More

  ಬ್ಯಾಂಕ್​ಗಳ ವಿಲೀನ ಕಾರ್ವಿುಕ ವಿರೋಧಿ

  ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಬ್ಯಾಂಕ್​ಗಳ ವಿಲೀನ ನೀತಿ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ(ಎಐಬಿಇಎ)ದ ಆಶ್ರಯದಲ್ಲಿ ಬ್ಯಾಂಕ್ ಉದ್ಯೋಗಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

  ಕೆನರಾ ಬ್ಯಾಂಕ್ ಮುಂಭಾಗ ಬೆಳಗ್ಗೆ ಕರ್ಣಾಟಕ ಬ್ಯಾಂಕ್, ಕಾಪೋರೇಶನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಸೇರಿ ವಿವಿಧ ಬ್ಯಾಂಕ್​ಗಳ ಉದ್ಯೋಗಿಗಳು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿದರು.

  ಪ್ರತಿಭಟನಾಕಾರರನ್ನು ಉದ್ದೇಶಿಸಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ ಮಾತನಾಡಿ, ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆ ಕರೆಯ ಮೇರೆಗೆ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದಾರೆ ಎಂದರು.

  ರಾಜ್ಯದಲ್ಲಿ 80 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರ ಈಗಾಗಲೇ 10 ಬ್ಯಾಂಕ್​ಗಳನ್ನು ವಿಲೀನಗೊಳಿಸಿ ಅವುಗಳನ್ನು ಒಂದು ಬ್ಯಾಂಕ್ ಆಗಿ ಪರಿವರ್ತಿಸಬೇಕೆಂದು ನಿರ್ಧರಿಸಿದೆ. ಇದರ ವಿರುದ್ಧ ಎಐಬಿಇಎ ಮತ್ತು ಅನೇಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಸರ್ಕಾರದ ಈ ನಿರ್ಧಾರ ಅವೈಜ್ಞಾನಿಕ ಎಂದು ದೂರಿದರು.

  ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರದ ನೀತಿಯಿಂದ ನಮ್ಮ ದೇಶದ ಆರ್ಥಿಕತೆಗಾಗಲಿ ಅಥವಾ ಜನತೆಗಾಗಲಿ ಅನುಕೂಲವಾಗುವುದಿಲ್ಲ. ಇದು ಉದ್ಯೋಗಿಗಳ ಕೆಲಸ, ಕೆಲಸದ ಭದ್ರತೆ ಹಾಗೂ ಅವರ ಹಿತಾಸಕ್ತಿಗಳಿಗೆ ಬಾಧಕವಾಗಿದೆ. ಜತೆಗೆ ಬ್ಯಾಂಕ್​ಗಳಲ್ಲಿನ ಉದ್ಯೋಗಾವಕಾಶಗಳಿಗೂ ಕುತ್ತು ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಸಂಘದ ಅಧ್ಯಕ್ಷ ವಿನಯ್ಕುಮಾರ್, ಉಜ್ವಲ್ ಪಡುಬಿದ್ರಿ, ಮಂಜುನಾಥ್, ಬಸವರಾಜ್, ಗಿರೀಶ್, ಅಭಿನಂದನ್, ಕೃಷ್ಣ ಇತರರು ಪ್ರತಿಭಟನೆಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts