More

    ನಗೆಯುಕ್ಕಿಸುವಂತಿದೆ ಆನೆಯ ಸೋಷಿಯಲ್ ಡಿಸ್ಟೆನ್ಸಿಂಗ್ ಟೆಕ್ನಿಕ್

    ದಂಡಂ ದಶಗುಣಂ ಎಂಬುದು ಚರ್ಚೆ ವಿಷಯವಾದಾಗ ಮೊದಲು ಕಣ್ಮುಂದೆ ಬರುವ ಮೂಲಭೂತ ಅಸ್ತ್ರವೆಂದರೆ ಬೆತ್ತ, ದೊಣ್ಣೆ, ಲಾಠಿ ಅಥವಾ ಮರದ ಕೊಂಬೆ.
    ಹಠ ಮಾಡುವ ಮಗುವನ್ನು ಬೆದರಿಸಲು ಪಾಲಕರಿಗೆ ಅಥವಾ ಅಪರಾಧಿಯ ಬಾಯಿ ಬಿಡಿಸಲು ಪೊಲೀಸರಿಗೆ ಸಹಾಯವಾಗುವ ಪ್ರಮುಖ ಅಸ್ತ್ರವೆಂದರೆ ಲಾಠಿ.
    ಈ ಪರಿಕಲ್ಪನೆ ಪ್ರಾಣಿಗಳಲ್ಲೂ ಇದೆ ಎಂದರೆ ಅಚ್ಚರಿಯಾಗುತ್ತದಲ್ಲವೆ? ಅದಕ್ಕೊಂದು ಉದಾಹರಣೆ ಇಲ್ಲಿದೆ. ನೋಡಿ.
    ಅರಣ್ಯದಲ್ಲಿ ಆನೆಯೊಂದು ಖಡ್ಗಮೃಗವನ್ನು ಓಡಿಸಲು ಮರದ ಕೊಂಬೆಯನ್ನು ಬಳಸಿದೆ. ಖಡ್ಗಮೃಗವನ್ನು ದಂಡಿಸಲು ಈ ದಂಡವನ್ನು ಅಸ್ತ್ರವಾಗಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೋಡುಗರ ಮೊಗದಲ್ಲಿ ನಗೆಯುಕ್ಕಿಸುತ್ತಿದೆ.

    ಇದನ್ನೂ ಓದಿ:  ಅಪಹರಣಕಾರರಿಂದ ಮಗುವನ್ನು ರಕ್ಷಿಸಿದರೂ ಕರೊನಾ ತೆಕ್ಕೆಯಿಂದ ಕಾಪಾಡಲಾಗಲಿಲ್ಲ..! 

    ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಆನೆ ಕೋಪಗೊಂಡು ಖಡ್ಗಮೃಗವನ್ನು ದೂರ ಕಳುಹಿಸಲು ಮರದ ಕೊಂಬೆಯನ್ನು ಅಸ್ತ್ರವಾಗಿ ಬಳಸಿದೆ. ನನ್ನಿಂದ ದೂರ ಹೋಗು, ಇಲ್ಲದಿದ್ದರೆ ಈ ಮರದ ಕೊಂಬೆಯಂತೆ ನಿನ್ನನ್ನೂ ಆಚೆ ಎಸೆಯುತ್ತೇನೆ” ಎಂದು ಸ್ಪಷ್ಟ ಸಂದೇಶವನ್ನು ಖಡ್ಗಮೃಗಕ್ಕೆ ನೀಡಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
    ಸಾವಿರಾರು ಜನ ಈ ವಿಡಿಯೋ ವೀಕ್ಷಿಸಿದ್ದು ಭರ್ಜರಿ ವೈರಲ್ ಆಗುತ್ತಿದೆ.. ಈ ವಿಡಿಯೋ ವನ್ಯಜೀವಿ ಪ್ರಿಯರನ್ನು ಆಕರ್ಷಿಸಿದೆ. ಕೋವಿಡ್ -19 ಕಾಯಿಲೆಯ ಈ ಸಂದರ್ಭದಲ್ಲಿ ಖಡ್ಗಮೃಗಕ್ಕೆ ಆನೆ ಸೋಷಿಯಲ್ ಡಿಸ್ಟನ್ಸಿಂಗ್ ಪಾಠ ಹೇಳಿಕೊಡುತ್ತಿರುವಂತಿದೆ. ಆನೆ ಬುದ್ಧಿವಂತಿಕೆ ಮೆಚ್ಚಿಕೊಂಡವರು, ತಮಾಷೆಯಾಗಿ ತೆಗೆದುಕೊಂಡವರು ಹೀಗೆ ಎಲ್ಲ ಕಮೆಂಟ್​​ಗಳ ಸುರಿಮಳೆಯೇ ಆಗುತ್ತಿದೆ.

    ಹೃದಯಸ್ಪರ್ಶಿ ದೃಶ್ಯವೆಂದ ನೆಟ್ಟಿಗರು: ಅಂಥದ್ದೇನಿತ್ತು ಆ ವಿಡಿಯೋದಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts