More

    ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ನೌಕರರು

    ಬಸವನಬಾಗೇವಾಡಿ: ಏಳನೇ ವೇತನ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನೌಕರರ ಸಂಘ ಹಾಗೂ ವೃಂದ ಸಂಘಗಳು ರಾಜ್ಯಾದ್ಯಂತ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ತಾಲೂಕು ಕಚೇರಿಗಳ, ವಿವಿಧ ಶಾಲೆ ಕಾಲೇಜಿನ ನೌಕರರಿಂದ ಬೆಂಬಲ ವ್ಯಕ್ತವಾಯಿತು.

    ತಹಸೀಲ್ದಾರ್ ಕಚೇರಿ, ತಾಪಂ, ಜಿಪಂ ಪುರಸಭೆ, ತೋಟಗಾರಿಕೆ, ಶಿಶು ಅಭಿವೃದ್ಧಿ, ಕೃಷಿ , ಕಂದಾಯ, ಹೆಸ್ಕಾಂ, ಸರ್ಕಾರಿ ಆಸ್ಪತ್ರೆ, ಶಾಲೆ ಕಾಲೇಜುಗಳು ಸೇರಿ ತಾಲೂಕಿನ ಪಪಂ, ಗ್ರಾಪಂ ಅಧಿಕಾರಿಗಳು ಕರ್ತವ್ಯದಿಂದ ದೂರುಳಿದು ರಾಜ್ಯಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

    ಗ್ರಾಮೀಣ ಭಾಗದಿಂದ ವಿವಿಧ ಕಚೇರಿಗಳ ಕೆಲಸಕ್ಕೆ ಆಗಮಿಸಿದ್ದ ಸಾರ್ವಜನಿಕರು ಮುಷ್ಕರದಿಂದಾಗಿ ತಮ್ಮೂರುಗಳತ್ತ ಮರಳಿದರು.

    ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ಹಲವಾರು ಖಾಲಿ ಹುದ್ದೆಗಳು ಹಾಗೂ ಒತ್ತಡದ ಮಧ್ಯೆದಲ್ಲಿ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನಿತ್ಯ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇಂಥ ಪರಿಸ್ಥಿತಿಯಲ್ಲಿ ನೌಕರರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಆದ್ದರಿಂದ ತಕ್ಷಣ 7ನೇ ವೇತನ ಆಯೋಗ ಜಾರಿಯಾಗಬೇಕು. ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

    ಎಂ.ಬಿ. ತೋಟದ, ಎಂ.ಎಚ್. ಯರಝರಿ, ಎಂ.ಜೆ. ಸಿಕಂದರ್, ಬಸವರಾಜ ಚಿಂಚೋಳಿ, ಚಿದಾನಂದ ಹೂಗಾರ, ಬಸವರಾಜ ದಾನಿ, ಬಿಸ್ಮಾ ಕೋಳಿ, ಎನ್.ಎಂ. ಪಾಟೀಲ, ಮಲ್ಲು ಗಬ್ಬೂರ, ಬಿ.ಎನ್. ಬಡಿಗೇರ, ಮಹಾಂತೇಶ ಬಿರಾದಾರ, ಚಂದ್ರಶೇಖರ ಹದಿಮೂರ, ವಿಠ್ಠಲ ಅಥಣಿ, ಸಿದ್ದು ಬಾಗೇವಾಡಿ, ಬಿ.ಎ. ಮುಜಾವರ, ಎಂ.ಎನ್. ಯಾಳವಾರ, ಎಂ.ಎಸ್. ಅವಟಿ, ಶಿವು ರತ್ನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts