿಳಿಸಿ ಜನರ ಭಯ ದೂರ ಮಾಡಬೇಕು. ಕರೊನಾ ಯಮಪಾಶ ಹಾಗೂ ಸಾಮಾಜಿಕ ಪಿಡುಗು ಅಲ್ಲ. ಸೋಂಕಿತರು ಕಳಂಕಿತರಲ್ಲ ಅಲ್ಲ ಎಂದು ಸಚಿವ ಸುಧಾಕರ ತಿಳಿಸಿದರು.

    ಜಿಂದಾಲ್ನಲ್ಲಿ ಸೋಂಕಿತರು ಹಾಗೂ ಸಂಪರ್ಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಜನರು ಆತಂಕಪಡುವ ಅಗತ್ಯ ಇಲ್ಲ. ಕರೊನಾ ಕಾರಣಕ್ಕೆ ಕೈಗಾರಿಕೆಗಳನ್ನು ಮುಚ್ಚಲು ಸಾಧ್ಯವಿಲ್ಲ. ಸಮುದಾಯಕ್ಕೆ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕರೊನಾ ಪತ್ತೆ ಹಾಗೂ ನಿಯಂತ್ರಣ ಕಾರ್ಯಕ್ಕೆ ಕೈಜೋಡಿಸುವುದಾಗಿ ಜಿಂದಾಲ್ ಸಂಸ್ಥೆಯವರು ತಿಳಿಸಿದ್ದಾರೆ. ಸಂಸ್ಥೆಯವರು ನಿತ್ಯ 700 ಮಾದರಿಗಳನ್ನು ಪರೀಕ್ಷೆ ಮಾಡಬಹುದಾದ ಎರಡು ಯಂತ್ರಗಳನ್ನು ಖರೀದಿಸಿ ವಿಮ್ಸ್ ಆಸ್ಪತ್ರೆಗೆ ನೀಡುವುದಾಗಿ ಹೇಳಿದ್ದಾರೆ.
    | ಕೆ.ಸುಧಾಕರ, ವೈದ್ಯಕೀಯ ಶಿಕ್ಷಣ ಸಚಿವ

    ಜಿಂದಾಲ್ ವ್ಯವಸ್ಥಾಪಕರ ಜತೆ ಚರ್ಚಿಸಲಾಗಿದೆ. ಕೆಲವು ಘಟಕಗಳನ್ನು ಮುಚ್ಚಲು ಸಾಧ್ಯವಿಲ್ಲ. ಆದರೂ, ಶಟ್‌ಡೌನ್ ಮಾದರಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಜಿಲ್ಲೆಯ ಜನರು ಆತಂಕ ಪಡಬಾರದು.
    | ಆನಂದ್‌ಸಿಂಗ್, ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts