More

    ಕಾಣೆಯಾದ ಹಸು ಹುಡುಕಿಕೊಂಡು ಹೋದ ರೈತನಿಗಾಗಿ ಕಾಡಲ್ಲಿ ಕಾದಿದ್ದ ಜವರಾಯ!

    ಬೆಂಗಳೂರು: ಆತ ಕಾಡಂಚಿನ ಗ್ರಾಮದ ಬಡ ರೈತ, ಹಸುಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದ. ತಾನು ಸಾಕಿದ್ದ ಹಸುವೊಂದು ಕಾಣದೆ ಹೋದಾಗ ಕಾಡಂಚಿಗೆ ಹುಡುಕಿಕೊಂಡು ಹೋಗಿದ್ದ. ಈ ವೇಳೆ ಕಾಡಾನೆಯ ದಾಳಿಗೆ ತುತ್ತಾಗಿ ರೈತ ಸಾವಿಗೀಡಾಗಿದ್ದಾನೆ.

    ಮೃತ ರೈತನ ಹೆಸರು ಅಲಗಪ್ಪ (50). ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಸೊಳ್ಳೆಪುರ ದೊಡ್ಡಿ ಬಳಿ ಈ ಘಟನೆ ನಡೆದಿದೆ. ಸೊಳ್ಳೆಪುರ ದೊಡ್ಡಿ ಗ್ರಾಮದ ನಿವಾಸಿ ಅಲಗಪ್ಪ ಪ್ರತಿ ದಿನ ಬೆಳಗ್ಗೆ ಹಸುಗಳನ್ನು ಮೇಯಿಸಲು ಕಾಡಂಚಿಗೆ ಹೋಗುತ್ತಿದ್ದ. ಕಳೆದ ಮೂರು ದಿನದ ಹಿಂದೆ ಅಲಗಪ್ಪ ಎಂದಿನಂತೆ ಜಾನುವಾರುಗಳನ್ನ ಮೇಯಿಸಲು ಹೋಗಿದ್ದಾಗ ಹಸುವೊಂದು ಕಾಣೆಯಾಗಿದ್ದು, ಹುಡುಕಿಕೊಂಡು ಕಾಡಿನ ಸಮೀಪ ಹೋಗಿದ್ದಾನೆ. ಈ ವೇಳೆ ಕಾಡಾನೆ ದಾಳಿಗೆ ತುತ್ತಾಗಿ ಸ್ಥಳದಲ್ಲಿಯೇ ರೈತ ಅಲಗಪ್ಪ ಸಾವಿಗೀಡಾಗಿದ್ದಾನೆ.

    ಇದನ್ನೂ ಓದಿ: ಗೃಹ ಸಚಿವರ ಬೆಂಗಾವಲು​ ವಾಹನ ಡಿಕ್ಕಿ, ಬೈಕ್ ಸವಾರ ಸಾವು; ಅಪಘಾತದ ಬಗ್ಗೆ ತಿಳಿದೂ ಹಾಗೇ ಹೋದ್ರಾ ಹೋಂ​ ಮಿನಿಸ್ಟರ್​?

    ದನಕರುಗಳನ್ನು ಮೇಯಿಸಲು ಹೋದ ಅಲಗಪ್ಪ ಮನೆಗೆ ಬಾರದೆ ಇದ್ದಾಗ ಎಲ್ಲೆಡೆ ಕುಟುಂಬಸ್ಥರು ಹುಡುಕಾಟ ನಡೆಸಿದ್ರು ಪತ್ತೆಯಾಗಿರಲಿಲ್ಲ. ನಿನ್ನೆ (ಮಾ.1) ಹಾರೋಹಲ್ಲಿ ಬೀಟ್ ಗುಲ್ಲೆಟ್ಟಿ ಕಾವಲ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮೃತದೇಹ ಪತ್ತೆಯಾಗಿದ್ದು, ಬನ್ನೇರುಘಟ್ಟ ಪೋಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

    ಎರಡು ದಿನಗಳಿಂದ ಕಾಣೆಯಾಗಿದ್ದ ಅಲಗಪ್ಪ ಎಲ್ಲಿಯೋ ಹೋಗಿರಬಹುದು ಎಂದು ಕುಟುಂಬಸ್ಥರು ಹುಡುಕಾಡಿದ್ದರು. ಆದ್ರೆ ಅಲಗಪ್ಪ ಸಾವಿನ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬನ್ನೇರುಘಟ್ಟ ಪೋಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಬನ್ನೇರುಘಟ್ಟ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೂ ರೈತ ಅಲಗಪ್ಪ ಸಾವಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾನಂದ- ಅಸಲಿ ಕಥೆ ಏನು ಗೊತ್ತಾ?

    ಎಲಾನ್​ ಮಸ್ಕ್ ಮತ್ತೆ ನಂ.1 ಶ್ರೀಮಂತ: ಗೌತಮ್ ಅದಾನಿಗೆ ಎಷ್ಟೇ ಸ್ಥಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts