More

    ಉದ್ಯೋಗವಾಗುತ್ತಿದೆ ಪ್ರಸ್ತುತ ರಾಜಕಾರಣ

    ಉದ್ಯೋಗವಾಗುತ್ತಿದೆ ಪ್ರಸ್ತುತ ರಾಜಕಾರಣ

    ಗದಗ: ರಾಜ್ಯಕ್ಕೆ ಮರ್ಯುದವಂತ ರಾಜಕಾರಣಿ ಮತ್ತು ರಾಜಕಾರಣ ಅಗತ್ಯವಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಅವರ 98ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಪ್ರಸ್ತುತ ರಾಜಕಾರಣ ಇಂದು ಉದ್ಯೋಗ ಆಗುತ್ತಿದೆ. ಯುವ ರಾಜಕಾರಣಿಗಳು ತತ್ವ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು.

    ಕೆ.ಎಚ್. ಪಾಟೀಲ ಅವಧಿಯ ರಾಜಕಾರಣ ಸ್ಮರಿಸಿದ ಹೊರಟ್ಟಿ, ಪಾಟೀಲರ ಮಾತು ಮತ್ತು ಕೃತಿಗಳು ಇಂದಿಗೂ ಮಾದರಿ. ಅವರ ಮುಂದೆ ಸುಳ್ಳು ಹೇಳಲು ಸಾಧ್ಯವೇ ಇರಲಿಲ್ಲ. ರಾಜಕಾರಣಕ್ಕೆ, ಸ್ನೇಹಕ್ಕೆ ಎಂದಿಗೂ ತೊಡಕು ತಂದುಕೊಂಡವರಲ್ಲ ಎಂದರು.

    ಎಚ್. ಆಂಜನೇಯ ಮಾತನಾಡಿ, ಇಂದು ರಾಜಕೀಯ ಕಲುಷಿತವಾಗಿದೆ. ಪ್ರಾಮಾಣಿಕ ರಾಜಕೀಯ ಮಾಯವಾಗಿದೆ. ಕೆ.ಎಚ್. ಪಾಟೀಲರು ಹಾಕಿಕೊಟ್ಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.

    ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲರು ದಿಟ್ಟ, ನಿರ್ಭಿಡೆಯ ನಾಯಕರಾಗಿದ್ದರು. ನೇರವಾಗಿ ಮಾತನಾಡುವ ಅವರನ್ನು ಹಲವರು ವಿರೋಧಿಸುತ್ತಿದ್ದರು ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಎಚ್.ಕೆ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

    5 ಲಕ್ಷ ನಗದು ಸಹಿತ ಕೆ.ಎಚ್. ಪಾಟೀಲ ಪ್ರಶಸ್ತಿಯನ್ನು ನೇತ್ರತಜ್ಞ ಎಂ.ಎಂ. ಜೋಶಿ ಅವರಿಗೆ ವಿತರಿಸಲಾಯಿತು. ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ, ಎ.ಎಂ. ಹಿಂಡಸಗೇರಿ, ಎಸ್.ಎಸ್. ಪಾಟೀಲ, ಪ್ರಮೋದ ಹೆಗಡೆ, ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟಿಮನಿ, ಜಿ.ಎಸ್. ಗಡ್ಡದೇವರಮಠ, ವಾಸಣ್ಣ ಕುರುಡಗಿ, ಕೊಟ್ರಪ್ಪ ಬಸೇಗಣ್ಣಿ, ಸಿದ್ದು ಪಾಟೀಲ, ವಿದ್ಯಾಧರ ದೊಡ್ಡಮನಿ, ಹುಮಾಯೂನ್ ಮಾಗಡಿ, ಸಚಿನ್ ಪಾಟೀಲ ಹಲವರು ಇದ್ದರು.

    ರಾಹುಲ್ ಹೇಳಿಕೆಗೆ ಸಮರ್ಥನೆ

    ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ರಾಹುಲ್​ಗಾಂಧಿ ಹೇಳಿದ್ದಾರೆ. ಅವರ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಸಮರ್ಥಿಸಿಕೊಂಡರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಶಾಸಕರಿಗೆ ಟಿಕೆಟ್ ಬೇಡ ಎಂದು ಕಾಂಗ್ರೆಸ್ ಹಿರಿಯ ಮುಖಂಡರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಮನವಿ ಸಲ್ಲಿಸಿದ್ದರ ಕುರಿತು ಪ್ರಸ್ತಾಪಿಸಿದರು. ಮಲ್ಲಿಕಾರ್ಜುನ ಖರ್ಗೆಯವರನ್ನು ಎಚ್. ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್ ಭೇಟಿಯಾಗಿ ಕಾಂಗ್ರೆಸ್​ನಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡಿ ಎಂದು ತಿಳಿಸಿದ್ದಾರೆ. 15 ಶಾಸಕರಿಗೆ ಟಿಕೆಟ್ ಕೊಡಬೇಡಿ ಎಂದು ಹೇಳೇ ಇಲ್ಲ. ಇವೆಲ್ಲವೂ ಊಹಾಪೋಹ ಎಂದರು.

    ಕರ್ನಾಟಕದ ಗಡಿ ಭಾಗದ ಗ್ರಾಮಗಳಿಗೆ ಮಹರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ವಿಚಾರ ಕುರಿತು ಮಾತನಾಡಿ, ರಾಷ್ಟ್ರದ ಒಕ್ಕೂಟ ವ್ಯವಸ್ಥೆಯ ವಿರುದ್ಧದ ಈ ಕ್ರಮವನ್ನು ಖಂಡಿಸುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts