More

    ಡಿಎಸ್​ಎಸ್​ ರಘು ಮೇಲೆ ಮಾನನಷ್ಟ ಮೊಕದ್ದಮೆ … ಜಗ್ಗೇಶ್​ ತೀರ್ಮಾನ

    ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳ ಮಕ್ಕಳಿಗೆ ವಿತರಿಸುವ ಸ್ವೆಟರ್​ನಲ್ಲಿ ನಟ ಕೋಮಲ್​ ಭ್ರಷ್ಟಾಚಾರ ಎಸೆಗಿದ್ದಾರೆ ಮತ್ತು ಸಚಿವ ಅಶೋಕ್, ಜಗ್ಗೇಶ್ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪವನ್ನು ದಲಿತ ಸಂಘರ್ಷ ಸಮಿತಿಯ ಡಾ.ಸಿ.ಎಸ್​. ರಘು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್​, ರಘು ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಪೊನಿ ವರ್ಮಾ ಜತೆ ಪ್ರಕಾಶ್​ ರಾಜ್​ ಮರುಮದುವೆ! ಎಲ್ಲದಕ್ಕೂ ಕಾರಣ ಮಗ ಎಂದ ಬಹುಭಾಷಾ ನಟ

    ಪಾಲಿಕೆಯು ಮಕ್ಕಳಿಗೆ ಸ್ವೆಟರ್​ ವಿತರಣೆ ಮಾಡಲು ಟೆಂಡರ್​ ಕರೆದಿತ್ತು. ಆ ಟೆಂಡರ್​ ತೆಗೆದುಕೊಂಡಿರುವುದು ನಟ ಕೋಮಲ್​. ಆದರೆ ಮಕ್ಕಳಿಗೆ ಈ ಸ್ಟೆಟರ್ ಹಂಚಿಕೆಯಾಗಿಲ್ಲ. ಏಕೆಂದರೆ, ಕಳೆದ ವರ್ಷ ಶಾಲಾ ಕಾಲೇಜುಗಳ ತರಗತಿಗಳು ನಡೆದಿಲ್ಲ. ಆದರೂ ಮಕ್ಕಳಿಗೆ ಸ್ಪೆಟರ್ ವಿತರಣೆ ಮಾಡಿದ್ದೇವೆ ಅಂತ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪವಿದೆ. ಪಾಲಿಕೆ ಅಧಿಕಾರಗಳ ಮೇಲೆ ಸಚಿವ ಆರ್ ಅಶೋಕ್, ಜಗ್ಗೇಶ್ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆಂಬ ಎಂದು ರಘು ಆರೋಪಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಕೋಮಲ್​, ‘ನನಗೂ ಈ ಟೆಂಡರ್​ಗೂ ಯಾವುದೇ ಸಂಬಂಧ ಇಲ್ಲ, ನನ್ನ ವಿರುದ್ಧ ವೃಥಾ ಆರೋಪ ಹೊರಿಸಲಾಗಿದೆ’ ಎಂದು ಹೇಳಿದ್ದರು.

    ಇದನ್ನೂ ಓದಿ: ಖ್ಯಾತ ತಮಿಳು ನಿರ್ದೇಶಕನಿಂದ ಅಭಿನಯ ಚಕ್ರವರ್ತಿಗೆ ಆ್ಯಕ್ಷನ್ ಕಟ್! ಕಿಚ್ಚನ ಕೈರುಚಿಗೆ ಫಿದಾ

    ಈಗ ಈ ಕುರಿತು ಟ್ವೀಟ್​ ಮಾಡಿರುವ ಜಗ್ಗೇಶ್​, ರಘು ಅವರ ಮೇಲೆ ಮಾನನಷ್ಟ ಆಪದಾನೆ ದಾಖಲಿಸುತ್ತಿರುವುದಾಗಿ ಹೇಳಿದ್ದಾರೆ. ‘ಸಂಬಂಧವಿಲ್ಲದೆ ನನ್ನ ಹೆಸರು ಹಾಗೂ ಸಚಿವ ಅಶೋಕ್​ ಅವರ ಹೆಸರು ತೆಗೆದು ರಘು ಎಂಬುವರು ಅಪಮಾನಿಸಿದ್ದಾರೆ. ಇದು ನನಗೆ ಬಹಳ ನೋವುಂಟು ಮಾಡಿದೆ. ಹಾಗಾಗಿ ಸಂಬಂಧವಿಲ್ಲದೆ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡಿರುವ ಮಾನ್ಯ ರಘುರವರ ಮೇಲೆ ಮಾನನಷ್ಟ ಅಪಾದನೆ ದಾಖಲಿಸುತ್ತಿರುವೆ. ದಯಮಾಡಿ ಯಾರೆ ಆಗಲಿ ಸತ್ಯ ಅರಿತು ನುಡಿಯುವ ಗುಣ ಬೆಳಸಿಕೊಳ್ಳಿ’ ಎಂದು ಜಗ್ಗೇಶ್​ ಹೇಳಿದ್ದಾರೆ.

    ಮಕ್ಕಳ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ರಾ ನಟ ಕೋಮಲ್​? ಸ್ವೆಟರ್​ ಟೆಂಡರ್​ನಲ್ಲಿ ಗೋಲ್​ಮಾಲ್​ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts