More

    ವಿದ್ಯುತ್ ಮಿತವ್ಯಯ ನೆಪ ಬೆಳಕಿನಿಂದ ಕತ್ತಲಿನೆಡೆಗೆ ಬೀರೂರು

    ಬೀರೂರು: ಪುರಸಭೆ ವಿದ್ಯುತ್ ಮಿತವ್ಯಯ ಹಾಗೂ ಹಣ ಉಳಿತಾಯದ ನೆಪದಲ್ಲಿ ಪಟ್ಟಣವನ್ನು ಕತ್ತಲಿನೆಡೆಗೆ ದೂಡುತ್ತಿದೆ.
    ಸರ್ಕಾರದ ಕೇಂದ್ರೀಕತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್) ಎಂಬ ಯೋಜನೆಯಲ್ಲಿ ವಿದ್ಯುತ್ ಪ್ರತಿ ಕಂಬಕ್ಕೂ ಹೊಸ ಮಾದರಿಯ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ. ಪಟ್ಟಣದಾದ್ಯಂತ ಇರುವ ಟ್ಯೂಬ್‌ಲೈಟ್, ಸೋಡಿಯಂ ಲೈಟ್, ಹೈಮಾಸ್ಟ್ ಮತ್ತು ಎಲ್‌ಇಡಿ ಲೈಟ್‌ಗಳನ್ನು ಸಿಸಿಎಂಎಸ್ ಯೋಜನೆಯಡಿ ದೀಪಗಳನ್ನು ಬದಲಾಯಿಸಲಾಗುತ್ತಿದೆ. ಪಟ್ಟಣದಲ್ಲಿ 1500 ವಿದ್ಯುತ್ ಕಂಬಗಳಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸುವ ಕಾರ್ಯಕ್ರಮ ಇದಾಗಿದ್ದು, ಆಯಾ ವಾರ್ಡ್‌ಗಳಿಗೆ ಸಂಬಂಧಿಸಿದಂತೆ 20 ವ್ಯಾಟ್‌ನಿಂದ ಗರಿಷ್ಠ 120 ವ್ಯಾಟ್ ಸಾಮರ್ಥ್ಯದ ದೀಪಗಳನ್ನು ಅಳವಡಿಸಲಾಗುತ್ತಿದೆ. ಕೆಲ ವಾರ್ಡ್‌ಗಳಲ್ಲಿ 20 ವ್ಯಾಟ್ ದೀಪಗಳ ಅಳವಡಿಕೆ ಮುಗಿದಿದ್ದು, ಆ ದೀಪಗಳು ಸರಿಯಾದ ಬೆಳಕು ಚೆಲ್ಲದೆ ಕಂಬಗಳ ಕೆಳಭಾಗದಲ್ಲಿ ಮಾತ್ರ ಬೆಳಕು ಕಾಣುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕತ್ತಲು ಆವರಿಸುತ್ತಿದೆ. ಇದರಿಂದ ರಾತ್ರಿ ವೇಳೆ ಸಂಚಾರ ಕಷ್ಟವಾಗಿದೆ.
    ಉತ್ತಮವಾಗಿ ಬೆಳಕು ನೀಡುತ್ತಿದ್ದ ಬೀದಿ ದೀಪಗಳನ್ನು ಬದಲಿಸಿ ಹಣ ಉಳಿತಾಯ ಮಾಡಲು ಪಟ್ಟಣವನ್ನು ಕತ್ತಲಿಗೆ ದೂಡುತ್ತಿರುವುದು ವಿಪರ್ಯಾಸ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts