More

    ಆಧ್ಯಾತ್ಮಿಕತೆ ಭಾವ ಮೈಗೂಡಿಸಿಕೊಳ್ಳಿ

    ಮೈಸೂರು: ಯುವಜನತೆ ಉದ್ಯೋಗದೊಂದಿಗೆ ಆಧ್ಯಾತ್ಮಿಕತೆ ಅನುಭವ ಮೈಗೂಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


    ಹೆಬ್ಬಾಳಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಒಕ್ಕಲಿಗ ಆರಕ್ಷಕರ ಸೇವಾ ಟ್ರಸ್ಟ್‌ನ ಉದ್ಘಾಟನೆ, ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಭವಿಷ್ಯದಲ್ಲಿ ಹಣ ದೊರೆಯುತ್ತದೆ. ಆದರೆ, ಉದ್ಯೋಗ ಸಿಗಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಯಂತ್ರ ಬಳಕೆ ಅಧಿಕವಾಗಲಿದೆ. ಕೆಲಸವಿಲ್ಲದ ಮನಸ್ಸು ದೆವ್ವದ ಮನೆ ಇದ್ದಂತೆ. ಆದ್ದರಿಂದ 60 ವರ್ಷದ ನಂತರ ಜೀವನ ಹೇಗೆ ಕಳೆಯಬೇಕು ಎಂಬುದರ ಬಗ್ಗೆ ಈಗಲೇ ಆಲೋಚಿಸಬೇಕು. ಅದಕ್ಕಾಗಿ ಆಧ್ಯಾತ್ಮಿಕತೆಯ ಅನುಭವ ರೂಢಿಸಿಕೊಳ್ಳಬೇಕು ಎಂದು ಹೇಳಿದರು.


    ರಾಜ್ಯದಲ್ಲಿ ಸಾಕಷ್ಟು ಒಕ್ಕಲಿಗ ಸಂಘಟನೆಗಳಿವೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಿಕ್ಷಕರು, ವೈದ್ಯರು, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ವಕೀಲರು, ರೈತರು ಸೇರಿದಂತೆ ವಿವಿಧ ವೃತ್ತಿಯಲ್ಲಿರುವ ಸಮುದಾಯದವರು ಪ್ರತ್ಯೇಕವಾಗಿ ಸಂಘ ರಚಿಸಿಕೊಳ್ಳಬೇಕು. ಇದರಿಂದ ಒಕ್ಕಲಿಗ ಸಮುದಾಯವನ್ನು ಸಂಘಟಿಸುವ ಕಾರ್ಯವಾಗಲಿದೆ ಎಂದರು.


    ನಿವೃತ್ತ ಪೊಲೀಸ್ ಅಧಿಕಾರಿಗಳಾದ ಸಣ್ಣೇಗೌಡ, ಹನುಮಪ್ಪ, ಕಾಳೇಗೌಡ, ಮೈಸೂರು- ಚಾಮರಾಜನಗರ ಪೊಲೀಸ್ ಕ್ರೆಡಿಟ್ ಸೊಸೈಟಿ ನೂತನ ನಿರ್ದೇಶಕರಾದ ಧನಂಜಯ, ಎಂ.ಜಿ.ರಘು, ಚೇತನ್, ವಿದ್ಯಾರಾಣಿ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಪದವಿ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರಮೋದಿನಿ, ಎಂ.ಆರ್.ರಮ್ಯಾ, ಟಿ.ಕೆ.ಕುಸುಮಾ, ಪ್ರಫುಲ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು.


    ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಟ್ರಸ್ಟ್ ಮಹಾಪೋಷಕ ಕೆ.ಟಿ.ಬಾಲಕೃಷ್ಣ, ಪದಾಧಿಕಾರಿಗಳಾದ ಬಿ.ಪಿ.ಸುರೇಶ್, ಶಂಕರೇಗೌಡ, ಟಿ.ಎನ್.ನಾಗೇಶ್, ಉಪಾಧ್ಯಕ್ಷ ಟಿ.ಚಲುವೇಗೌಡ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts