ಸಿನಿಮಾ

ಸವಾಲಿನ ನೆಲೆಯಲ್ಲಿ ಮತಗಳಿಗೆ ಬಲೆ: ಬಿಜೆಪಿ ನೆಲೆ ದುರ್ಬಲವಾಗಿರುವ ಕ್ಷೇತ್ರಗಳಿಗೆ ಒತ್ತು

| ಮೃತ್ಯುಂಜಯ ಕಪಗಲ್ ಬೆಂಗಳೂರು

ಕಮಲಪಡೆ ಪಾಳೆಯಕ್ಕೆ ಸವಾಲಿನ ನೆಲೆಗಳೆಂದು ಬಿಂಬಿತ ಹಳೇ ಮೈಸೂರು ಹಾಗೂ ಕರ್ನಾಟಕ ಪ್ರಾಂತಗಳಲ್ಲಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ ಮಿಂಚಿನ ಸಂಚಾರ ಮಾಡಿ ಉತ್ತಮ ‘ಮತ ಫಸಲು’ ತೆಗೆಯುವ ಕಸರತ್ತು ನಡೆಸಿದರು.

ಪಕ್ಷದ ಸಂಘಟನೆಗಳ ಬೇರುಗಳು ಆಳವಾಗಿ ಬೇರೂರದ, ಮತಗಳಾಗಿ ಪರಿವರ್ತಿಸಲು ಶಕ್ತವಿಲ್ಲ ಎನ್ನಲಾಗುತ್ತಿರುವ ಪ್ರದೇಶಕ್ಕೆ ಬಿಜೆಪಿ ವರಿಷ್ಠರು ಹೆಚ್ಚಿನ ಒತ್ತು ನೀಡಿದ್ದು ಗಮನಾರ್ಹ.

ಕೋಲಾರ, ಜೆಡಿಎಸ್ ಬಾಹುಳ್ಯದ ಚನ್ನಪಟ್ಟಣ, ಬೇಲೂರಿನಲ್ಲಿ ಮೋದಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಯೋಗಿ ಆದಿತ್ಯನಾಥ್ ಭಾನುವಾರ ಒಂದೇ ದಿನ ಕಲ್ಯಾಣ ಕರ್ನಾಟಕದ ಗಂಗಾವತಿ, ರಾಯಚೂರು, ವಾಡಿ, ಆಳಂದ ಮತ್ತು ಬೀದರ್​ನಲ್ಲಿ ವಿದ್ಯುತ್ ವೇಗದ ಸಂಚಾರ, ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಗುಡುಗಿದರು. ಕಾಂಗ್ರೆಸ್ ಬಾಹುಳ್ಯದ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತದರ ಹಿರಿಯ ನಾಯಕರ ಮೇಲೆ ವಾಗ್ದಾಳಿ ನಡೆಸಿದರು. ಅಭಿವೃದ್ಧಿ, ನಿಷ್ಠೂರ ಆಡಳಿತ, ಮೋದಿಯವರ ದೂರದೃಷ್ಟಿ ವಿಷಯಗಳನ್ನು ಮುಂದಿಡುತ್ತಲೇ ಅಯೋಧ್ಯೆ ರಾಮಮಂದಿರ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಪ್ರಸ್ತಾಪಿಸಿ ಹಿಂದುತ್ವ ವಿಚಾರದ ಕೋಲ್ಮಿಂಚು ಹರಿಸಿದರು. ಕಲ್ಯಾಣ ಕರ್ನಾಟಕದ ಹಿಂದುಳಿದಿರುವಿಕೆಗೆ ಕಾಂಗ್ರೆಸ್​ನತ್ತ ಬೊಟ್ಟು ಮಾಡಿ ತೋರಿಸಿದ ಯೋಗಿ, ಉದ್ಯೋಗ ಆಧಾರಿತ ಶಿಕ್ಷಣ, ರಾಷ್ಟ್ರೀಯ ನೂತನ ಶಿಕ್ಷಣ ವಿಶೇಷತೆ ಬಗ್ಗೆಯೂ ಗಮನಸೆಳೆದರು. ಮತ್ತೊಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ದಾವಣಗೆರೆ ನಂದಿಗುಡಿ ಮಠಕ್ಕೆ ಭೇಟಿ, ಹೊನ್ನಾಳಿ, ಕುಂದಾಪುರ, ಸುಳ್ಯದಲ್ಲಿ ಕಾರ್ಯಕರ್ತರ ಮನೆಗೆ ಭೇಟಿ, ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆ ಸಾರ್ವಜನಿಕ ಸಭೆ, ರೋಡ್ ಶೋಗಳಲ್ಲಿ ಪಾಲ್ಗೊಂಡು ‘ಡಬಲ್ ಇಂಜಿನ್ ಸರ್ಕಾರ’ಕ್ಕೆ ಜನರ ಬೆಂಬಲ ಯಾಚಿಸಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೊಸನಗರ, ಬದಾಮಿ, ಸಾವಳಗಿ, ಬೀಳಗಿ ಮತ್ತು ಉಪ್ಪಿನಬೇಟಗೇರಿಯಲ್ಲಿ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ, ರಾಜ್ಯ ಸರ್ಕಾರದ ಸಾಧನೆ, ಕೊಡುಗೆಗಳನ್ನು ವಿವರಿಸಿ, ಮತ್ತೊಮ್ಮೆ ಬಿಜೆಪಿಗೆ ನಿಚ್ಚಳ ಬಹುಮತ ನೀಡಬೇಕು ಎಂದು ಮನವಿ ಮಾಡಿದರು.

ಹಾಗೆಯೇ, ಭಾಷಣ ಕೇಳಿದ ನಂತರ ಮನೆಗೆ ಹೋಗಿ ಮರೆಯದೇ ನನ್ನದೊಂದು ವೈಯಕ್ತಿಕ ಕೆಲಸ ನೀವು (ಜನರು)ಮಾಡಿಕೊಡಿ. (ಈ ವೇಳೆ ಮೋದಿ ಹೇಳಿದಂತೆ ನೆರೆದ ಜನಸ್ತೋಮ ಒಂದೇ ಸಲಕ್ಕೆ ಕೈಎತ್ತಿ, ಮೊಬೈಲ್ ಫ್ಲ್ಯಾಷ್ ಲೈಟ್ ಬೆಳಗಿಸಿ ಸಮ್ಮತಿಸಿತು). ಪ್ರತಿ ಬೂತ್​ನ ಪ್ರತಿ ಮನೆಗೆ ಹೋಗಿ ಪ್ರಧಾನ ಸೇವಕ ಮೋದಿ ಬಂದಿದ್ದ, ನಿಮಗೆ ನಮಸ್ಕಾರ ತಿಳಿಸಿದ ಎಂದು ಹೇಳಿ ಅವರ ಆಶೀರ್ವಾದ ಪಡೆಯಿರಿ. ಆಶೀರ್ವಾದದ ಬಲವು ಜನಪರ ಇನ್ನಷ್ಟು ಕೆಲಸ ಮಾಡುವುದಕ್ಕೆ ಶಕ್ತಿ ತುಂಬುತ್ತದೆ ಎಂಬ ಮೋದಿ ಮಾತು ಜನರೊಂದಿಗೆ ಸಂವಾದ ರೂಪದಲ್ಲಿ ಬೆಳಗಿದ್ದು ವಿಶೇಷವಾಗಿತ್ತು.

ಬಿಜೆಪಿಯ ಚುನಾವಣಾ ಪ್ರಚಾರಸಭೆಗಳಿಗೆ ಹರಿದುಬರುತ್ತಿರುವ ಜನಸಾಗರ, ರೋಡ್​ಶೋಗಳಿಗೆ ದೊರೆಯುತ್ತಿರುವ ಜನಸ್ಪಂದನೆಯಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಿದ್ದೆ ಹಾರಿಹೋಗಿದೆ. ಸ್ಥಿರ ಸರ್ಕಾರ, ಡಬಲ್ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಲು ಕರ್ನಾಟಕದ ಜನರು ತೀರ್ವನಿಸಿಯಾಗಿದೆ.

| ನರೇಂದ್ರ ಮೋದಿ ಪ್ರಧಾನಿ (ಕೋಲಾರ, ಚನ್ನಪಟ್ಟಣ, ಬೇಲೂರು ಸಾರ್ವಜನಿಕ ಸಭೆಗಳಲ್ಲಿ ಹೇಳಿದ್ದು)

ಭಾರಿ ಮಳೆ: ಹಳ್ಳ ದಾಟುತ್ತಿದ್ದ ತಾಯಿ ಜತೆ ಇಬ್ಬರು ಮಕ್ಕಳೂ ನೀರುಪಾಲು

Latest Posts

ಲೈಫ್‌ಸ್ಟೈಲ್