More

    ‘ಟೈಗರ್​ 3’ನಲ್ಲಿ ನಟಿಸ್ತಿದ್ದೀನಿ ಅಂತ ಯಾರು ಹೇಳಿದ್ದು? ಇಮ್ರಾನ್​ ಪ್ರಶ್ನೆ

    ಮುಂಬೈ: ಸಲ್ಮಾನ್​ ಖಾನ್​ ಅಭಿನಯದ ‘ಟೈಗರ್​ 3’ ಚಿತ್ರದಲ್ಲಿ ಇಮ್ರಾನ್​ ನಟಿಸುತ್ತಿದ್ದಾರಂತೆ, ಸಲ್ಮಾನ್​ ರಾ ಏಜೆಂಟ್​ ಆಗಿ ನಟಿಸಿದರೆ ಇಮ್ರಾನ್​ ಐಎಸ್​ಐ ಏಜೆಂಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ, ತಮ್ಮ ಪಾತ್ರಕ್ಕಾಗಿ ಇಮ್ರಾನ್​ ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರಂತೆ, ಅವರ ಇಂಟ್ರೋ ದೃಶ್ಯಕ್ಕೆ 10 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆಯಂತೆ …

    ಇದನ್ನೂ ಓದಿ: ಡಿಎಸ್​ಎಸ್​ ರಘು ಮೇಲೆ ಮಾನನಷ್ಟ ಮೊಕದ್ದಮೆ … ಜಗ್ಗೇಶ್​ ತೀರ್ಮಾನ

    ಕಳೆದ ಕೆಲವು ತಿಂಗಳಿನಿಂದ ಇಮ್ರಾನ್​ ಹಶ್ಮಿ ಕುರಿತಾದ ಸುದ್ದಿಗಳು ಒಂದಾ? ಎರಡಾ? ವಾರಕ್ಕೊಂದರಂತೆ ಸುದ್ದಿಗಳು ಬರುತ್ತಲೇ ಇವೆ. ಆದರೆ, ಇವೆಲ್ಲವೂ ಸುಳ್ಳು ಎಂದು ಇಮ್ರಾನ್​ ಹಶ್ಮಿ ಹೇಳಿದ್ದಾರೆ. ತಾವು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಇದೀಗ ಸ್ಪಷ್ಟಪಡಿಸಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಟೈಗರ್​ 3’ ಕುರಿತಾಗಿ ಅವರನ್ನು ಪ್ರಶ್ನೆ ಮಾಡಿದಾಗ, ಆ ಚಿತ್ರದಲ್ಲಿ ಯಾವತ್ತಾದರೂ ನಟಿಸುತ್ತಿರುವುದಾಗಿ ಹೇಳಿಕೆ ನೀಡಿದ್ದೀನಾ ಎಂದು ಅವರು ಪ್ರಶ್ನಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಾನೆಲ್ಲೂ ಆ ಚಿತ್ರದಲ್ಲಿ ನಟಿಸುತ್ತಿದ್ದೀನಿ ಎಂದು ಹೇಳಿಕೊಂಡಿಲ್ಲ. ನನ್ನನ್ನು ಕೇಳಿದವರಿಗೆಲ್ಲ, ನಾನು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದೇ ಹೇಳುತ್ತಿದ್ದೇನೆ. ಅಷ್ಟಾದರೂ ಜನ ಯಾಕೆ ನಾನು ಆ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ ಹಶ್ಮಿ.

    ಇದಕ್ಕೂ ಮೊದಲು ಒಮ್ಮೆ ಇಮ್ರಾನ್​ ತಾನು ‘ಟೈಗರ್​ 3’ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದೇ ಹೇಳಿದ್ದರು. ಚಿತ್ರದಲ್ಲಿ ನಟಿಸುತ್ತಿದ್ದೀರಾ ಎಂದು ಮಾಧ್ಯಮದವರೊಮ್ಮೆ ಪ್ರಶ್ನಿಸಿದಾಗ, ‘ನನಗೆ ಗೊತ್ತಿಲ್ಲ. ಈ ಸುದ್ದಿ ನನಗೆ ಮಾಧ್ಯಮದವರಿಂದಲೇ ಗೊತ್ತಾಗಿತ್ತು. ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೀನೋ, ಇಲ್ಲವೋ ಎಂಬುದನ್ನು ಸಲ್ಮಾನ್​ ಅವರನ್ನೇ ಕೇಳಿ’ ಎಂದಿದ್ದರು ಹಶ್ಮಿ.

    ಇದನ್ನೂ ಓದಿ: ಪೊನಿ ವರ್ಮಾ ಜತೆ ಪ್ರಕಾಶ್​ ರಾಜ್​ ಮರುಮದುವೆ! ಎಲ್ಲದಕ್ಕೂ ಕಾರಣ ಮಗ ಎಂದ ಬಹುಭಾಷಾ ನಟ

    ‘ಟೈಗರ್​ 3’ ಚಿತ್ರದಲ್ಲಿ ಸಲ್ಮಾನ್​ ಮತ್ತು ಕತ್ರೀನಾ ನಟಿಸಿದ್ದು, ಮನೀಷ್​ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಯಶ್​ರಾಜ್​ ಫಿಲಂಸ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಸದ್ಯ ಜಾರ್ಜಿಯಾದಲ್ಲಿ ನಡೆಯುತ್ತಿದೆ.

    ಡ್ರಗ್ಸ್​​ ಸೇವನೆ ಖಚಿತವಾದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts