More

    ಕೆನಡಾದಲ್ಲಿ ಜಸ್ಟಿನ್ ಟ್ರುಡೊ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ: ಎಲೋನ್ ಮಸ್ಕ್

    ಸ್ಯಾನ್​ ಪ್ರಾನ್ಸಿಸ್ಕೋ: ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಜನರ ಸ್ವಾತಂತ್ರ್ಯ ಹತ್ತಿಕ್ಕಲು ಮುಂದಾಗಿದ್ದಾರೆ ಎಂದು ಜಗತ್ತಿನ ದೊಡ್ಡ ಶ್ರೀಮಂತ ಸ್ಪೇಸ್‌ಎಕ್ಸ್ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಆರೋಪಿಸಿದ್ದಾರೆ.

    ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ನಿಯಂತ್ರಣಕ್ಕೆ ಕೆನಡಾ ಸರ್ಕಾರ ಇತ್ತೀಚೆಗೆ ಹೊಸ ಕಾಯ್ದೆ ಜಾರಿಗೊಳಿಸಿದ್ದು, ಅದರಂತೆ ಸ್ಟ್ರೀಮಿಂಗ್ ಪ್ಲಾಟ್​ಫಾಮ್ಸ್​ ಸರ್ಕಾರದಲ್ಲಿ ತಪ್ಪದೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದು ಆನ್​ಲೈನ್​ ಸ್ಟ್ರೀಮಿಂಗ್​ ಸೇವೆಗಳ ಮೇಲೆ ನಿಯಂತ್ರಣ ಹೇರುತ್ತದೆ. ಈ ಹಿನ್ನೆಲೆಯಲ್ಲಿ ಮಸ್ಕ್​ ಆರೋಪಿಸಿದ್ದಾರೆ ಎನ್ನಲಾಗುತ್ತಿದೆ.

    ಈ ನಿಬಂಧನೆಗಳ ಕುರಿತು ಪತ್ರಕರ್ತ ಗ್ಲೆನ್ ಗ್ರೀನ್‌ವಾಲ್ಡ್ ಅವರ ಪೋಸ್ಟ್‌ಗೆ ಮಸ್ಕ್ ಎಕ್ಸ್​ ಮೂಲಕವೇ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ಈ ನಿರ್ದಾರ ವಾಕ್​ ಸ್ವಾತಂತ್ರ್ಯದ ಮೆಲೆ ನಿರ್ಬಂಧ ಹೇರುವುದಾಗಿದೆ. ಇದು ನಾಚಿಕೆಗೇಡಿನ ತೀರ್ಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಟ್ರುಡೊ ಸರ್ಕಾರ ಕೆನಡಾದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬ ಅರೋಪ ಕೇಳಿ ಬರುತ್ತಿರುವುದು ಇದು ಮೊದಲಲ್ಲ.
    ಫೆಬ್ರವರಿ 2022 ರಲ್ಲಿ ಟ್ರಕ್​ ಚಾಲಕರು ಪ್ರತಿಭಟನೆಗೆ ಇಳಿದಿದ್ದರು. ಇದನ್ನು ಹತ್ತಿಕ್ಕಲು ಟ್ರುಡೊ ಅಧಿಕಾರ ಬಳಸಿ ಅತ್ಯಗತ್ಯ ಸೇವೆಗಳ ಅಧಿಕಾರ ವ್ಯಾಪ್ತಿಗೆ ಸರಕು ಸಾಗಾಣಿಕೆ ಸೇವೆಗಳನ್ನು ತಂದು ತೀವ್ರ ವಿರೋಧ ಎದುರಿಸಿದ್ದರು.

    ಇತ್ತೀಚೆಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿ 2 ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts