More

  PHOTOS: ಕಳವು ಮಾಡಲೆಂದು 5 ಅಡಿ ಎತ್ತರದ ಗೋಡೆಯನ್ನು ಎಚ್ಚರಿಕೆಯಿಂದ ದಾಟಿದ ಆನೆ…! ಅಷ್ಟಕ್ಕೂ ಅದು ಏನು ಕಳ್ಳತನ ಮಾಡಲು ಬಂದಿತ್ತು ಗೊತ್ತ?

  ಈ ಆನೆ ಕಳ್ಳತನ ಮಾಡಿದೆ. ಕಳವು ಮಾಡುವುದಕ್ಕಾಗಿ ಬರೋಬ್ಬರಿ 5 ಫೂಟ್​ ಎತ್ತರದ ಗೋಡೆಯನ್ನು ತುಂಬ ಎಚ್ಚರಿಕೆಯಿಂದ ದಾಟಿದೆ…!

  ಜಾಂಬಿಯಾದ ದಕ್ಷಿಣ ಲುವಾಂಗ್ವಾ ರಾಷ್ಟ್ರೀಯ ಉದ್ಯಾನದ ಫ್ಮೂವೆ ಸಫಾರಿ ಲಾಡ್ಜ್​ನಲ್ಲಿ ಆನೆಯೊಂದು 5 ಅಡಿ ಎತ್ತರದ ಗೋಡೆ ದಾಟಿ ಹೋದ ವಿಡಿಯೋ, ಫೋಟೋಗಳು ಸಿಕ್ಕಾಪಟೆ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.
  ಫ್ಮೂವೆ ಸಫಾರಿ ಲಾಡ್ಜ್​ನಿಂದ ಶನಿವಾರ ಮಧ್ಯಾಹ್ನ ಸಫಾರಿಗೆ ಒಂದಷ್ಟು ಜನರು ತೆರಳಿದ್ದರು. ಅವರೆಲ್ಲ ಆ ಕಡೆ ಹೋಗುತ್ತಿದ್ದಂತೆ ನ್ಯಾಷನಲ್​ ಪಾರ್ಕ್​ನಲ್ಲಿ ಇದ್ದ ಆನೆ ನಿಧಾನಕ್ಕೆ ಈ ಕಡೆ ಬಂತು. ಅಷ್ಟಕ್ಕೂ ಆನೆ ಸಫಾರಿ ಲಾಡ್ಜ್​ಗೆ ಅಷ್ಟು ಹರಸಾಹಸ ಮಾಡಿ ಹೋಗಿದ್ದು ಮಾವಿನಹಣ್ಣುಗಳಿಗಾಗಿ…!

  5 ಅಡಿ ಎತ್ತರದ ಗೋಡೆಯನ್ನೂ ಕೆಡುವಬಾರದು, ತಾನೂ ಬೀಳಬಾರದು ಎಂಬ ರೀತಿ ಆನೆ ಕಟ್ಟೆಚ್ಚರಿಂದ ಆ ಕಾಂಪೌಂಡ್​ನ್ನು ದಾಟುತ್ತಿರುವ ಫೋಟೋಗಳನ್ನು ಅಲ್ಲಿಯೇ ಇದ್ದ ಲಾಡ್ಜ್​ನ ಜನರಲ್ ಮ್ಯಾನೇಜರ್​ ಇಯಾನ್ ಸಾಲಿಸ್‌ಬರಿ ಸೆರೆ ಹಿಡಿದಿದ್ದಾರೆ. ಪಕ್ಕಾ ಮನುಷ್ಯರಂತೆಯೇ ಗೋಡೆಯನ್ನು ಆನೆ ದಾಟಿದೆ.

  ಬಳಿಕ ಆನೆ ಲಾಡ್ಜ್​ ಬಳಿ ಅಲೆದಾಡುತ್ತ, ಮಾವಿನ ಹಣ್ಣಿಗಾಗಿ ಹುಡುಕಾಡುವುದನ್ನು ಲಾಡ್ಜ್​ ಮಾಲೀಕ, ಎಂಡಿ ಆ್ಯಂಡಿ ಹಾಗ್​ ಸೆರೆ ಹಿಡಿದಿದ್ದಾರೆ. ಆದರೆ ಕೊನೆಗೂ ಅದಕ್ಕೆ ಹಣ್ಣುಗಳು ಸಿಗಲೇ ಇಲ್ಲ.

  ಮಾವಿನಹಣ್ಣಿನ ಸೀಸನ್​ನಲ್ಲಿ ಆನೆಗಳು ಇಲ್ಲಿಗೆ ಬರುವುದು ಸಾಮಾನ್ಯ. ಆದರೆ ಈ ಆನೆ ತುಂಬ ತಡಮಾಡಿಬಿಟ್ಟಿದೆ ಎಂದು ಅಲ್ಲಿನ ಜನರಲ್​ ಮ್ಯಾನೇಜರ್​ ಹೇಳಿದ್ದಾರೆ.(ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts